ಮಳೆಗಾಲದಲ್ಲಿ ವಾತಾವರಣವು ತುಂಬಾ ತುಂಬಾ ತಂಪಾಗಿರುತ್ತದೆ. ಜೊತೆಗೆ ವಾತಾವರಣದಲ್ಲಿ ತೇವಾಂಶವೂ ಹೆಚ್ಚಿರುತ್ತದೆ. ಈ ಆರ್ದ್ರತೆಯು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವಿಶೇಷವಾಗಿ ರೆಫ್ರಿಜರೇಟರ್‌ಗಳ (refrigerator) ಒಳಗೆ ಆರ್ದ್ರತೆಯ ಮಟ್ಟ ತೀರಾ ಹೆಚ್ಚಾಗುತ್ತವೆ, ಇದರಿಂದಾಗಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ ತರಕಾರಿಗಳು ಮತ್ತು ಹಣ್ಣುಗಳು, ಮಸಾಲೆ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಇದಲ್ಲದೆ, ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ರೆಫ್ರಿಜರೇಟರ್‌ನಿಂದ ಅಹಿತಕ ವಾಸನೆ ಹೊರಹೊಮ್ಮುತ್ತದೆ. ಇದು ಇಡೀ ಅಡುಗೆಮನೆಯ ಪರಿಸರವನ್ನೇ ಹಾಳು ಮಾಡುತ್ತದೆ. ಹೀಗಿರುವಾಗ ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯಲು ಒಂದು ಬೌಲ್ ಉಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಈ ಕಿಚನ್ ಹ್ಯಾಕ್ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಫ್ರಿಡ್ಜ್‌ನಲ್ಲಿ ಒಂದು ಬೌಲ್ ಉಪ್ಪು ಇಡುವುದರ ಪ್ರಯೋಜನಗಳೇನು?
ರೆಫ್ರಿಜರೇಟರ್‌ನಲ್ಲಿ ಒಂದು ಬೌಲ್ ಉಪ್ಪನ್ನು ಇಡುವುದರಿಂದ ಇದು ತೇವಾಂಶವನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ನೀವು ರೆಫ್ರಿಜರೇಟರ್ ಒಳಗೆ ಒಂದು ಸಣ್ಣ ಬಟ್ಟಲಿನಲ್ಲಿ 100 ರಿಂದ 150 ಗ್ರಾಂ ಕಲ್ಲುಪ್ಪನ್ನು ಇರಿಸಿದಾಗ, ಅದು ಗಾಳಿಯಿಂದ ಹೆಚ್ಚುವರಿ ತೇವಾಂಶವನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಉಪ್ಪು ನೈಸರ್ಗಿಕ ತೇವಾಂಶ ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ಇದು ರೆಫ್ರಿಜರೇಟರ್‌ನೊಳಗಿನ ತೇವಾಂಶವನ್ನು ಕಡಿಮೆ ಮಾಡುತ್ತದೆ, ರೆಫ್ರಿಜರೇಟರ್ ಅನ್ನು ಒಣಗಿಸಿ ಬ್ಯಾಕ್ಟೀರಿಯಾ ಮುಕ್ತವಾಗಿರಿಸುತ್ತದೆ. ಜೊತೆಗೆ ಕೆಲವೊಂದಿಷ್ಟು ಲಾಭಗಳನ್ನೂ ನೀಡುತ್ತದೆ.
ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ: ಮಳೆಗಾಲದಲ್ಲಿ ರೆಫ್ರಿಜರೇಟರನ್ನು ಆಗಾಗ್ಗೆ ತೆರೆದಾಗ, ಒಳಗೆ ತೇವಾಂಶ ಸಂಗ್ರಹವಾಗುತ್ತದೆ. ಈ ತೇವಾಂಶ ಹೆಚ್ಚಾದರೆ, ತರಕಾರಿಗಳು ಬೇಗನೆ ಹಾಳಾಗುತ್ತವೆ ಮತ್ತು ಬ್ಯಾಕ್ಟೀರಿಯಾಗಳು ಸಹ ಬೆಳೆಯಲು ಪ್ರಾರಂಭಿಸುತ್ತವೆ. ಉಪ್ಪು ತೇವಾಂಶವನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ, ರೆಫ್ರಿಜರೇಟರ್‌ನಲ್ಲಿ ಉಪ್ಪು ಇಡುವುದರಿಂದ ಇಡುವುದರಿಂದ ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೂಕೋಸಿನಲ್ಲಿರುವ ಹುಳ, ಕೀಟಗಳನ್ನು ತೆಗೆದುಹಾಕಲು ಈ ಟಿಪ್ಸ್ ಅನುಸರಿಸಿ
ಉಪ್ಪು ವಾಸನೆಯನ್ನು ಹೋಗಲಾಡಿಸುತ್ತದೆ: ತರಕಾರಿಗಳು, ಹಣ್ಣುಗಳು, ಬೇಯಿಸಿದ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಿದಾಗ, ಅವು ಅನಿಲಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಈ ಅನಿಲವು ರೆಫ್ರಿಜರೇಟರ್‌ನಾದ್ಯಂತ ಹರಡಿ, ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಉಪ್ಪು ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀವು ಒಂದು ಬೌಲ್ ಕಲ್ಲುಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಈ ತಂತ್ರ ಫ್ರಿಡ್ಜ್‌ನ ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ತೇವಾಂಶವನ್ನು ನಿಯಂತ್ರಣದಲ್ಲಿಡುವ ಮೂಲಕ, ರೆಫ್ರಿಜರೇಟರ್‌ನಲ್ಲಿ ಹೆಚ್ಚುವರಿ ಒತ್ತಡವನ್ನು ತಡೆಯುತ್ತದೆ.
ಫ್ರಿಡ್ಜ್‌ನಲ್ಲಿ ಉಪ್ಪನ್ನು ಸಂಗ್ರಹಿಸಿಡುವುದು ಹೇಗೆ?
ನಿಮ್ಮ ರೆಫ್ರಿಜರೇಟರ್‌ನಿಂದ ವಾಸನೆ ಮತ್ತು ತೇವಾಂಶವನ್ನು ತೆಗೆದುಹಾಕಲು, ಒಂದು ಸಣ್ಣ ಬೌಲ್ ಅಥವಾ ತೆರೆದ ಡಬ್ಬದಲ್ಲಿ 100 ರಿಂದ 150 ಗ್ರಾಂ ಅಥವಾ 3 ರಿಂದ 4 ಚಮಚ ಉಪ್ಪನ್ನು ಹಾಕಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿಡಿ. ಪುಡಿ ಉಪ್ಪಿಗಿಂತ ಕಲ್ಲುಪ್ಪು ಹೆಚ್ಚು ಪರಿಣಾಮಕಾರಿಯಾಗಿದೆ. ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಉಪ್ಪನ್ನು ಬದಲಾಯಿಸುತ್ತಿರಬೇಕು. ಉಪ್ಪಿನ ಬದಲಿಗೆ ಅಡಿಗೆ ಸೋಡಾವನ್ನು ಸಹ ಬಳಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
