ನವದೆಹಲಿ, ಏಪ್ರಿಲ್ 30: ಬಾಗೇಶ್ವರ ಧಾಮದ ಪ್ರಧಾನ ಅರ್ಚಕ ಧೀರೇಂದ್ರ ಕುಮಾರ್ ಶಾಸ್ತ್ರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಹಿಳೆಯರು ಅದರಲ್ಲೂ ಶ್ರೀಮಂತ ಕುಟುಂಬದ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದಾರೆ. ಉನ್ನತ ವರ್ಗದ ಮಹಿಳೆಯರು ಆಲ್ಕೋಹಾಲ್ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಕುಟುಂಬಗಳ ಮಹಿಳೆಯರು ಮದ್ಯ ಸೇವಿಸುತ್ತಿದ್ದಾರೆ. ಇದು ಸಮಾಜದ ಮೌಲ್ಯಗಳು ಮತ್ತು ರೂಢಿಗಳ ಮೇಲೆ ಪರಿಣಾಮ ಬೀರುತ್ತಿದೆ. ಮದ್ಯಪಾನ ಮಾಡುವ ಮಹಿಳೆಯರು ಮದುವೆಯಾಗಿ ಮಕ್ಕಳನ್ನು ಹೆತ್ತ ಮೇಲೆ ಮಗು ಅಳುತ್ತಿದ್ದರೆ ಅವರನ್ನು ಸುಮ್ಮನಾಗಿಸಲು ಅವರಿಗೆ ಆಲ್ಕೋಹಾಲ್ ಕುಡಿಸುತ್ತಾರೆ ಎಂದು ತಮ್ಮ ಭಾಷಣದಲ್ಲಿ ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
