‘ಮದರ್ ಪ್ರಾಮಿಸ್’: ನಗುವಿನ ಪ್ರಾಮಿಸ್ ಮಾಡಿದ ಡಾಲಿ ಮತ್ತು ಗೆಳೆಯರು – Kannada News | Daali Dhananjay starrer Mother Promise movie trailer released

ಡಾಲಿ ಧನಂಜಯ್ (Daali Dhananjay) ಮತ್ತು ಗೆಳೆಯರು ನಟಿಸಿ ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗಷ್ಟೆ ಘೋಷಣೆ ಮಾಡಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಡಾಲಿ ಧನಂಜಯ್ ಸೇರಿದಂತೆ ಚಿತ್ರತಂಡದ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೈಲರ್ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈಗ ಬಿಡುಗಡೆ ಆಗಿರುವ ಟ್ರೈಲರ್ ಅನ್ನು ಭಾಗ 1 ಎಂದು ಕರೆಯಲಾಗಿದೆ. ಚಿತ್ರತಂಡವು ಎರಡನೇ ಟ್ರೈಲರ್ ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೀಗ ಬಿಡುಗಡೆ ಮಾಡಿರುವ ಟ್ರೈಲರ್​​ನಲ್ಲಿ ನಗುವಿನ ಪ್ರಾಮಿಸ್ ಮಾಡಿದೆ ಚಿತ್ರತಂಡ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಸಿನಿಮಾದ ಪ್ರಮುಖ ಪಾತ್ರಗಳ ಅನಾವರಣ ಮಾಡಲಾಗಿದೆ. ಸಿನಿಮಾನಲ್ಲಿ ನಟ ಡಾಲಿ ಧನಂಜಯ್ ‘ರೋಸಿ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ರೋಸಿ ಒಬ್ಬ ಮಹಾನ್ ಬೈಕ್ ಲವ್ವರ್, ಜೊತೆಗೆ ರೇಸರ್. ಅಮ್ಮನ ಮಾತು ತಪ್ಪುವವನಲ್ಲ. ಅಮ್ಮನ ಬಗ್ಗೆ ಅಪಾರ ಪ್ರೀತಿ ಉಳ್ಳವನು. ಬೆಂಗಳೂರಿಗೆ ಡಾನ್ ಸಹ ಆಗಿಬಿಟ್ಟಿದ್ದಾನೆ. ಅವನ ಆತ್ಮೀಯ ಗೆಳೆಯನೇ ಅವನ ಎದುರಾಳಿ. ಇಬ್ಬರ ನಡುವೆ ಕಿತ್ತಾಟ. ಈ ಇಬ್ಬರ ನಡುವೆ ಹಲವು ಪಾತ್ರಗಳು ಇವೆ.

‘ಮದರ್ ಪ್ರಾಮಿಸ್’ ಸಿನಿಮಾನಲ್ಲಿ ಹಾಸ್ಯ ದೃಶ್ಯಗಳ ಜೊತೆಗೆ ಮದರ್ ಸೆಂಟಿಮೆಂಟ್ ಸಹ ಇದೆ. ಟ್ರೈಲರ್​​ನಲ್ಲೂ ಸಹ ಸೆಂಟಿಂಮೆಂಟ್ ದೃಶ್ಯಗಳನ್ನು ನಿರ್ದೇಶಕರು ತೋರಿಸಿದ್ದಾರೆ. ಹಾಸ್ಯದ ಜೊತೆಗೆ ಆಕ್ಷನ್ ಸಹ ಸಿನಿಮಾನಲ್ಲಿದೆ. ಬೈಕ್ ರೇಸಿಂಗ್ ದೃಶ್ಯಗಳೂ ಸಹ ಇದ್ದಂತಿವೆ. ಸಿನಿಮಾವನ್ನು ನಟ ಮೈಸೂರು ಪೂರ್ಣ ನಿರ್ದೇಶನ ಮಾಡುವ ಜೊತೆಗೆ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಡಾಲಿಯ ಆತ್ಮೀಯ ಗೆಳೆಯ ನಟ, ನಾಗಭೂಷಣ್, ಶಶಾಂಕ್ ಸಹ ಸಿನಿಮಾನಲ್ಲಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿಯರಾದ ವಿನಯಾ ಪ್ರಸಾದ್ ಮತ್ತು ಗೀತಾ ನಟಿಸಿದ್ದಾರೆ. ಸಿನಿಮಾನಲ್ಲಿ ಹಲವಾರು ಮಂದಿ ಹಾಸ್ಯನಟರು ನಟಿಸಿದ್ದಾರೆ. ಗ್ಯಾಂಗ್​​ಸ್ಟರ್ ಸಿನಿಮಾಕ್ಕೆ ಹಾಸ್ಯಲೇಪನವನ್ನು ನಿರ್ದೇಶಕ ಮೈಸೂರು ಪೂರ್ಣ ನೀಡಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಜುಲೈ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ನಿರ್ಮಾಣ ಮತ್ತು ವಿತರಣೆಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ. ಸಿನಿಮಾಕ್ಕೆ ಡಾಲಿಯ ಜೊತೆಗೆ ಹರ್ಷ ಅವರೂ ಸಹ ಬಂಡವಾಳ ತೊಡಗಿಸಿದ್ದಾರೆ. ಸಂಗೀತ ನೀಡಿರುವುದು ನವೀನ್ ಶಾಮ್. ಸಂಕಲನ ಪ್ರದೀಪ್ ರಾವ್ ಅವರದ್ದಾಗಿದೆ. ಸಿನಿಮಾದ ‘ಆರ್​​ಸಿಬಿ ಹಾಡು’, ತಾಯಿಯ ಕುರಿತಾದ ಹಾಡು ಈಗಾಗಲೇ ಸಖತ್ ವೈರಲ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *