ಮಳೆಗಾಲದಲ್ಲಿ ಪ್ರವಾಸ ಹೋಗುವಾಗ ಅನುಸರಿಸಲೇಬೇಕಾದ ಸುರಕ್ಷತಾ ಕ್ರಮಗಳಿವು – Kannada News | Follow these tips for a safe trip during the monsoon season

ಮಳೆಗಾಲದಲ್ಲಿನ (rainy season) ಜಿಟಿ ಜಿಟಿ ಮಳೆ, ತಂಪಾದ ವಾತಾವರಣದಲ್ಲಿ ಪರ್ವತ ಪ್ರದೇಶಗಳಿಗೆ, ತುಂಬಿ ಹರಿಯುವ ಜಲಪಾತವಿರುವ ಸ್ಥಳಗಳಿಗೆ ಪ್ರವಾಸ ಹೋಗುವುದೆಂದರೆ ಹಲವರಿಗೆ ಬಲು ಇಷ್ಟ. ಆದರೆ ಮಳೆಗಾಲದ ಪ್ರವಾಸ ಅಂದುಕೊಂಡಷ್ಟು ಸುಲಭದ್ದಾಗಿರುವುದಿಲ್ಲ. ಹೌದು ಹಠಾತ್ ಮಳೆ ಮತ್ತು ಜಾರುವ ರಸ್ತೆಗಳು ಪ್ರಯಾಣದ ವಿಳಂಬಕ್ಕೆ ಕಾರಣವಾಗಬಹುದು. ಇನ್ನೂ ಪ್ರವಾಸವನ್ನು ಸಂಪೂರ್ಣವಾಗಿ ಆನಂದಿಸಲು, ಮುಂಚಿತವಾಗಿಯೇ ಒಂದಷ್ಟು ತಯಾರಿ ಮಾಡುವುದು ಬಹಳ ಮುಖ್ಯ. ಸುರಕ್ಷಿತ ಮತ್ತು ಆರಾಮದಾಯಕ ಮಾನ್ಸೂನ್‌ ಪ್ರವಾಸಕ್ಕಾಗಿ ಈ ಸಲಹೆಗಳನ್ನು ನೀವು ಪಾಲಿಸಲೇಬೇಕು.

ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುವಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು:

ಸರಿಯಾದ ಬಟ್ಟೆಗಳನ್ನು ಧರಿಸಿ: ಟ್ರಿಪ್‌ಗೆ ಬೇಗನೆ ಒಣಗುವ ಮತ್ತು ಹೆಚ್ಚು ಕಾಲ ಒದ್ದೆಯಾಗದ ಬಟ್ಟೆಗಳನ್ನು ಪ್ಯಾಕ್ ಮಾಡಿ. ಮುಖ್ಯವಾಗಿ ಬ್ಯಾಗ್‌ನಲ್ಲಿ ರೈನ್‌ಕೋಟ್‌ ಅಥವಾ ಛತ್ರಿಯನ್ನು ಇಟ್ಟುಕೊಂಡಿರಿ. ಜಲನಿರೋಧಕ ಮತ್ತು ಜಾರದಂತಹ ಶೂಗಳನ್ನೇ ಟ್ರಿಪ್‌ನಲ್ಲಿ ಧರಿಸಿ. ಮಳೆಯಲ್ಲಿ ಚಪ್ಪಲಿಗಳು ಅಥವಾ ಫ್ಲಿಪ್-ಫ್ಲಾಪ್‌ ಧರಿಸುವುದನ್ನು ತಪ್ಪಿಸಿ, ಏಕೆಂದರೆ ಇವು ಸುಲಭವಾಗಿ ಜಾರುತ್ತವೆ.

ಹವಾಮಾನ ಮಾಹಿತಿಯನ್ನು ಪಡೆಯಿರಿ: ಮಳೆಗಾಲದಲ್ಲಿ ಎಲ್ಲಾದರೂ ಟ್ರಿಪ್‌ ಹೋಗೋ ಪ್ಲಾನ್‌ ಮಾಡುವಾಗ ನೀವು ಹೋಗುವಂತಹ ಸ್ಥಳದ ಹವಾಮಾನ ಹೇಗಿದೆ ಎಂಬುದರ ಮಾಹಿತಿಯನ್ನು ಪಡೆಯುವುದು ತುಂಬಾನೇ ಮುಖ್ಯ. ನಿಮ್ಮ ಪ್ರವಾಸವನ್ನು ಕೈಗೊಳ್ಳುವ ಮೊದಲು, ನೀವು ಪ್ರಯಾಣಿಸುತ್ತಿರುವ ಪ್ರದೇಶದ ಹವಾಮಾನವನ್ನು ಪರಿಶೀಲಿಸಲು ಮರೆಯದಿರಿ. ನಿರಂತರ ಭಾರೀ ಮಳೆ ಅಥವಾ ಕೆಟ್ಟ ಹವಾಮಾನದ ಎಚ್ಚರಿಕೆ ಇದ್ದರೆ, ನಿಮ್ಮ ಪ್ರವಾಸವನ್ನು ಕೆಲವು ದಿನಗಳವರೆಗೆ ಮುಂದೂಡುವುದು ಉತ್ತಮ. ಅಲ್ಲದೆ, ನೀವು ಹೋಗುವ ಮಾರ್ಗದಲ್ಲಿ ರಸ್ತೆ ಮುಚ್ಚುವಿಕೆ ಅಥವಾ ಭೂಕುಸಿತದ ಯಾವುದೇ ವರದಿಗಳಿವೆಯೇ ಎಂದು ಪರಿಶೀಲಿಸಿ. ೀ ನಿಖರವಾದ ಮಾಹಿತಿ ನಿಮ್ಮನ್ನು ಗಂಭೀರ ತೊಂದರೆಯಿಂದ ರಕ್ಷಿಸಬಹುದು.

ಎಲೆಕ್ಟ್ರಾನಿಕ್ಸ್ ವಸ್ತುಗಳ ಬಗ್ಗೆ ಕಾಳಜಿ ವಹಿಸಿ: ಮಳೆಗಾಲದಲ್ಲಿ ಫೋನ್‌ಗಳು, ಪವರ್ ಬ್ಯಾಂಕ್‌ಗಳು, ಕ್ಯಾಮೆರಾಗಳು ಮತ್ತು ಕ್ಯಾಮೆರಾದಂತಹ  ಎಲೆಕ್ಟ್ರಾನಿಕ್ ವಸ್ತುಗಳು ಬೇಗನೆ ಹಾನಿಗೊಳಗಾಗಬಹುದು. ಹಾಗಾಗಿ ಈ ಎಲೆಕ್ಟ್ರಾನಿಕ್‌ ವಸ್ತುಗಳ ಸೇಫ್ಟಿಗಾಗಿ ಜಲನಿರೋಧಕ ಪೌಚ್‌ಗಳು ಅಥವಾ ಗಾಳಿಯಾಡದ ಜಿಪ್ ಬ್ಯಾಗ್‌ಗಳನ್ನು ಬಳಸಿ. ಹೆಚ್ಚುವರಿಯಾಗಿ, ನಿಮ್ಮ ಗುರುತಿನ ಚೀಟಿಗಳು, ಪ್ರಮುಖ ದಾಖಲೆಗಳ ಹಾರ್ಡ್ ಕಾಪಿಗಳನ್ನು ಜಲನಿರೋಧಕ ಕವರ್‌ಗಳಲ್ಲಿ ಇರಿಸಿ.

ಇದನ್ನೂ ಓದಿ: ಮಳೆಗಾಲದಲ್ಲಿ ಕರೆಂಟ್‌ ಶಾಕ್‌ ಅಪಾಯಗಳನ್ನು ತಪ್ಪಿಸಲು ಸಲಹೆಗಳನ್ನು ಅನುಸರಿಸಿ

ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ: ಮಳೆಗಾಲದಲ್ಲಿ ಟ್ರಿಪ್‌ ಹೋಗುವಾಗ ಅಲ್ಲಲ್ಲಿ ಗಾಡಿಯನ್ನು ನಿಲ್ಲಿಸಿ ಬೀದಿ ಬದಿಯ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸಿ, ಸಿಕ್ಕಸಿಕ್ಕ ಆಹಾರಗಳನ್ನು ಸೇವಿಸುವುದನ್ನು ಕೂಡ ತಪ್ಪಿಸಿ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಯಾವಾಗಲೂ ತಾಜಾ ಮತ್ತು ಬಿಸಿ ಆಹಾರವನ್ನು ಸೇವಿಸಿ. ಮತ್ತುಡ್ರೈಫ್ರೂಟ್ಸ್‌, ಪ್ರೋಟೀನ್ ಬಾರ್‌ಗಳನ್ನು ತೆಗೆದುಕೊಂಡು ಹೋಗಿ.

ನಗದು, ಪವರ್ ಬ್ಯಾಂಕ್ ಇಟ್ಟುಕೊಳ್ಳಿ: ಪರ್ವತ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸಮಸ್ಯೆ ಹೆಚ್ಚಾಗಿರುತ್ತವೆ. ಆದ್ದರಿಂದ, ಟ್ರಿಪ್‌ ಹೊರಡುವ ಮುನ್ನ ಫೋನ್‌ ಫುಲ್‌ ಚಾರ್ಜ್‌ ಮಾಡಿ ಮತ್ತು  ಪವರ್ ಬ್ಯಾಂಕ್ ಇಟ್ಟುಕೊಳ್ಳಿ. ಅಲ್ಲದೆ, ಆನ್‌ಲೈನ್ ಪಾವತಿಗಳು ಅನೇಕ ಸ್ಥಳಗಳಲ್ಲಿ ಕೆಲಸ ಮಾಡದ ಕಾರಣ, ಸ್ವಲ್ಪ ನಗದು ಹಣವನ್ನು ಇಟ್ಟುಕೊಳ್ಳಿ. ಇದಲ್ಲದೆ ಜ್ವರ, ನೋವು, ಶೀತ, ಅಲರ್ಜಿಗೆ ಸಂಬಂಧಿಸಿದ ಔಷಧಿ ಮತ್ತಯ ನಂಜುನಿರೋಧಕ ಕ್ರೀಮ್‌ಗಳನ್ನು ಇಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *