ಮಲ್ಲೇಶ್ವರಂನ ಸಂಪಿಗೆ ರಸ್ತೆ ದುಬಾರಿ: ಪೇ ಆ್ಯಂಡ್​ ಪಾರ್ಕಿಂಗ್​ ವ್ಯವಸ್ಥೆ ಜಾರಿ – Kannada News | Bengaluru Pay and Park: Malleswaram Sampige Rd Shoppers Face New Parking Fees

ಬೆಂಗಳೂರು, ಜನವರಿ 20: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪೇ ಆ್ಯಂಡ್ ಪಾರ್ಕ್ (Pay and Park) ಯೋಜನೆಯನ್ನು ನಗರದಾದ್ಯಂತ ವಿಸ್ತರಿಸಲು ಮುಂದಾಗಿದೆ. ಹಾಗಾಗಿ ಇದೀಗ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್​ ಮಲ್ಲೇಶ್ವರನ ಸಂಪಿಗೆ ರಸ್ತೆಯಲ್ಲಿ ಪೇ ಅಂಡ್​ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮಲ್ಲೇಶ್ವರನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್. ಸಂಪಿಗೆ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳು ಸದಾ ವಿವಿಧ ಚಟುವಟಿಕೆಗಳಿಂದ ಗಿಜುಗುಡುತ್ತಿರುತ್ತವೆ. ಆದರೆ ಶಾಪಿಂಗ್ ಅಂತಾ ಕಾರು, ಬೈಕ್​ಗಳಲ್ಲಿ ಬರುವ ಜನರು ಮಾತ್ರ ಶೀಘ್ರದಲ್ಲೇ ಪಾರ್ಕಿಂಗ್​​​ ಅಂತಲೇ ಹೆಚ್ಚುವರಿ ಹಣ ತೆರಬೇಕು.

ಪೇ ಅಂಡ್​ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರಿನ ಮಲ್ಲೇಶ್ವರಂ ಐಕಾನಿಕ್ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರಿಗೆ ಅಚ್ಚುಮೆಚ್ಚು. ಕಾರು, ಬೈಕ್​ಗಳಲ್ಲಿ ಶಾಪಿಂಗ್ ಅಂತಾ​ ಇಲ್ಲಿಗೆ ಬರುತ್ತಿದ್ದ ಗ್ರಾಹಕರು ಉಚಿತವಾಗಿ ವಾಹನಗಳನ್ನ ಪಾರ್ಕಿಂಗ್​ ಮಾಡಿ ಹೋಗುತ್ತಿದ್ದರು. ಆದರೆ ಈ ರಸ್ತೆಯಲ್ಲಿ ಪೇ ಆ್ಯಂಡ್​ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡುವುದಕ್ಕೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ: Bengaluru Pay and Park: ಬೆಂಗಳೂರಿನಲ್ಲಿ ಅಲ್ಲಲ್ಲಿ ವಾಹನ ಪಾರ್ಕ್​ ಮಾಡುವವರಿಗೆ ಜಿಬಿಎ ಶಾಕ್!

ಇನ್ನು ಪಶ್ಚಿಮ ನಗರ ಪಾಲಿಕೆ ಟೆಂಡರ್ ಆಹ್ವಾನ ಮಾಡಿದ್ದು, ಸಂಪಿಗೆ ರಸ್ತೆ, 11,15 ಹಾಗೂ 18ನೇ ಅಡ್ಡರಸ್ತೆಗಳಲ್ಲಿ ಪಾರ್ಕಿಂಗ್​ಗೆ ಶುಲ್ಕ ಸಂಗ್ರಹಿಸಲಿದೆ. ವಾರ್ಷಿಕ ಪರವಾನಿಗೆ ಪಡೆಯಲು ಬಯಸುವ ಏಜೆನ್ಸಿಗಳಿಗೆ 2.20 ಕೋಟಿ ರೂಪಾಯಿಗಳ ಶುಲ್ಕವನ್ನ ನಿಗದಿ ಮಾಡಿದೆ. ಆದರೆ ಪಾಲಿಕೆ ನಿರ್ಧಾರದ ವಿರುದ್ಧ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲೆಲ್ಲ ಶೀಘ್ರ ಪೇ ಆ್ಯಂಡ್​ ಪಾರ್ಕಿಂಗ್​? ದುಬಾರಿ ವೆಚ್ಚ ಸರಿದೂಗಿಸಲು ಜಿಬಿಎ ಹೊಸ ಪ್ಲಾನ್

ಬಟ್ಟೆ, ಚಪ್ಪಲಿ, ಅಲಂಕಾರಿಕ ವಸ್ತುಗಳು, ಆಹಾರ ಉತ್ಪನ್ನಗಳ ಖರೀದಿಗೆ ಮುಗಿಬೀಳುತ್ತಿದ್ದ ಗ್ರಾಹಕರಿಗೆ ಸಂಪಿಗೆ ರಸ್ತೆ ಮತ್ತಷ್ಟು ದುಬಾರಿಯಾಗಲಿದೆ. ಉಚಿತವಾಗಿ ಪಾರ್ಕ್ ಮಾಡಿ ಹೋಗುತ್ತಿದ್ದ ಜನರಿಗೆ ಶೀಘ್ರದಲ್ಲೇ ಈ ಹೊರೆ ಬಿಸಿಮುಟ್ಟಿಸಲಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *