ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ! – Kannada News | Madikeri Landslide: Garbage Dump Collapses at Stone Hill, Threatens Police Quarters

ಮಡಿಕೇರಿ, ಆಗಸ್ಟ್ 10: ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸದ ರಾಶಿ ಕೆಳಭಾಗಕ್ಕೆ ಕೊಚ್ಚಿಹೋಗಿದೆ. ಬೆಟ್ಟದ ತುದಿಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ಬೆಟ್ಟದ ತಪ್ಪಲಿನಲ್ಲಿಯೇ ಪೊಲೀಸ್ ವಸತಿ ಗೃಹಗಳಿದ್ದು, ಕಸದ ರಾಶಿ ಹಾಗೂ ಮಣ್ಣು ವಸತಿ ಸಮುಚ್ಚಯದತ್ತ ಧಾವಿಸುತ್ತಿರುವುದರಿಂದ ನಿವಾಸಿಗಳಲ್ಲಿ ತೀವ್ರ ಆತಂಕ ಎದುರಾಗಿದೆ. ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ ಈ ಕುರಿತು ಮಾತನಾಡಿ, ತಕ್ಷಣವೇ ಕಸ ತೆರವುಗೊಳಿಸಿ ಸುರಕ್ಷಿತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅಪಾಯ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಘಟನೆಯ ಕುರಿತು ನಮ್ಮ ಪ್ರತಿನಿಧಿ ಗೋಪಾಲ್ ಸೋಮಯ್ಯ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *