Headlines

ಮಲಯಾಳಂ ನಟ ವಿನಾಯಗನ್ ಮತ್ತೊಂದು ವಿವಾದ, ಎಫ್​​ಐಆರ್ ದಾಖಲು – Kannada News | FIR against Malayalam actor Vinayakan for posting minor girl photo on online

ಮಲಯಾಳಂ ಖ್ಯಾತ ನಟ ವಿನಾಯಗನ್ (Vinayakan), ಆಗಾಗ್ಗೆ ವಿವಾದಗಳಿಗೆ ಈಡಾಗುತ್ತಲೇ ಇರುತ್ತಾರೆ. ಹಿಂದೆ, ಅವರು ಮದ್ಯ ಸೇವನೆ ಮಾಡಿ ರಂಪ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಠಾಣೆಯಲ್ಲಿ ಕಿರುಚಾಡಿದ ವಿಡಿಯೋ ಒಂದು ಸಹ ವೈರಲ್ ಆಗಿ, ಅವರ ಬಂಧನವೂ ಆಗಿತ್ತು. ಅದಾದ ಬಳಿಕ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಟ್ಟಿಗೆ ಜಗಳ ಮಾಡಿ ವಿವಾದ ಎಳೆದುಕೊಂಡಿದ್ದರು. ಬಳಿಕ ಕೊಲ್ಲಂನ ಹೋಟೆಲ್ ಒಂದರಲ್ಲಿ ಕುಡಿದು ಗಲಾಟೆ ಮಾಡಿ, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಮತ್ತೊಮ್ಮೆ ವಿನಾಯಗನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಟು ವರ್ಷದ ಬಾಲಕಿಯ ಫೋಟೋವನ್ನು ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿದ್ದಕ್ಕಾಗಿ ನಟ ವಿನಾಯಕನ್ ವಿರುದ್ಧ ಕೇರಳದ ಮಾವೇಲಿಕ್ಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿನಾಯಗನ್ ಹಂಚಿಕೊಂಡಿರುವ ಫೋಟೊನಲ್ಲಿರುವ ಬಾಲಕಿಯ ತಂದೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ ದೂರು ನೀಡಿದ್ದರು. ಆಯೋಗವು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು, ಹಾಗಾಗಿ ಪೊಲೀಸರು ವಿನಾಯಗನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಶೀಘ್ರವೇ ನೊಟೀಸ್ ನೀಡಿ ವಿಚಾರಣೆಗೆ ಸಹ ಕರೆಯಲಿದ್ದಾರೆ.

ಘಟನೆ ಏನು?

ಮಾವೇಲಿಕ್ಕರದ ವ್ಯಕ್ತಿಯೊಬ್ಬರು, ನಟ ವಿನಾಯಗನ್ ಕುರಿತಾಗಿ ಮತ್ತೊಬ್ಬ ವ್ಯಕ್ತಿ ಹಂಚಿಕೊಂಡಿದ್ದ ಫೇಸ್​​ಬುಕ್​​ ಪೋಸ್ಟ್​​ನ ವಿನಾಯಗನ್ ಅವರಿಗೆ ವಾಟ್ಸ್​​ಆಪ್​​ನಲ್ಲಿ ಕಳಿಸಿದ್ದರಂತೆ. ಆದರೆ ವಿನಾಯಗನ್ ಅವರು ದೂರುದಾರರು ಕಳುಹಿಸಿದ ವಾಟ್ಸಾಪ್ ಸಂದೇಶದ ಸ್ಕ್ರೀನ್‌ಶಾಟ್ ತೆಗೆದುಕೊಂಡರು. ಅದರೊಂದಿಗೆ, ದೂರುದಾರರ ವಾಟ್ಸಾಪ್ ಪ್ರೊಫೈಲ್ ಫೋಟೋದ ಸ್ಕ್ರೀನ್‌ಶಾಟ್ ಅನ್ನು ಸಹ ತೆಗೆದುಕೊಂಡು ತಮ್ಮ ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿದ್ದರಂತೆ. ಆ ಪ್ರೊಫೈಲ್ ಫೋಟೊನಲ್ಲಿ ದೂರುದಾರನ ಎಂಟು ವರ್ಷದ ಮಗಳ ಫೋಟೋ ಸಹ ಇತ್ತು.

ಇದನ್ನೂ ಓದಿ:ಮಲಯಾಳಂಗೆ ಮರಳುತ್ತಾರಾ ನಟಿ ಸಾಯಿ ಪಲ್ಲವಿ

ವಿನಾಯಕನ್ ಅವರ ಫೇಸ್‌ಬುಕ್ ಪೋಸ್ಟ್‌ನ್ನು ಅನೇಕ ಅಪರಿಚಿತ ವ್ಯಕ್ತಿಗಳು ಹಂಚಿಕೊಂಡಿದ್ದಾರೆ ಮತ್ತು ದೂರುದಾರರು ಹಾಗೂ ಅವರ ಕುಟುಂಬವನ್ನು ನಿಂದಿಸುವಂತಹ ಅವಹೇಳನಕಾರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಫೇಸ್​​ಬುಕ್ ನಲ್ಲಿ ವಿನಾಯಗನ್ ಹಂಚಿಕೊಂಡಿದ್ದ ಸ್ಕ್ರೀನ್​ ಶಾಟ್​​ಗಳಲ್ಲಿ ಬಾಲಕಿಯ ಫೋಟೊ ಜೊತೆಗೆ ದೂರುದಾರರ ಮೊಬೈಲ್ ಸಂಖ್ಯೆ ಸಹ ಇದ್ದಿದ್ದರಿಂದ ಹಲವಾರು ಮಂದಿ ದೂರುದಾರರಿಗೆ ಕರೆ ಮಾಡಿ ಅವಾಚ್ಯಾಗಿ ನಿಂದನೆ ಸಹ ಮಾಡಿದ್ದರಂತೆ.

ಇದೀಗ ವ್ಯಕ್ತಿಯ ದೂರು ಆಧರಿಸಿ ವಿನಾಯಗನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಶೀಘ್ರವೇ ನಟ ವಿನಾಯಗನ್ ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ. ವಿನಾಯಗನ್ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಹಲವು ಬಾರಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ, ಬಂಧನ ಸಹ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *