ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿರುವ ‘ಪೆದ್ದಿ’ ಸಿನಿಮಾ – Kannada News | Ram Charan starrer Peddi Movie Streaming on Netflix Trending at Number 3 Spot

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಯಶಸ್ಸು ಕಂಡಿತು. ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾಗೆ ಕಲೆಕ್ಷನ್ ಆಗಲಿಲ್ಲ. ಸಿನಿಮಾದ ಅನೇಕ ದೃಶ್ಯಗಳ ಬಗ್ಗೆ ಪ್ರೇಕ್ಷಕರಿಂದ ಟೀಕೆ ವ್ಯಕ್ತವಾಗಿತ್ತು. ಈಗ ‘ಪೆದ್ದಿ’ (Peddi) ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ನೆಟ್​ಫ್ಲಿಕ್ಸ್ ಟ್ರೆಂಡಿಂಗ್​ನಲ್ಲಿ ಈ ಚಿತ್ರ ಈಗ 3ನೇ ಸ್ಥಾನದಲ್ಲಿದೆ.

ರಾಮ್ ಚರಣ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹಾಗಿದ್ದರೂ ಕೂಡ ‘ಪೆದ್ದಿ’ ಸಿನಿಮಾಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗೆಲುವು ಸಿಗಲಿಲ್ಲ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡುತ್ತಿದ್ದಾರೆ. ಆ ಕಾರಣದಿಂದಲೇ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ನೆಟ್‌ಫ್ಲಿಕ್ಸ್‌ ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.

ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ:

ಬುಚ್ಚಿ ಬಾಬು ಸನಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸ್ಪೋರ್ಟ್ಸ್ ಆ್ಯಕ್ಷನ್ ಕಥಾಹಂದರದ ಈ ಪ್ಯಾನ್-ಇಂಡಿಯಾ ಚಿತ್ರವು ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಜುಲೈ 9ರಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಸಿನಿಮಾ ಬಗ್ಗೆ ಒಂದಷ್ಟು ಚರ್ಚೆ ಆಗಿತ್ತು. ಅದು ಒಟಿಟಿ ಬಿಡುಗಡೆ ನಂತರವೂ ಮುಂದುವರಿದಿದೆ.

ಟ್ರೋಲ್ ನಡುವೆಯೂ ವೀಕ್ಷಿಸಿದ ಜನ:

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಸಿನಿಮಾ ಬಗ್ಗೆ ಅನೇಕ ಬಗೆಯ ಮೀಮ್ಸ್ ಮಾಡಲಾಗಿದೆ. ‘ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಹುಟ್ಟಿತು. ತೆಲುಗು ಸಿನಿಮಾದಲ್ಲಿ ಅದು ಸತ್ತುಹೋಯಿತು’ ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ರೀತಿಯ ಟೀಕೆಯ ನಡುವೆಯೂ ಜನರು ಒಟಿಟಿಯಲ್ಲಿ ‘ಪೆದ್ದಿ’ ಸಿನಿಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಪೆದ್ದಿ ಸಿನಿಮಾ ಬಗೆಗಿನ ಟ್ರೋಲ್‌ ಬಗ್ಗೆ ಕೊನೆಗೂ ಮೌನ ಮುರಿದ ರಾಮ್ ಚರಣ್

ಪೆದ್ದಿ ಸಿನಿಮಾದ ಪಾತ್ರವರ್ಗ, ತಾಂತ್ರಿಕ ಬಳಗ:

ಭಾರಿ ಬಜೆಟ್​ನಲ್ಲಿ ‘ಪೆದ್ದಿ’ ಸಿನಿಮಾ ನಿರ್ಮಾಣ ಆಯಿತು. ಗ್ರಾಮೀಣ ಹಿನ್ನೆಲೆಯ ಕ್ರೀಡಾ ಜಗತ್ತಿನ ಕಥೆಯನ್ನು ಈ ಚಿತ್ರ ಹೊಂದಿದೆ. ತಾಂತ್ರಿಕವಾಗಿಯೂ ಈ ಸಿನಿಮಾ ಶ್ರೀಮಂತವಾಗಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಆರ್. ರತ್ನವೇಲು ಅವರ ಛಾಯಾಗ್ರಹಣ ಮಾಡಿದ್ದಾರೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಶಿವರಾಜ್‌ಕುಮಾರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *