ರಾಮನಗರ, ಫೆಬ್ರವರಿ 27: ಸಾಮಾನ್ಯವಾಗಿ ಲವ್ ಫೇಲ್ಯೂರ್ ಆದಾಗ ಯುವತಿಯ ಮೇಲೆ ಪಾಗಲ್ ಪ್ರೇಮಿ, ಅಟ್ಯಾಕ್ ಮಾಡುವುದನ್ನ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಭಗ್ನ ಪ್ರೇಯಸಿ, ತನ್ನ ಲವರ್ಗೆ ಚಾಕುವಿನಿಂದ ಇರಿದಿರುವಂತಹ (stabbing) ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ನಡೆದಿದೆ. ಸದ್ಯ ಯುವಕ ಆಸ್ಪತ್ರೆಗೆ ದಾಖಲಾದರೆ, ಯುವತಿ ಪೊಲೀಸ್ ಠಾಣೆ ಪಾಲಾಗಿದ್ದಾಳೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಹುಚ್ಚಿಯಂತೆ ಪ್ರೀತಿಸಿದ ಹುಡುಗ ಸಾಕಷ್ಟು ಅವೈಡ್ ಮಾಡಿದ್ದಲ್ಲದೇ ಮದುವೆಯಾಗಲು ಕೂಡ ನಿರಾಕರಿಸಿದ್ದಕ್ಕೆ ಪ್ರೇಯಿಸಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕುವಿನಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ್ದಾಳೆ. ಪ್ರೇಯಸಿ ಸುಧಾ(30)ಳಿಂದ ಪ್ರಿಯಕರ ವೇಣುಗೋಪಾಲ್ (27)ಗೆ ಚಾಕು ಇರಿಯಲಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಮನೆ ಮುಂದೆ ಲಾಂಗು ಮಚ್ಚು ಹಿಡಿದು ಗಲಾಟೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ವೇಣುಗೋಪಾಲ್ ಬಿಡದಿಯಲ್ಲಿ ಜಿಮ್ ಟ್ರೈನರ್ ಆಗಿದ್ದಾರೆ. ಸುಧಾ ಖಾಸಗಿ ಕಂಪನೊಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜಿಮ್ವೊಂದರಲ್ಲಿ ಪರಿಚಯವಾದ ಇವರು, ವಯಸ್ಸಿನ ಅಂತರವಿದ್ದರೂ ಪ್ರೇಮಾಂಕುರವಾಗಿತ್ತು. ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲೆಡೆ ಕೈಕೈ ಹಿಡಿದು ಸುತ್ತಿದ್ದಾರೆ. ವೇಣು ಮನೆಗೆ ಸುಧಾ ಬಂದು ಹೋಗುತ್ತಿದ್ದಳು. ಹೀಗಿರುವಾಗ ಕಳೆದ ನಾಲ್ಕು ತಿಂಗಳಿಂದ ವೇಣುಗೋಪಾಲ್, ಸುಧಾಳನ್ನು ಅವೈಡ್ ಮಾಡುತ್ತಿದ್ದನಂತೆ. ವಿವಾಹವಾಗಲು ಸಹ ನಿರಾಕರಿಸಿದನಂತೆ. ಈ ಮಧ್ಯೆ ಬೇರೊಬ್ಬ ಯುವತಿ ಜೊತೆ ವೇಣುಗೋಪಾಲ್ ಸುತ್ತಾಡುತ್ತಿದ್ದರಿಂದ ಕೋಪಗೊಂಡ ಸುಧಾ, ವೇಣುಗೋಪಾಲ್ ಎದೆ, ಹೊಟ್ಟೆ, ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾಳೆ.
ಮಾತನಾಡಲು ಕರೆಸಿ ಚಾಕು ಹಾಕಿದ ಪ್ರೇಯಸಿ
ಅಂದಹಾಗೆ ಕಳೆದ ಒಂದು ತಿಂಗಳಿಂದ ಮಾತನಾಡಬೇಕು ಅಂತಾ ಸುಧಾ ಕರೆದಾಗೆಲ್ಲಾ ಏನೇನೋ ಕಾರಣ ಹೇಳಿ ವೇಣು ತಪ್ಪಿಸಿಕೊಂಡಿದ್ದಾನೆ. ಸಿಕ್ಕಿದ್ರು ಕೂಡ ವೇಣು ಕಿರಿಕಿರಿ ಮಾಡುತ್ತಿದ್ದನಂತೆ. ಹೀಗಾಗಿ ಒಂದು ವಾರದಿಂದ ತನ್ನ ಬ್ಯಾಗ್ನಲ್ಲಿ ಸುಧಾ ಚಾಕು ಇಟ್ಟುಕೊಂಡು ಸುತ್ತಾಡಿದ್ದಾಳೆ. ನಿನ್ನ ಜೊತೆ ಮಾತನಾಡಬೇಕು ಎಂದು ನಿನ್ನೆ ಸಂಜೆ ವೇಣುಗೋಪಾಲ್ನನ್ನ ಮನೆಯಿಂದ ಹೊರಕ್ಕೆ ಕರೆಸಿಕೊಂಡು ಕೆಲಕಾಲ ಮಾತನಾಡಿದ ಸಾಧಾ ಬಳಿಕ ಏಕಾಏಕಿ ಹೊಟ್ಟೆ, ಎದೆ, ಕೈಗೆ ಚಾಕು ಹಾಕಿದ್ದಾಳೆ. ಆನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ರಕ್ತದ ಮಡುವಿನಲ್ಲಿಯೇ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ವೇಣು ಕರೆ ಮಾಡಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್ ಪ್ರಪೋಸಲ್ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್
ಇನ್ನು ಘಟನೆ ನಂತರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುಧಾಳನ್ನ ವಶಕ್ಕೆ ಪಡೆದು ವಿಚಾರ ಮಾಡುತ್ತಿದ್ದಾರೆ. ಒಟ್ಟಾರೆ ಪ್ರೀತಿಯಲ್ಲಿ ಮೋಸ, ವಿವಾಹಕ್ಕೆ ನಿರಾಕರಣೆ ಹಿನ್ನೆಲೆ ಲವರ್ಗೆ ಭಗ್ನ ಪ್ರೇಯಿಸಿ ಚಾಕುವಿನಿಂದ ಚುಚ್ಚಿ ಇದೀಗ ಪೊಲೀಸರ ಅಥಿತಿಯಾಗಿದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
