ಒಂದೆರಡು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆರೆ, ಗುಡ್ಡ ಕುಸಿತದಂತಹ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಒಗೆದ ಬಟ್ಟೆ (Cloth) ಒಣಗುತ್ತಿಲ್ಲ ಅನ್ನೋ ಟೆನ್ಷನ್. ಹೌದು ಸೂರ್ಯನ ಬೆಳಕಿನ ಕೊರತೆ, ತೇವಯುಕ್ತ ವಾತಾವರಣ ಇವೆಲ್ಲದರ ಕಾರಣದಿಂದಾಗಿ ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದೇ ಇಲ್ಲ. ಬಟ್ಟೆ ಸರಿಯಾಗಿ ಒಣಗದಿದ್ದರೆ ಕೆಟ್ಟ ವಾಸನೆ ಕೂಡ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಸರಳ ವಿಧಾನಗಳ ಮೂಲಕ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸುವ ಸುಲಭ ವಿಧಾನ:
ಹೇರ್ ಡ್ರೈಯರ್ ಬಳಕೆ: ಒಗೆದ ಬಟ್ಟೆಗಳಿಂದ ಹೆಚ್ಚುವರಿ ನೀರನ್ನು ಹಿಂಡಿ ಹೊರತೆಗೆಯಿರಿ. ನಂತರ ಹೇರ್ ಡ್ರೈಯರ್ ಬಳಸಿ ಅವುಗಳನ್ನು ಚೆನ್ನಾಗಿ ಒಣಗಿಸಿ. ಶರ್ಟ್‌ಗಳು, ಸಾಕ್ಸ್‌ಗಳು ಮತ್ತು ಕರವಸ್ತ್ರಗಳಂತಹ ಸಣ್ಣ ವಸ್ತುಗಳನ್ನು ಒಣಗಿಸಲು ಈ ವಿಧಾನವು ಉತ್ತಮವಾಗಿದೆ. ಆದರೆ ಹೇರ್ ಡ್ರೈಯರ್ ಅನ್ನು ಬಟ್ಟೆಯ ಯಾವುದೇ ಭಾಗದಲ್ಲಿ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಬೇಡಿ, ಏಕೆಂದರೆ ಅತಿಯಾದ ಶಾಖವು ಬಟ್ಟೆಗಳಿಗೆ ಹಾನಿ ಮಾಡುತ್ತದೆ.
ಇಸ್ತ್ರಿ ಮಾಡುವುದು: ಈ ಮಳೆಗಾಲದಲ್ಲಿ ಬಿಸಿಲಿನ ಕೊರತೆಯಿಂದ ಒದ್ದೆಯಾದ ಬಟ್ಟೆಗಳು ಸರಿಯಾಗಿ ಒಣಗದಿದ್ದರೆ, ಅವುಗಳನ್ನು ಇಸ್ತ್ರಿ ಮಾಡಿ. ಇಸ್ತ್ರಿ ಮಾಡುವಾಗ ಉತ್ಪತ್ತಿಯಾಗುವ ಶಾಖವು ಬಟ್ಟೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಜೀನ್ಸ್ ಅಥವಾ ಸ್ವೆಟರ್‌ಗಳಂತಹ ದಪ್ಪ ಬಟ್ಟೆಗಳನ್ನು ಒಣಗಿಸಲು ಈ ವಿಧಾನವು ಉಪಯುಕ್ತವಾಗಿದೆ.
ಫ್ಯಾನ್ ಬಳಸಿ: ಮಳೆಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಮನೆಯೊಳಗೆಯೇ ಬಟ್ಟೆಗಳನ್ನು ಒಣಗಿಸುತ್ತಾರೆ. ಹೀಗಿರುವಾಗ ಕೋಣೆಯಲ್ಲಿ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡಿ. ಫ್ಯಾನ್ ಗಾಳಿಯು ಬಟ್ಟೆಗಳಿಂದ ತೇವಾಂಶವನ್ನು ಸುಲಭವಾಗಿ ಆವಿಯಾಗಿಸಲು ಸಹಾಯ ಮಾಡುತ್ತದೆ. ಮತ್ತು ಬಟ್ಟೆಗಳು ವೇಗವಾಗಿ ಒಣಗುತ್ತವೆ.
