ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಮತ್ತೊಮ್ಮೆ ‘ಅಮೆರಿಕ ಅಮೆರಿಕ’ (America America) ಸಿನಿಮಾ ಮಾಡಿದ್ದಾರೆ. ಸಿನಿಮಾಕ್ಕೆ ‘ಅಮೆರಿಕ ಅಮೆರಿಕ 2’ ಎಂದು ಹೆಸರಿಟ್ಟಿದ್ದು, ಸಿನಿಮಾಕ್ಕೆ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ‘ಅಮೆರಿಕ ಅಮೆರಿಕ 2’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು, ‘ಮನೋಮೂರ್ತಿ ಅವರು ನನ್ನ ಸಿನಿಮಾಗಳಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು, ಆದರೆ ನಾನು ಮನೋಮೂರ್ತಿಯವರನ್ನು ಯೋಗರಾಜ್ ಭಟ್ಗೆ ಪರಿಚಯಿಸಿ ಆ ಮೂಲಕ ‘ಮುಂಗಾರು ಮಳೆ’ ಆಗಲು ಪರೋಕ್ಷ ಕಾರಣನಾದೆ’ ಎಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
