ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ Image Credit source: ceo_karnataka X Account
ಬೆಂಗಳೂರು, ಆಗಸ್ಟ್ 05: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಸ್ಟ್ 8ರ ವರೆಗೂ ನಡೆಯಲಿದ್ದು, ಈಗಾಗಲೇ 5,54,32,314 ಎನ್ಯುಮರೇಷನ್ ಫಾರ್ಮ್ ಕೊಡಲಾಗಿದೆ. ಅದರಲ್ಲಿ 4,43,04,632 ಸಾವಿರ ಅರ್ಜಿಗಳು ಡಿಜಿಟಲೈಜೇಷನ್ ಆಗಿವೆ. 16,30,012ರಷ್ಟು ಮತದಾರರು ಪತ್ತೆಯಾಗಿಲ್ಲ. ರಾಜ್ಯದಲ್ಲಿ ASDDO (ಆಬ್ಸೆಂಟ್, ಶಿಫ್ಟ್, ಡೆತ್, ಡೂಪ್ಲಿಕೇಟ್ & ಇತರರು) 1,11,04,705 ಮತದಾರರು ಪತ್ತೆಯಾಗಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. 66,64,943 ಮತದಾರರು ಶಾಶ್ವತವಾಗಿ ಸ್ಥಳಾಂತರವಾಗಿದ್ದರೆ, 16,30,872 ಮಂದಿ ಮೃತಪಟ್ಟಿದ್ದಾರೆ. 6,89,904 ಜನ ಎರಡು ಕಡೆ ವೋಟ್ ಹೊಂದಿದ್ದರೆ, 4,88,974 ಇತರೆ ಮತದಾರರು ಪರಿಷ್ಕರಣೆ ವೇಳೆ ಪತ್ತೆಯಾಗಿರೋದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಅತಿ ಹೆಚ್ಚು ಮತದಾರರು ಲಿಸ್ಟ್ನಿಂದ ಹೊರಕ್ಕೆ?
ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರು ವೋಟರ್ ಲಿಸ್ಟ್ನಿಂದ ಉಳಿಯುತ್ತಾರಾ ಎಂಬ ಪ್ರಶ್ನೆಯೀಗ ಉದ್ಭವಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.45ರಷ್ಟು ಮತದಾರರು ನಾಪತ್ತೆಯಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 47ರಷ್ಟು ಮತದಾರರ ಪತ್ತೆ ಆಗಿಲ್ಲ. ಬೆಂಗಳೂರು ಕೇಂದ್ರದಲ್ಲಿ ಶೇಕಡಾ 48ರಷ್ಟು ಮತದಾರ ಮಾಹಿತಿ ಲಭ್ಯವಾಗಿಲ್ಲವಾದರೆ, ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 51ರಷ್ಟು ಮತದಾರರು ನಾಪತ್ತೆಯಾಗಿದ್ದಾರೆ. ಈ ಅಂಕಿ-ಅಂಶಗಳು ಶಿಫ್ಟಿಂಗ್ ಆದವರು, ಮೃತಪಟ್ಟವರು ಮತ್ತು ಟ್ರೇಸ್ ಆಗದೇ ಇರುವವರನ್ನು ಒಳಗೊಂಡಿದೆ.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ; 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು!
ಜಿಬಿಎ ವ್ಯಾಪ್ತಿಯಲ್ಲಿ 10 ಲಕ್ಷ ಫಾರಂ-6 ವಿತರಣೆ ಆಗಿರೋದಾಗಿ ವಿ.ಅನ್ಬುಕುಮಾರ್ ಅವರು ತಿಳಿಸಿದ್ದು, ಮೃತರ ಬಗ್ಗೆ ಸಂಪೂರ್ಣ ವಿವರಣೆ ಪಡೆದು ಲಿಸ್ಟ್ನಲ್ಲಿ ಹಾಕಿದ್ದೇವೆ. ಯಾರು ಫಾರಂ ರಿಟರ್ನ್ ಮಾಡಿದ್ದಾರೋ ಅವರ ಹೆಸರು ಇರಲಿದೆ. ಫಾರಂ ರಿಟರ್ನ್ ಮಾಡದವರ ಹೆಸರು ಪಟ್ಟಿಯಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲರೂ ಆದಷ್ಟು ಬೇಗ ಫಾರಂಗಳನ್ನು ರಿಟರ್ನ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಈ ಪ್ರದೇಶಗಳಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ
ಹಾವೇರಿ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಪ್ಪಳ, ವಿಜಯನಗರ, ಗದಗ, ಕೋಲಾರ, ಕೊಡಗು, ಧಾರವಾಡ, ಯಾದಗಿರಿ,ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ, GBA ನಾತ್೯, GBA ಸೆಂಟ್ರಲ್, GBA ದಕ್ಷಿಣದಲ್ಲಿ ಶೇಕಡ ನೂರರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ ಆಗಿರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