ಹೀಟರ್ ಬಳಸಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಲು ನೀವು ಅವುಗಳನ್ನು ಬಳಸಬಹುದು. ನಿಮ್ಮ ಹೀಟರ್ ಅನ್ನು ಕೋಣೆಯಲ್ಲಿ ಇರಿಸಿ ಮತ್ತು ಬಟ್ಟೆ ಒಣಗಲು ಬಿಡಿ. ಹೀಟರ್‌ನಿಂದ ಬರುವ ಶಾಖವು ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.
ಬಟ್ಟೆಗಳನ್ನು ಚೆನ್ನಾಗಿ ಹಿಂಡಿ: ಒಗೆದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೀರಿ ಎಂದಾದ್ರೆ ಎಕ್ಸ್‌ಟ್ರಾ ಸ್ಪಿನ್ ಅಥವಾ ಡ್ರೈಯರ್ ಮೋಡ್ ಅನ್ನು ಬಳಸಿಕೊಂಡು ಬಟ್ಟೆಗಳನ್ನು ಡ್ರೈ ಮಾಡಿ ನಂತರ ಒಣಗಲು ಹಾಕಿ. ವಾಷಿಂಗ್ ಮೆಷಿನ್ ಇಲ್ಲ ಎಂದಾದ್ರೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಪೈಪ್‌ನಲ್ಲಿ ಪೈಪ್‌ನಲ್ಲಿ ನೇತುಹಾಕಿ. ಬಟ್ಟೆಯಿಂದ ನೀರು ಸಂಪೂರ್ಣವಾಗಿ ಬರಿದಾಗಲು ಬಿಡಿ ಮತ್ತು ನಂತರ ಅವುಗಳನ್ನು ಒಣಗಲು ಹಾಕಿ.
ಇದನ್ನೂ ಓದಿ: ಮಳೆಗಾಲದಲ್ಲಿ ಸ್ನಾನಗೃಹದ ನೆಲ ಜಾರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ದಪ್ಪ ಮತ್ತು ತೆಳುವಾದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಣಗಿಸಿ: ಜೀನ್ಸ್, ಟವೆಲ್ ಮತ್ತು ಕಂಬಳಿಗಳಂತಹ ದಪ್ಪ ಬಟ್ಟೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಉತ್ತಮ ಗಾಳಿಯ ಹರಿವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಹಗುರವಾದ ಬಟ್ಟೆಗಳಿಂದ ಪ್ರತ್ಯೇಕವಾಗಿ ಒಣಗಿಸಿ. ಜೊತೆಗೆ ಎಲ್ಲಾ ಬಟ್ಟೆಗಳನ್ನು ದೂರ ದೂರ ಇಟ್ಟು ಒಣಗಲು ಬಿಡಿ. ಏಕೆಂದರೆ ತುಂಬಾ ಹತ್ತಿರದಲ್ಲಿ ಒಣ ಹಾಕಿದರೆ, ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಒದ್ದೆಯಾಗುವ ಸ್ಥಳದಲ್ಲಿ ಬಟ್ಟೆಗಳನ್ನು ಒಣಗಿಸಬೇಡಿ: ನಗೃಹ ಅಥವಾ ಮುಚ್ಚಿದ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸುವುದರಿಂದ ಅವು ನಿಧಾನವಾಗಿ ಒಣಗುತ್ತವೆ ಮತ್ತು ಇದರಿಂದಾಗಿ ಬಟ್ಟೆಯಿಂದ ಕೆಟ್ಟ ವಾಸನೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಉತ್ತಮ ಗಾಳಿಯ ಪ್ರಸರಣ ಇರುವ ಕೋಣೆಯಲ್ಲಿ ಬಟ್ಟೆ ಒಣಗಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
