ತುಮಕೂರು, ಫೆಬ್ರವರಿ 16: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪತಿ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದ ಈಕೆ ಆತನೊಂದಿಗೆ ಕುಣಿಗಲ್‌ಗೆ ಬಂದ ವಿಡಿಯೋ ಲಭ್ಯವಾಗಿದೆ. ನಾಪತ್ತೆಯಾಗಿದ್ದ ದಿನದ ರಾತ್ರಿಯೇ ಪ್ರಿಯಾಂಕಾ ಕುಣಿಗಲ್‌ಗೆ ಬಂದಿದ್ದಳು. ಗುರುವಾರ ಸಂಜೆ ನಾಲ್ಕು ಗಂಟೆಗೆ ತನ್ನ ರೂಮ್ ಬಿಟ್ಟಿದ್ದ ಡೇವಿಡ್, ಮರಳಿ ಪ್ರಿಯಾಂಕಾ ಜೊತೆ ಹಿಂದಿರುಗಿ ಬಂದಿದ್ದ. ಬೇಲೂರು ಪೊಲೀಸರು ಎಂಟ್ರಿ ಕೊಡುವವರೆಗೂ ಮನೆಯಿಂದ ಈಚೆ ಬರದೇ ಪ್ರಿಯಾಂಕಾ ಒಳಗೇ ಇದ್ದಳು. ಹೀಗಾಗಿ ಆಕೆಗೆ ಹೋಟೆಲ್ನಿಂದ-ಊಟ ತಿಂಡಿಯನ್ನು ಡೇವಿಡ್ ಪಾರ್ಸಲ್ ತಂದುಕೊಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕುಣಿಗಲ್‌ಗೆ ಎಂಟ್ರಿ ಕೊಟ್ಟಿದ್ದ ಬೇಲೂರು ಪೋಲೀಸರು, ಮನೆ ಬಳಿ ಬರುತ್ತಿದ್ದಂತೆ ಡೇವಿಡ್ ಮತ್ತು ಪ್ರಿಯಾಂಕಾ ಲಾಕ್ ಆಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
