ಮದುವೆಯಲ್ಲಿ ಗನ್​​ ಹಿಡಿದು ಕಾಂಗ್ರೆಸ್​​ ಮುಖಂಡನ ಡ್ಯಾನ್ಸ್​: ವಿಡಿಯೋ ವೈರಲ್​ – Kannada News | Afzalpur Congress Leader Matheen Ahmed Patel Sparks Controversy Dancing With Gun

ಕಲಬುರಗಿ, ಫೆಬ್ರವರಿ 10: ಮದುವೆ ಸಮಾರಂಭವೊಂದರಲ್ಲಿ ಅಫಜಲ್ಪುರ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಪಿಸ್ತೂಲ್ ಹಿಡಿದು ದುರಂಧರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಶಾಸಕ ಎಂ.ವೈ.ಪಾಟೀಲ್ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಮತಿನ್ ಪಟೇಲ್ ಅವರ ಈ ಶೋ ಆಫ್ ನಡೆ ಕಾನೂನುಬಾಹಿರ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಅಪರಾಧ. ಅದರಲ್ಲೂ ಮದುವೆ ಸಮಾರಂಭದಂತಹ ಜನಸಂದಣಿಯ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಬಿಲ್ಡಪ್ ನೀಡಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿ ಈ ಸಂಬಂಧ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಮತಿನ್ ಪಟೇಲ್ ಬಳಸಿದ ಪಿಸ್ತೂಲ್ ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ಹಾಗೂ ಅದಕ್ಕೆ ಪರವಾನಿಗೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *