Headlines

ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ? – Kannada News | Heartwarming: Bengaluru Auto Driver’s Kindness Amidst Rain Wins Hearts

ಬೆಂಗಳೂರು, ಮೇ.1: ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳಿಂದ ಸುರಿದ ಮಳೆಗೆ ಭಾರೀ ಅನಾಹುತಗಳು ಆಗಿವೆ. ಇದರ ನಡುವೆ ಕೆಲವೊಂದು ಮಾನವೀಯತೆಯ ಘಟನೆಗಳು ಕೂಡ ನಡೆದಿದೆ. ಅದರಲ್ಲೂ ಆಟೋ ಚಾಲಕರು ಕೆಲವೊಂದು ಕಡೆ ಮಾನವೀಯತೆಯನ್ನು ಮೆರೆದಿದ್ದಾರೆ. ಇದೀಗ ಇಲ್ಲೊಂದು ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಆಟೋ ಚಾಲಕ ಮಾಡಿದ ಸಹಾಯದ ಬಗ್ಗೆ ಇಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಎಂಬ ಮಹಿಳೆ ಜೆಪಿ ನಗರದಿಂದ ಕೋರಮಂಗಲಕ್ಕೆ ದಿನನಿತ್ಯದ ಪ್ರಯಾಣದಲ್ಲಿ ಹೇಗೆ ದಯೆ ಮತ್ತು ಸಹಾನುಭೂತಿಯ ಭಾವನಾತ್ಮಕ ವಿಚಾರಗಳು ಇರುತ್ತದೆ ಎಂಬ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

“ಆಟೋ ಬುಕ್ ಮಾಡುವಾಗ ಮಳೆ ಬರುತ್ತಿರಲಿಲ್ಲ, ಆದರೆ ಪ್ರಯಾಣ ಪ್ರಾರಂಭವಾದ ಕೂಡಲೇ ಮಳೆ ಬರಲು ಶುರುವಾಗಿದೆ. ಜೆಪಿ ನಗರದಿಂದ ಕೋರಮಂಗಲಕ್ಕೆ ಹೋಗುವಾಗ ಮಳೆ ಬರಲು ಪ್ರಾರಂಭವಾಗಿತ್ತು ಎಂದು ಪ್ರಿಯಾಂಕ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಮಳೆ ಕಡಿಮೆ ಇತ್ತು ಮತ್ತು ತಂಪಾದ ವಾತಾವರಣ ಖುಷಿ ನೀಡಿತ್ತು. ಆದರೆ ಸ್ವಲ್ಪ ಹೊತ್ತಿಲ್ಲ ನಂತರ ಜೋರು ಮಳೆ ಬರಲು ಆರಂಭಿಸಿದೆ. ಇನ್ನು ನಾನು ಹೋಗುತ್ತಿದ್ದ ಆಟೋ ಆ ಕಡೆ ಈ ಕಡೆ ಯಾವುದೇ ಪರದೆ ಇರಲಿಲ್ಲ. ಓಪನ್​ ಇತ್ತು. ನಾನು ಮತ್ತು ಚಾಲಕ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಒದ್ದೆಯಾಗಿದ್ದೆವು” ಎಂದು ಹೇಳಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಆದರೆ ಈ ವೇಳೆ ಆಟೋ ಚಾಲಕ ನನ್ನನ್ನೂ ಗಮನಿಸುತ್ತ ಇದ್ದರು, ಪಾಪ ಅವರಿಗೆ ನಾನು ಒದ್ದೆಯಾದೆ ಎಂಬ ಚಿಂತೆ ಕಾಡುತ್ತಿತ್ತು. ಏನು ಮಾಡುವುದು ಎಂಬ ಯೋಚನೆ ಮಾಡುತ್ತಿದ್ದರು. ನಾನು ಇದನ್ನು ಗಮನಿಸಿದೆ. ಆದರೆ ನನಗೆ ಈ ಬಗ್ಗೆ ಚಿಂತೆ ಇರಲಿಲ್ಲ. ಯಾಕೆಂದರೆ ನಾನು ಮನೆ ಹೋಗುತ್ತಿದ್ದ ಕಾರಣ ಮನೆ ಹೋಗಿ ಬಟ್ಟೆ ಬದಲಾಯಿಸಬಹುದು ಎಂದುಕೊಂಡೆ. ಅದರೂ ನಾನು ಕೇಳಿದೆ ಇಷ್ಟು ಜೋರಾಗಿ ಮಳೆ ಬರುತ್ತಿದ್ದರು ಯಾಕೆ ಎಲ್ಲೂ ನಿಲ್ಲಿಸುತ್ತಿಲ್ಲ ಎಂದು, ಆ ಚಾಲಕನಿಂದ ಬಂದ ಉತ್ತರ ನಾನು ಯಾವತ್ತೂ ಮರೆಯುವುದಿಲ್ಲ. “ಮ್ಯಾಡಮ್, ನೀವು ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಕಾರಣಕ್ಕೆ ನಾನು ನಿಲ್ಲಲಿಲ್ಲ; ಇಲ್ಲದಿದ್ದರೆ ಎಲ್ಲಾದರೂ ಆಟೋ ನಿಲ್ಲಿಸುತ್ತಿದ್ದೆ ಎಂದು ಹೇಳಿದ್ದಾರೆ. ಈ ಮಾತನ್ನು ಯಾವದೇ ಕಾರಣಕ್ಕೂ ನಾನು ಮರೆಯುವುದಿಲ್ಲ ಎಂದು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ಹೀಗೆ ಆಟೋ ಚಾಲಕ ಹಾಗೂ ಪ್ರಿಯಾಂಕ ಅವರ ಮಾತುಕತೆ ನಡೆಯುತ್ತಿತ್ತು. ನಿಮ್ಮ ಮನೆ ಎಲ್ಲಿ ಎಂದು ಕೇಳಿದೆ. ಅದಕ್ಕೆ ಆಟೋ ಚಾಲಕ ನನ್ನ ಮನೆ ಬನಶಂಕರಿ ಎಂದು ಹೇಳಿದ್ದಾರೆ. ಪ್ರಿಯಾಂಕ ಅವರು ಡ್ರಾಪ್​ ಬಂದಾಗ ಅವರು ಚಾಲಕನ ಬಳಿ ಕೇಳಿದ್ರೂ ಮುಂದೆ ಎಲ್ಲಿಗೆ ಪಯಾಣ ಎಂದು, ಎಲ್ಲಿಗೂ ಇಲ್ಲ ಮೇಡಂ ಎಂದು ಹೇಳಿದ್ದಾರೆ. ಆಟೋ ಚಾಲಕನ ಪರಿಸ್ಥಿತಿಯಿಂದ ಮನಸ್ಸು ಮಿಡಿದ ಪ್ರಿಯಾಂಕಾ, ಅಣ್ಣ ಸ್ವಲ್ಪ ಹೊತ್ತು ಕಾಯಿರಿ ಎಂದು ಹೇಳಿ ಒಂದು ಟಿ-ಶರ್ಟ್ ತೆಗೆದುಕೊಂಡು ಬಂದು ಕೊಟ್ಟಿದ್ದಾರೆ. “ನಾನು ಟಿ-ಶರ್ಟ್ ಕೊಟ್ಟ ಕ್ಷಣ ಅವರ ನಗು ಎಲ್ಲವನ್ನೂ ಹೇಳಿತ್ತು. ಜತೆಗೆ ಈ ಟಿ-ಶರ್ಟ್ ಅವರಿಗೆ​​​​ ತುಂಬಾ ಅಗತ್ಯವಾಗಿತ್ತು. “ಕೆಲವೊಮ್ಮೆ ಮಾನವೀಯತೆ ಎಂದರೆ ಯಾರಾದರೊಬ್ಬರ ಅಸೌಕರ್ಯವನ್ನು ಗಮನಿಸಿ, ಸಾಧ್ಯವಾದಷ್ಟು ಸಹಾಯ ಮಾಡುವುದು,” ಎಂದೂ ಪ್ರಿಯಾಂಕ ಹೇಳಿದ್ದಾರೆ.

ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವುದು ಪ್ರಶಂಸೆಗೆ ಅಥವಾ ಪ್ರಚಾರಕ್ಕೆ ಅಲ್ಲ, ಒಂದು ನೆನಪು—ಚಿಕ್ಕದಾದ ಸಹಾಯವಾದರೂ ಯಾರಿಗಾದರೂ ಮಾಡುವುದು ಒಂದು ವಿಭಿನ್ನ ಸಂತೋಷವನ್ನು ಕೊಡುತ್ತದೆ. ಮತ್ತು ನಿಜವಾಗಿ, ಅಗತ್ಯವಿರುವವರಿಗೆ ಸಹಾಯ ಮಾಡುವ ಶಕ್ತಿ ಮತ್ತು ಅವಕಾಶವನ್ನು ನಮಗೆ ನೀಡಿದ ದೇವರಿಗೆ ಕೃತಜ್ಞತೆಗಾಗಿ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:06 am, Fri, 1 May 26

Source link

Leave a Reply

Your email address will not be published. Required fields are marked *