ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಇದುವೇ ಕಾರಣ..! – Kannada News | Why Mumbai Indians Wear black band vs SRH

IPL 2026: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ (Black Armband) ಧರಿಸಿ ಮೈದಾನಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.

ಕಪ್ಪು ಪಟ್ಟಿ ಧರಿಸಲು ಕಾರಣವೇನು?

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೆಂಬಲ ಸಿಬ್ಬಂದಿಯೊಬ್ಬರ ಮಗಳು ಅಕಾಲಿಕವಾಗಿ ನಿಧನರಾಗಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಸಿಬ್ಬಂದಿಯ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟನ್ನು ಪ್ರದರ್ಶಿಸಲು ಫ್ರಾಂಚೈಸಿಯು ಈ ನಿರ್ಧಾರ ತೆಗೆದುಕೊಂಡಿದೆ.

ತಂಡದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಂಐ ಮ್ಯಾನೇಜ್‌ಮೆಂಟ್, “ನಮ್ಮ ಬೆಂಬಲ ಸಿಬ್ಬಂದಿಯ ಮಗಳ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಪರವಾಗಿ ಮತ್ತು ಅಗಲಿದ ಆತ್ಮದ ಸ್ಮರಣಾರ್ಥವಾಗಿ ಇಂದು ಮುಂಬೈ ಇಂಡಿಯನ್ಸ್ ಆಟಗಾರರು ಕಪ್ಪು ಪಟ್ಟಿ ಧರಿಸುತ್ತಿದ್ದಾರೆ” ಎಂದು ತಿಳಿಸಿದೆ.

ಒಗ್ಗಟ್ಟಿನ ಸಂದೇಶ:

ಮುಂಬೈ ಇಂಡಿಯನ್ಸ್ ತಂಡವು ತನ್ನ ಸಿಬ್ಬಂದಿ ಮತ್ತು ಆಟಗಾರರನ್ನು ಒಂದು ‘ದೊಡ್ಡ ಕುಟುಂಬ’ (One Family) ಎಂದು ಪರಿಗಣಿಸುತ್ತದೆ. ಮೈದಾನದಲ್ಲಿ ಎಷ್ಟೇ ಒತ್ತಡದ ಪಂದ್ಯವಿದ್ದರೂ, ಮೈದಾನದ ಹೊರಗಿನ ನೋವಿನಲ್ಲಿ ಭಾಗಿಯಾಗುವ ಮೂಲಕ ತಂಡವು ಮಾನವೀಯತೆ ಮೆರೆದಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆಯನ್ನು ಶ್ಲಾಘಿಸಿದ್ದು, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪಂದ್ಯದ ಮುಖ್ಯಾಂಶ:

ಈ ಭಾವುಕ ಕ್ಷಣಗಳ ನಡುವೆಯೂ ನಡೆದ ಪಂದ್ಯದಲ್ಲಿ ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಶತಕದ (123*) ನೆರವಿನಿಂದ ಮುಂಬೈ ಇಂಡಿಯನ್ಸ್ 243 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುರಿ ಬೆನ್ನಟ್ಟಿ ,6 ವಿಕೆಟ್ ಗಳ ಜಯ ಸಾಧಿಸಿದೆ.

ಇದನ್ನೂ ಓದಿ: ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್

ಈ ಸೋಲಿನ ಹೊರತಾಗಿಯೂ ಹೆಚ್ಚಾಗಿ ಮುಂಬೈ ಇಂಡಿಯನ್ಸ್ ಆಟಗಾರರು ಸಿಬ್ಬಂದಿ ಕುಟುಂಬಕ್ಕೆ ತೋರಿದ ಈ ಗೌರವ ಅಭಿಮಾನಿಗಳ ಮನಗೆದ್ದಿದೆ.

Source link

Leave a Reply

Your email address will not be published. Required fields are marked *