ಮದುವೆ ಮಂಟಪಕ್ಕೆ ನುಗ್ಗಿದ ಪ್ರವಾಹ ನೀರು: ವಧುವನ್ನು ತೋಳಿನಲ್ಲಿ ಎತ್ತಿಕೊಂಡು ಹೊರಟ ವರ – Kannada News | Flooded Indore Wedding: Groom Carries Bride, Viral Monsoon Romance

ಇಂದೋರ್, ಜುಲೈ 08: ಮದುವೆ(Marriage)ಯ ದಿನ ಮಳೆ ಬಂದರೆ ಸಾಮಾನ್ಯವಾಗಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ವಿವಾಹವೊಂದರಲ್ಲಿ, ಭಾರೀ ಮಳೆಯಿಂದಾಗಿ ಇಡೀ ಮಂಟಪವೇ ಜಲಾವೃತಗೊಂಡರೂ ವಧು-ವರರು ಬೇಸರ ಮಾಡಿಕೊಳ್ಳದೆ, ಆ ಕ್ಷಣವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮಂಟಪದಲ್ಲಿ 2 ಅಡಿ ನೀರು
ವರದಿಗಳ ಪ್ರಕಾರ, ಇಂದೋರ್‌ನ ಸಿಎಟಿ ರಸ್ತೆ ಪ್ರದೇಶದ ಮದುವೆ ಮಂಟಪವೊಂದರಲ್ಲಿ ‘ಪೂರ್ವ’ ಮತ್ತು ‘ವೈಭವ್’ ಎಂಬುವವರ ವಿವಾಹ ನಿಗದಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮದುವೆ ಸ್ಥಳದೊಳಗೆ ಸುಮಾರು 1.5 ರಿಂದ 2 ಅಡಿಗಳಷ್ಟು ನೀರು ನಿಂತಿತ್ತು. ಮಂಟಪದ ಸುತ್ತಲೂ ನೀರು ತುಂಬಿ ಅತಿಥಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಗಳು ನೀರಿನಲ್ಲಿ ತೇಲುತ್ತಿದ್ದವು.

ವಧುವನ್ನು ಎತ್ತಿಕೊಂಡ ನಡೆದ ವರ
ಪರಿಸ್ಥಿತಿ ಹೀಗಿದ್ದರೂ ವಧು-ವರರು ಧೃತಿಗೆಡಲಿಲ್ಲ. ಮದುವೆಯ ರೇಷ್ಮೆ ಸೀರೆ ಹಾಗೂ ಒಡವೆಗಳನ್ನು ಧರಿಸಿದ್ದ ವಧು ಪೂರ್ವ ಅವರಿಗೆ ನೀರಿನಲ್ಲಿ ನಡೆಯಲು ಕಷ್ಟವಾಗುತ್ತಿತ್ತು. ಇದನ್ನು ಕಂಡ ವರ ವೈಭವ್, ವಧುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡರು. ಪ್ರವಾಹದಂತೆ ತುಂಬಿದ್ದ ನೀರಿನ ನಡುವೆಯೇ ಆಕೆಯನ್ನು ಎತ್ತಿಕೊಂಡು ಊಟದ ಹಾಲ್‌ನ ಕಡೆಗೆ ಹೆಜ್ಜೆ ಹಾಕಿದರು.

ಮತ್ತಷ್ಟು ಓದಿ: Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ

ಅಷ್ಟೇ ಅಲ್ಲ, ದಾರಿಯ ಮಧ್ಯೆ ವಧುವನ್ನು ನೀರಿನಲ್ಲಿ ಬೀಳಿಸುವಂತೆ ತಮಾಷೆಯಾಗಿ ನಟಿಸಿ ಆಕೆ ಜೋರಾಗಿ ನಗುವಂತೆ ಮಾಡಿದರು. ವರನ ಈ ಕ್ಯೂಟ್ ಆಟಕ್ಕೆ ನೆರೆದಿದ್ದ ಅತಿಥಿಗಳು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ವಿಡಿಯೋ

ಮಂಟಪ ಜಲಾವೃತಗೊಂಡಿದ್ದರೂ, ಅತಿಥಿಗಳು ನೀರಿನಲ್ಲೇ ನಿಂತು ಮದುವೆ ಸಮಾರಂಭವನ್ನು ಕಣ್ಣುಂಬಿಕೊಂಡರು. ದಂಪತಿ ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಗುತ್ತಲೇ ಪೂರ್ಣಗೊಳಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು, ಇದು ನಿಜಕ್ಕೂ ಅತ್ಯಂತ ಸ್ಮರಣೀಯ ಹಾಗೂ ರೋಮ್ಯಾಂಟಿಕ್ ಮಾನ್ಸೂನ್ ವಿವಾಹ ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *