Headlines

ಮರು ಮದುವೆಯಾದರೂ ಬಿಡಲಿಲ್ಲ, ಮನೆಗೆ ನುಗ್ಗಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯ ಇರಿದು ಕೊಂದ ಟೆಕ್ಕಿ – Kannada News | Hyderabad Techie Murders Pregnant Ex Wife: Domestic Dispute Escalates to Fatal Attack

ಹೈದರಾಬಾದ್, ಫೆಬ್ರವರಿ 19: ಟೆಕ್ಕಿಯೊಬ್ಬ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯನ್ನು ಇರಿದು ಕೊಂದಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಅವರಿಬ್ಬರು ಸತಿ ಪತಿಗಳಾಗಿದ್ದ ಸಂದರ್ಭದಲ್ಲಿ ಪತಿ ಮೇಲೆ ಆಕೆ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳು. ಆತ ಕೆನಡಾದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ದೂರಿನಿಂದಾಗಿ ಆತ ಕೆನಡಾಗೆ ಹಿಂದಿರುಗಲು ಸಾಧ್ಯವಾಗಿಲ್ಲ, ಅದಕ್ಕೆ ಹತಾಶಗೊಂಡ ವ್ಯಕ್ತಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ(Murder)) ಮಾಡಿದ್ದಾನೆ. ತನ್ನ ತಾಯಿಯ ಸಾವಿಗೂ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾನೆ.

ಮಹಿಳೆಯ ಎರಡನೇ ಪತಿ ತನ್ನ ದೂರಿನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಹೇಳಿದ್ದಾರೆ. ಪೊಲೀಸರು ಇದನ್ನು ಇಲ್ಲಿಯವರೆಗೆ ದೃಢಪಡಿಸಲಾಗಿಲ್ಲ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಆ ವ್ಯಕ್ತಿ 2022 ರಲ್ಲಿ ಆ ಮಹಿಳೆಯನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆಯಿತು, ಮತ್ತು ಆ ವ್ಯಕ್ತಿ ನಂತರ ಕೆನಡಾಕ್ಕೆ ತೆರಳಿದ್ದರು, ಅಲ್ಲಿಗೆ ಪತ್ನಿಯನ್ನು ಕೂಡ ಕರೆದುಕೊಂಡು ಹೋಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಈ ಕಾರಣದಿಂದ ಆಕೆ ಭಾರತಕ್ಕೆ ವಾಪಸಾಗಿದ್ದಳು, ಬಳಿಕ ಮಹಾರಾಷ್ಟ್ರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಆಕೆ ದಾಖಲಿಸಿದ್ದಳು. ದಂಪತಿ 2024ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಮತ್ತು ಆ ಮಹಿಳೆ ಏಪ್ರಿಲ್ 2025 ರಲ್ಲಿ ಮತ್ತೆ ವಿವಾಹವಾಗಿದ್ದರು.

ತನ್ನ ತಾಯಿಯ ಮರಣದ ನಂತರ ಆ ವ್ಯಕ್ತಿ ಮಾರ್ಚ್ 2025 ರಲ್ಲಿ ಭಾರತಕ್ಕೆ ಮರಳಿದ್ದ, ಕೌಟುಂಬಿಕ ಹಿಂಸಾಚಾರ ಪ್ರಕರಣದ ಕಾರಣ ಆತನ ವಿರುದ್ಧ ಲುಕ್-ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆತನ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸಲಾತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತ್ತಷ್ಟು ಓದಿ: ಪ್ರೇಯಸಿಯ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮಾಧ್ಯಮಗಳೆದುರು ನಕ್ಕು ಹೇಳಿದ್ದೇನು?

ಈ ಕಾರಣದಿಂದಾಗಿ, ಆತ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಆತ ನಿರುದ್ಯೋಗಿಯಾಗಿದ್ದ ಮತ್ತು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ. ತನ್ನ ತಾಯಿಯ ಸಾವು ಈ ಮಾನಸಿಕ ಯಾತನೆಯಿಂದಾಗಿ ಆಗಿದೆ ಎಂದು ಆತ ನಂಬಿದ್ದ. ಹಾಗಾಗಿ ಆಕೆಯನ್ನು ಕೊಲ್ಲುವುದೇ ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದ.ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ.

ಎರಡು ತಿಂಗಳ ಹಿಂದೆ ಹೈದರಾಬಾದ್ ತಲುಪಿ ಹಾಸ್ಟೆಲ್‌ನಲ್ಲಿ ವಾಸವಿದ್ದ. ದಂಪತಿ ಇತ್ತೀಚೆಗಷ್ಟೆ ಅಪಾರ್ಟ್​ಮೆಂಟ್ ಕೂಡ ಖರೀದಿ ಮಾಡಿದ್ದರು. ಆತ ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್ ಮತ್ತು ಐದು ಲೀಟರ್ ಪೆಟ್ರೋಲ್ ತುಂಬಿದ ಕ್ಯಾನ್‌ನೊಂದಿಗೆ ಮಹಿಳೆಯ ಅಪಾರ್ಟ್‌ಮೆಂಟ್‌ಗೆ ತಲುಪಿದ್ದ. ಆ ವ್ಯಕ್ತಿ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ, ಆಕೆ ಇದ್ದ ಕೋಣೆಗೆ ಪ್ರವೇಶಿಸಿ, ಒಳಗಿನಿಂದ ಲಾಕ್ ಮಾಡಿ, ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ.

ಇದು ಸಂಭವಿಸಿದಾಗ ಮಹಿಳೆಯ ಅತ್ತೆ ಬಾಲ್ಕನಿಯಲ್ಲಿದ್ದರು. ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದರು ಮತ್ತು ತಂಡವೊಂದು ಮನೆಗೆ ತಲುಪಿತು, ಆದರೆ ಆ ವ್ಯಕ್ತಿ ಕೋಣೆಯಾದ್ಯಂತ ಪೆಟ್ರೋಲ್ ಸುರಿದುಕೊಂಡು ಶೌಚಾಲಯಕ್ಕೆ ಬೀಗ ಹಾಕಿಕೊಂಡಿದ್ದ.ಆ ವ್ಯಕ್ತಿ ಕೋಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ಅವನನ್ನು ಶೌಚಾಲಯದಿಂದ ಹೊರಗೆ ತರಲು ಸ್ವಲ್ಪ ಮನವೊಲಿಸಬೇಕಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *