ಮಹಾ ತಿರುವು; ವಕೀಲ ವೃತ್ತಿಗೆ ಗುಡ್ ಬೈ ಹೇಳುವ ಶಪಥ ಮಾಡಿದ ಭಾರ್ಗವಿ – Kannada News | Bhargavi LLB: Shocking Twist! Bhargavi Quits Law? Colors Kannada Serial Latest Update

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇರುತ್ತವೆ. ಈಗ ಈ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಈ ಧಾರಾವಾಹಿ ಪ್ರಮುಖ ಹಾಗೂ ರೋಚಕ ಘಟ್ಟ ತಲುಪಿದೆ. ಈಗ ಧಾರಾವಾಹಿಯ ಕಥೆಯೇ ಬದಲಾಗುವ ಹಂತ ತಲುಪಿದೆ. ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿ ಈಗ ಬದಲಾಗುತ್ತಿದ್ದಾರೆ. ಇದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಪ್ರಭಾವಿ ವಕೀಲ ಜೆಪಿ ಪಾಟೀಲ್‌ನಿಂದ ಭಾರ್ಗವಿ ತಂದೆ ರವೀಂದ್ರ ಭಟ್ಕಳ್‌ ವಕೀಲ ವೃತ್ತಿಯಿಂದ ದೂರ ಆಗಿದ್ದರು. ಈಗ ಮತ್ತೆ ಅದೇ ಕೋರ್ಟ್‌ಗೆ ಅವರನ್ನು ಕರೆತರುವ ದಿಟ್ಟ ಗುರಿ ಹೊಂದಿದ್ದಳು ಭಾರ್ಗವಿ. ಆ ಕನಸು ಈಡೇರಿತ್ತು. ಆದರೆ, ಆದರೆ, ಇದೀಗ ಆ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅವಳ ಜೊತೆಗೆ ಅಪ್ಪನೇ ಇಲ್ಲ.

ಇದುವರೆಗೆ ಕಥೆಯಲ್ಲಿ ಭಾಗರ್ವಿ ಧೈರ್ಯದ ಸಂಕೇತ ಆಗಿದ್ದಳು. ವೀಕ್ಷಕರಲ್ಲೂ ಅವಳನ್ನು ನೋಡಿ ಒಂದು ಧೈರ್ಯ ಬಂದಿತ್ತು. ಆದರೆ, ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಅವರ ಅಕಾಲಿಕ ಸಾವು ಅವಳನ್ನು ಕಂಗಾಲಾಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೈರಿಗಳ ಕುತಂತ್ರವೋ ಎನ್ನುವ ಪ್ರಶ್ನೆ ಮೂಡಿದೆ.

ತಂದೆಯ ಸಾವಿನಿಂದ ಕಂಗಾಲಾಗಿರುವ ತಾಯಿ, ಅಪ್ಪನ ಸಾವಿಗೆ ಕಾರಣವಾದ ಈ ಲಾಯರ್‌ ಕೆಲಸ ಬಿಡುವಂತೆ ಭಾರ್ಗವಿಗೆ ಸೂಚಿಸಿದ್ದಾಳೆ. ತಾಯಿ ನೋವಿಗೆ ಸ್ಪಂದಿಸಿ ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಅಮ್ಮನೇ ಹೇಳುವವರೆಗೂ ವಕೀಲ ವೃತ್ತಿ ಮಾಡಲ್ಲ ಎಂದಿದ್ದಾಳೆ. ಈ ಮೂಲಕ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾಳೆ.

ಇದನ್ನೂ ಓದಿ: ಕಲರ್ಸ್​ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ

ಲಾಯರ್ ವೃತ್ತಿ ಬಿಟ್ಟ ಭಾರ್ಗವಿ ಹೇಗೆ ಜೀವನ ಮಾಡುತ್ತಾಳೆ? ಈ ಟ್ವಿಸ್ಟ್​​ನಿಂದ ಧಾರಾವಾಹಿ ಹೇಗೆ ಸಾಗುತ್ತದೆ ಎಂಬಿತ್ಯಾದಿ ಪ್ರಶ್ನೆ ಮೂಡಿದೆ. ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಭಾರ್ಗವಿ ಎಲ್​ಎಲ್ಬಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:29 am, Thu, 12 February 26

Source link

Leave a Reply

Your email address will not be published. Required fields are marked *