ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್ – Kannada News | Amitabh Bachchan coming back to tv with KBC season 18

ಕೆಬಿಸಿ ಅಥವಾ ಕೌನ್ ಬನೇಗಾ ಕರೋಡ್​​ಪತಿ (Kaun Banega crorepati) ಭಾರತದ ಅತ್ಯಂತ ಹಳೆಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದು. 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್​​ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್​​ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್​ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್​​ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಕೌನ್ ಬನೇಗಾ ಕರೋಡ್​​ಪತಿಯ 18ನೇ ಸೀಸನ್​​ನ ಪ್ರಸಾರ ದಿನಾಂಕವನ್ನು ಘೋಷಣೆ ಮಾಡುವ ಜೊತೆಗೆ ಈ ಬಾರಿಯ ಸೀಸನ್​​ನಲ್ಲಿ ಮಾಡಲಾಗಿರುವ ಕೆಲ ಬಲಾವಣೆಗಳ ಮಾಹಿತಿಯನ್ನು ಸಹ ಪ್ರೋಮೊನಲ್ಲಿ ಹಂಚಿಕೊಳ್ಳಲಾಗಿದೆ. 18ನೇ ಸೀಸನ್​​ನಲ್ಲಿ ಕೆಲವು ತಾಜಾ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪ್ರೋಮೊನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವಂತೆ, ಈ ಬಾರಿ ಕೇವಲ ಪ್ರಶ್ನೋತ್ತರ ಮಾತ್ರ ಇರುವುದಿಲ್ಲ. ಕೇಳುವ ಪ್ರಶ್ನೆಗೆ ಸ್ಪರ್ಧಿ ಉತ್ತರ ಕೊಟ್ಟರೆ ಮಾತ್ರವೇ ಸಾಕಾಗುವುದಿಲ್ಲ, ಅದಕ್ಕಾಗಿ ಆ ಸ್ಪರ್ಧಿ ಯೋಚನೆಯನ್ನೂ ಮಾಡಬೇಕಿರುತ್ತದೆ’ ಎಂದು ಬಚ್ಚನ್ ಅವರು ಪ್ರೋಮೊನಲ್ಲಿ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್​​ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್​​ಮೆಂಟ್​​ನಲ್ಲಿ ಶೋ ಪ್ರಸಾರ ಆಗಲಿದೆ. ಸೋನಿ ಲಿವ್ ಒಟಿಟಿಯಲ್ಲಿಯೂ ಸಹ ಶೋ ಅನ್ನು ಲೈವ್ ಆಗಿ ಹಾಗೂ ರೆಕಾರ್ಡೆಡ್ ಶೋಗಳನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

2000 ರಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್​​ಪತಿ ಸತತ ಈಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಇಂಗ್ಲೀಷ್​​ನ ‘ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್’ ಶೋನಿಂದ ಸ್ಪೂರ್ತಿ ಪಡೆದು ಈ ಶೋ ಪ್ರಾರಂಭ ಮಾಡಲಾಗಿತ್ತು. ಈ ವರೆಗೆ ಕೇವಲ ಒಮ್ಮೆ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಬೇರೊಬ್ಬರು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ಒಂದು ಸೀಸನ್ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಶಾರುಖ್ ಖಾನ್ ಅವರು ಈ ಶೋ ಹೋಸ್ಟ್ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *