ಸಾಂದರ್ಭಿಕ ಚಿತ್ರImage Credit source: DEV IMAGES/Moment/Getty Images
ಮನೆ (home) ಕಟ್ಟುವುದು ಎಲ್ಲರ ಕನಸು. ಆದರೆ ಖರೀದಿ ಮಾಡಿದ ಜಾಗ ಅಥವಾ ಸ್ವಂತ ಜಾಗ ಇದೆ ಎಂದು ಮನೆ ಕಟ್ಟಲು ಸಾಧ್ಯವಿಲ್ಲ. ನೀವು ಮನೆ ಕಟ್ಟಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಒಂದು ಕೆಲಸವನ್ನು ತಪ್ಪದೇ ಮಾಡ್ಲೇ ಬೇಕು. ಹೌದು, ಕರ್ನಾಟಕದಲ್ಲಿ ಮನೆ ನಿರ್ಮಾಣಕ್ಕೆ ಕಟ್ಟಡ ಪರವಾನಗಿ (license) ಪಡೆಯುವುದು ಮುಖ್ಯ. ನೀವು ಸ್ಥಳೀಯ ಪ್ರಾಧಿಕಾರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಲೈಸನ್ಸ್ ಪಡೆಯಬಹುದು. ಅರ್ಜಿ ಸಲ್ಲಿಸಲು ನಿಮ್ಮ ಬಳಿ ಅಗತ್ಯ ದಾಖಲೆಗಳು ಇರುವುದು ಕಡ್ಡಾಯ.
ಕಟ್ಟಡ ಪರವಾನಗಿಗೆ ಬೇಕಾಗುವ ದಾಖಲೆಗಳಾವುವು?
- ಸೇಲ್ ಡೀಡ್ (ಖರೀದಿ ಪತ್ರ)
- ಇಂಟರ್ಫೆರೆನ್ಸ್ ಅಥವಾ ಹಕ್ಕುಪತ್ರ.
- ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಮೂಲಕ ತಯಾರಿಸಿದ ಕಟ್ಟಡದ ನೀಲನಕ್ಷೆ
- ಆಸ್ತಿ ತೆರಿಗೆ ರಸೀದಿ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ನಿಮ್ಮ ಆಸ್ತಿಯು ಗ್ರಾಮ ಪಂಚಾಯತಿ, ನಗರಸಭೆ, ಅಥವಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಗೆ ಬರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
ಹಂತ 2: ನಗರ ಪ್ರದೇಶಗಳಾದರೆ ಆಯಾ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪೋರ್ಟಲ್ ಮೂಲಕ, ಗ್ರಾಮಾಂತರ ಪ್ರದೇಶಗಳಾದರೆ ಗ್ರಾಮ ಪಂಚಾಯತಿ ಕಚೇರಿ ಅಥವಾ ಬಾಪೂಜಿ ಸೇವಾ ಕೇಂದ್ರ ಮೂಲಕ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹಂತ 3: ಅಧಿಕಾರಿಗಳು ಅಥವಾ ಪಿಡಿಓಗಳು (PDO/Engineer) ಸ್ಥಳ ಪರಿಶೀಲನೆ ನಡೆಸಿ ನಿಯಮಗಳ ಅನುಸಾರ ನಕ್ಷೆಯನ್ನು ಪರಿಶೀಲಿಸುತ್ತಾರೆ.
ಹಂತ 4: ತದನಂತರ ಸರ್ಕಾರ ನಿಗದಿಪಡಿಸಿದ ಪರವಾನಗಿ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿ.
ಹಂತ 5: ಅನುಮೋದನೆ ದೊರೆತ ನಂತರ ಡಿಜಿಟಲ್ ಸಹಿಯುಳ್ಳ ಕಟ್ಟಡ ಪರವಾನಗಿ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.
ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಮನೆ ನಿರ್ಮಾಣಕ್ಕೆ ಲೈಸನ್ಸ್ ಪಡೆಯುವುದು ಮುಖ್ಯವೇ?
ಉತ್ತರ: ನೀವು ಮನೆ ಕಟ್ಟುವ ಜಾಗವು ಯಾವ ವ್ಯಾಪ್ತಿಗೆ ಒಳಪಡುತ್ತದೆ (ಗ್ರಾಮ ಪಂಚಾಯತ್, ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ) ಎಂದು ತಿಳಿದುಕೊಂಡು ಪರವಾನಗಿಗೆ ಅರ್ಜಿ ಸಲ್ಲಿಸಿ
ಪ್ರಶ್ನೆ: ಕಟ್ಟಡ ಪರವಾನಗಿಗೆ ಬೇಕಾಗುವ ಅಗತ್ಯ ದಾಖಲೆಗಳಾವುವು?
ಉತ್ತರ: ಕಟ್ಟಡ ಪರವಾನಗಿ ಪಡೆಯಲು ಸೇಲ್ ಡೀಡ್, ಇಂಟರ್ಫೆರೆನ್ಸ್ ಅಥವಾ ಹಕ್ಕುಪತ್ರ, ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಮೂಲಕ ತಯಾರಿಸಿದ ಕಟ್ಟಡದ ನೀಲನಕ್ಷೆ, ಆಸ್ತಿ ತೆರಿಗೆ ರಸೀದಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋ ಈ ದಾಖಲೆಗಳು ಅಗತ್ಯವಾಗಿ ಬೇಕು.
ಪ್ರಶ್ನೆ: ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಉತ್ತರ: ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ನಗರ ಪ್ರದೇಶಗಳಾದರೆ ಆಯಾ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪೋರ್ಟಲ್ ಮೂಲಕ ಅಥವಾ ಗ್ರಾಮಾಂತರ ಪ್ರದೇಶಗಳಾದರೆ ಗ್ರಾಮ ಪಂಚಾಯತಿ ಕಚೇರಿ ಅಥವಾ ಬಾಪೂಜಿ ಸೇವಾ ಕೇಂದ್ರ ಮೂಲಕ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
