ಮಳೆಗಾಲ ಅಥವಾ ಮುಂಗಾರು (Monsoon) ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ಕಡಿಮೆಯಿದ್ದರೂ, ತೇವಾಂಶ (Humidity) ಹೆಚ್ಚಿರುವುದರಿಂದ ಮನೆಯೊಳಗೆ ವಿಪರೀತ ಧಗೆ, ಉರಿ ಹಾಗೂ ಚರ್ಮದಲ್ಲಿ ಜಿಗುಟುತನ (Sticky feeling) ಅನುಭವಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನವರು ಎಸಿಯನ್ನು ‘Cool Mode’ನಲ್ಲೇ ಚಾಲನೆ ಮಾಡಿ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಕೊಠಡಿ ತಣ್ಣಗಾಗಬಹುದೇ ಹೊರತು ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುವುದಿಲ್ಲ. ಮೈಗೆ ಕಿರಿಕಿರಿ ತಪ್ಪುವುದಿಲ್ಲ.
ಇದಕ್ಕೆ ಸರಳ ಹಾಗೂ ಪರಿಣಾಮಕಾರಿ ಪರಿಹಾರ ಎಂದರೆ ನಿಮ್ಮ ಎಸಿಯನ್ನು ‘ಡ್ರೈ ಮೋಡ್’ (Dry Mode) ಗೆ ಬದಲಾಯಿಸುವುದು. ಇದು ಮನೆಯಲ್ಲಿ ತಂಪಾದ ವಾತಾವರಣ ನೀಡುವುದರ ಜೊತೆಗೆ ವಿದ್ಯುತ್ ಬಿಲ್ ಅನ್ನು ಸಹ ಗಣನೀಯವಾಗಿ ಕಡಿಮೆ ಮಾಡುತ್ತದೆ. ಮುಂಗಾರು ಸಂದರ್ಭದಲ್ಲಿ ಇದು ಉತ್ತಮ ಆಯ್ಕೆ ಎನಿಸುತ್ತದೆ.
‘ಡ್ರೈ ಮೋಡ್’ ಹೇಗೆ ಕೆಲಸ ಮಾಡುತ್ತದೆ?
ಎಸಿ ರಿಮೋಟ್‌ನಲ್ಲಿ ಹನಿಯ (Water Drop) ಚಿಹ್ನೆ ಹೊಂದಿರುವ ‘ಡ್ರೈ ಮೋಡ್’ ಮುಖ್ಯವಾಗಿ ಡಿಹ್ಯೂಮಿಡಿಫೈಯರ್ (Dehumidifier) ಆಗಿ ಕಾರ್ಯನಿರ್ವಹಿಸುತ್ತದೆ.
- ತೇವಾಂಶ ಹೀರಿಕೆ: ಈ ಮೋಡ್ ಕೊಠಡಿಯಲ್ಲಿರುವ ಹೆಚ್ಚುವರಿ ಆವಿ ಅಥವಾ ತೇವಾಂಶವನ್ನು ಹೊರತೆಗೆಯಲು ಆದ್ಯತೆ ನೀಡುತ್ತದೆ.
- ಕಂಪ್ರೆಸ್ಸರ್ ನಿಯಂತ್ರಣ: ಕೂಲ್ ಮೋಡ್‌ನಲ್ಲಿ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿದ್ದರೆ, ಡ್ರೈ ಮೋಡ್‌ನಲ್ಲಿ ಕಂಪ್ರೆಸರ್ ನಿಯಮಿತವಾಗಿ (Intermittently) ಆನ್ ಮತ್ತು ಆಫ್ ಆಗುತ್ತದೆ.
- ಗಾಳಿಯ ಹರಿವು: ಫ್ಯಾನ್ ಕಡಿಮೆ ವೇಗದಲ್ಲಿ ಚಲಿಸಿ ಗಾಳಿಯಲ್ಲಿನ ತೇವಾಂಶವನ್ನು ಎಸಿ ಯೂನಿಟ್ ಮೂಲಕ ಹೊರಹಾಕುತ್ತದೆ.
ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್ಗೆ ಚುಕ್ಕಾಣಿ
ಮುಂಗಾರಿನಲ್ಲಿ ಡ್ರೈ ಮೋಡ್ ಬಳಸುವುದರ ಪ್ರಮುಖ ಲಾಭಗಳು
- ಜಿಗುಟುತನದಿಂದ ಮುಕ್ತಿ: ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ ದೇಹದ ಬೆವರು ಸುಲಭವಾಗಿ ಆವಿಯಾಗಿ, ಜಿಗುಟುತನ ಮಾಯವಾಗಿ ತಂಪಾದ ಅನುಭವವಾಗುತ್ತದೆ.
- ವಿದ್ಯುತ್ ಬಿಲ್ ಉಳಿತಾಯ: ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡದಿರುವುದರಿಂದ ಕೂಲ್ ಮೋಡ್‌ಗೆ ಹೋಲಿಸಿದರೆ ಡ್ರೈ ಮೋಡ್‌ನಲ್ಲಿ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ.
- ವಾಸನೆ ಮತ್ತು ಫಂಗಸ್ ತಡೆ: ತೇವಾಂಶದಿಂದ ಕೊಠಡಿಯಲ್ಲಿ ಉಂಟಾಗುವ ದುರ್ವಾಸನೆ, ಬಟ್ಟೆಗಳ ತೇವ ಹಾಗೂ ಗೋಡೆ/ಪೀಠೋಪಕರಣಗಳಲ್ಲಿ ಬೂಷ್ಟು (Mold/Mildew) ಹಿಡಿಯುವುದನ್ನು ತಡೆಯುತ್ತದೆ.
- ಉತ್ತಮ ನಿದ್ರೆ: ರಾತ್ರಿ ವೇಳೆ ಕೊಠಡಿ ಅತಿಯಾಗಿ ತಣ್ಣಗಾಗದೆ, ಹಿತಕರವಾದ ತಾಪಮಾನ ಹಾಗೂ ಒಣ ಗಾಳಿ ಕಾಯ್ದುಕೊಳ್ಳುವುದರಿಂದ ಉತ್ತಮ ನಿದ್ರೆ ಪಡೆಯಬಹುದು.
- ಎಸಿ ಜೀವಿತಾವಧಿ ಹೆಚ್ಚಳ: ಕಂಪ್ರೆಸರ್ ಮೇಲಿನ ಒತ್ತಡ ಕಡಿಮೆಯಾಗುವುದರಿಂದ ಎಸಿಯ ಕಾರ್ಯಕ್ಷಮತೆ ಹಾಗೂ ಬಾಳಿಕೆ ಹೆಚ್ಚುತ್ತದೆ.
ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ
ಸಾಮಾನ್ಯವಾಗಿ 24°C ನಿಂದ 26°C ತಾಪಮಾನದೊಂದಿಗೆ ಡ್ರೈ ಮೋಡ್ ಬಳಸುವುದು ಸೂಕ್ತ. ಆದರೆ, ಹೊರಗಿನ ತಾಪಮಾನ 35°C ಗಿಂತ ಹೆಚ್ಚಿರುವ ವಿಪರೀತ ಬಿಸಿಲಿನ ದಿನಗಳಲ್ಲಿ ‘ಕೂಲ್ ಮೋಡ್’ ಬಳಸುವುದೇ ಸೂಕ್ತ; ಏಕೆಂದರೆ ಡ್ರೈ ಮೋಡ್ ಕೇವಲ ತೇವಾಂಶ ಹೆಚ್ಚಿರುವ (ಮಳೆಗಾಲದ) ದಿನಗಳಲ್ಲಿ ಮಾತ್ರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
