ಮುಂಬೈನ ಫುಟ್​ಪಾತ್​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ! – Kannada News | French President Emmanuel Macrons morning run in Mumbai Unnoticed By Bystanders

ಮುಂಬೈ, ಫೆಬ್ರವರಿ 17: ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ (Emmanuel Macron India Visit) 3 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ಬಾರಿ ಅವರು ದೆಹಲಿಯ ಬದಲು ಮುಂಬೈಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಮ್ಯಾಕ್ರನ್ ಅವರು ಮುಂಬೈನ ಫುಟ್​ಪಾತ್ ಮೇಲೆ ತಮ್ಮ ಸಿಬ್ಬಂದಿಯ ಜೊತೆ ಜಾಗಿಂಗ್ ಮಾಡಿದ್ದಾರೆ. ಆದರೆ, ಅಲ್ಲಿದ್ದವರಿಗೆ ಅವರು ಯಾರೆಂದು ಗುರುತು ಸಿಕ್ಕಿಲ್ಲ. ಹೀಗಾಗಿ, ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮುಂಬೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ ಮ್ಯಾಕ್ರನ್ ನಗರದಲ್ಲಿ ಜಾಗಿಂಗ್ ಮಾಡುತ್ತಿರುವ ದೃಶ್ಯ ಕಂಡುಬಂದಿತು. ಆದರೆ, ಬಹುತೇಕ ಜನರಿಗೆ ತಮ್ಮ ನಡುವೆ ಜಾಗಿಂಗ್ ಮಾಡುತ್ತಿದ್ದವರು ಫ್ರಾನ್ಸ್ ಅಧ್ಯಕ್ಷ ಎಂಬುದು ಗೊತ್ತೇ ಆಗಲಿಲ್ಲ. ಈ ಸುದ್ದಿ ಚಾನೆಲ್​, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಅವರಿಗೆ ಈ ವಿಷಯ ಗೊತ್ತಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *