ಇಂದಿನ ಜೀವನಶೈಲಿಯಲ್ಲಿ ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಫೈಬರ್ ಕೊರತೆ, ಕಡಿಮೆ ನೀರು ಕುಡಿಯುವುದು, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಅಸ್ತವ್ಯಸ್ತ ದಿನಚರಿ ಮಲಬದ್ಧತೆಗೆ (Constipation) ಪ್ರಮುಖ ಕಾರಣಗಳಾಗಿವೆ. ದಿನವಿಡೀ ಕುಳಿತೇ ಕೆಲಸ ಮಾಡುವವರು, ಹೊರಗಿನ ಆಹಾರ ಹೆಚ್ಚು ತಿನ್ನುವವರು ಹಾಗೂ ರಾತ್ರಿ ತಡವಾಗಿ ನಿದ್ರೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಪ್ರತಿದಿನ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಹೊಟ್ಟೆ ಸರಿಯಾಗಿ ಖಾಲಿಯಾಗದಿರುವುದು, ಮಲವಿಸರ್ಜನೆ ವೇಳೆ ಜೋರಾಗಿ ಒತ್ತಡ ಹಾಕಬೇಕಾಗುವುದು, ಹೊಟ್ಟೆ ಭಾರವಾಗಿರುವ ಅನುಭವ, ಗ್ಯಾಸ್ಟ್ರಿಕ್, ಉಬ್ಬರ ಮತ್ತು ಅಸಹಜತೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ತಲೆನೋವು, ಚಡಪಡಿಕೆ ಮತ್ತು ಹಸಿವು ಕಡಿಮೆಯಾಗುವ ಸಮಸ್ಯೆಯೂ ಉಂಟಾಗಬಹುದು. ವಯೋವೃದ್ಧರು, ಗರ್ಭಿಣಿಯರು ಹಾಗೂ ಒತ್ತಡ ಹೆಚ್ಚಾಗಿ ಮಾಡಿಕೊಳ್ಳುವವರಲ್ಲಿ ಇದರ ಅಪಾಯ ಹೆಚ್ಚಾಗಿರುತ್ತದೆ. ಈ ಲಕ್ಷಣಗಳು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಸೂಚನೆಯಾಗಿರುತ್ತದೆ. ಹಾಗಾಗಿ ಮಲಬದ್ಧತೆ ತಡೆಗಟ್ಟಲು ಏನು ಮಾಡಬೇಕು, ಯಾವ ಸಮಯದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಮಲಬದ್ಧತೆಯಿಂದ ಮುಕ್ತಿ ಪಡೆಯುವುದು ಹೇಗೆ?
ಕೆಲವು ಸಂದರ್ಭಗಳಲ್ಲಿ ಮಲಬದ್ಧತೆಯಿಂದ ಹಸಿವು ಕಡಿಮೆಯಾಗಬಹುದು ಮತ್ತು ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವ ಸಮಸ್ಯೆಯೂ ಉಂಟಾಗಬಹುದು. ನಿರಂತರವಾಗಿ ಜೋರಾಗಿ ಒತ್ತಡ ಹಾಕುವುದರಿಂದ ಅಂತರಾಯಗಳ ಮೇಲೆ ಒತ್ತಡ ಹೆಚ್ಚಾಗಿ, ಮುಂದೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ ಮಲಬದ್ಧತೆ ಇರುವುದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬಾರದು. ಜೊತೆಗೆ ಅದನ್ನು ತಡೆಗಟ್ಟಲು ಮೊದಲಿಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಅಗತ್ಯ. ಪ್ರತಿದಿನ ಫೈಬರ್ ಹೆಚ್ಚಿರುವ ಆಹಾರಗಳಾದ ಹಣ್ಣು, ತರಕಾರಿ ಮತ್ತು ಧಾನ್ಯಗಳ ಸೇವನೆ ಮಾಡಬೇಕು. ಜೊತೆಗೆ ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಮಲ ಮೃದುವಾಗಿ ಬೇಗ ಹೊರಹೋಗುತ್ತದೆ.
ಇದನ್ನೂ ಓದಿ: ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ!
ಅಷ್ಟೇ ಅಲ್ಲ, ಪ್ರತಿದಿನ ಒಂದು ನಿಗದಿತ ಸಮಯದಲ್ಲಿ ಮಲವಿಸರ್ಜನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಜೋರಾಗಿ ಒತ್ತಡ ಹಾಕುವುದನ್ನು ತಪ್ಪಿಸಬೇಕು. ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸರಾಗವಾಗಿ ಆಗುತ್ತದೆ. ಎಣ್ಣೆ ಹೆಚ್ಚಿರುವ ಮತ್ತು ಜಂಕ್ ಆಹಾರವನ್ನು ಕಡಿಮೆ ಮಾಡುವುದು ಸಹ ಮುಖ್ಯ. ಒತ್ತಡ ಕಡಿಮೆ ಮಾಡಿಕೊಳ್ಳುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಯಾವಾಗ ವೈದ್ಯರ ಭೇಟಿ ಮಾಡಬೇಕು?
ಮಲಬದ್ಧತೆ ಸಮಸ್ಯೆ ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಮಲವಿಸರ್ಜನೆ ವೇಳೆ ರಕ್ತ ಕಾಣಿಸಿಕೊಳ್ಳುವುದು, ತೀವ್ರ ಹೊಟ್ಟೆನೋವು, ಅಚಾನಕ್ ತೂಕ ಕಡಿಮೆಯಾಗುವುದು ಅಥವಾ ನಿರಂತರ ದೌರ್ಬಲ್ಯ ಕಾಣಿಸಿಕೊಳ್ಳುವುದು ಗಂಭೀರ ಸೂಚನೆಗಳಾಗಿರಬಹುದು. ಔಷಧಿ ತೆಗೆದುಕೊಂಡರೂ ಸಮಸ್ಯೆ ನಿವಾರಣೆಯಾಗದಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ದೀರ್ಘಕಾಲ ಸ್ವಯಂ ಔಷಧಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಸರಿಯಾದ ಪರೀಕ್ಷೆ ಮತ್ತು ವೈದ್ಯರ ಸಲಹೆಯಿಂದ ಸಮಸ್ಯೆಯ ನಿಜವಾದ ಕಾರಣ ತಿಳಿದು, ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
