ನಟಿ ರಾಗಿಣಿ ದ್ವಿವೇದಿ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರು ಡ್ರಗ್ ಕೇಸ್ ಅಲ್ಲಿ ಜೈಲು ಸೇರಬೇಕಾಯಿತು. ಈಗ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ನೀಡಿದ ಸಂದರ್ಶನ ಒಂದು ಚರ್ಚೆಗೆ ಕಾರಣ ಆಗಿದೆ. ಸುದೀಪ್ ನಟಿಸಿ, ನಿರ್ದೇಶಿಸಿದ ಸಿನಿಮಾ ಬಗ್ಗೆ ರಾಗಿಣಿ ಮಾತನಾಡಿದ್ದಾರೆ. ಅವರು ಹಾಗೆ ಮಾತನಾಡಬಾರದಿತ್ತು ಎಂದು ಕೆಲವರು ಹೇಳಿದ್ದಾರೆ.
ರಾಗಿಣಿ ಮಾತನಾಡಿದ್ದು, ‘ವೀರ ಮದಕರಿ’ ಚಿತ್ರದ ಬಗ್ಗೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಾಗಿಣಿ ಸೊಂಟ ಕಂಡಾಗಲೆಲ್ಲ ಸುದೀಪ್ ಕೈ ಸೊಂಟದ ಬಳಿ ಹೋಗುವ ರೀತಿಯಲ್ಲಿ ತೋರಿಸಲಾಗಿದೆ. ಈ ಬಗ್ಗೆ ಆರ್ಜೆ ತುಹಿನ್ ಅವರ ಸಂದರ್ಶನದಲ್ಲಿ ರಾಗಿಣಿಗೆ ಪ್ರಶ್ನೆ ಮಾಡಿದ್ದಾರೆ. ‘ನಿಮ್ಮ ಮೊದಲ ಚಿತ್ರ ವೀರ ಮದಕರಿಯಲ್ಲಿ ನೇವಲ್ನ (ಹೊಕ್ಕಳು) ಅಷ್ಟು ತೋರಿಸಲಾಗಿದೆ. ನಿರ್ದೇಶಕರು ನೇವಲ್ ಆಫೀಸರ್ ಆಗಿದ್ರಾ? ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ರಾಗಿಣಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಮಾತೇ ಆಡದೆ ಸ್ಪೂರ್ತಿ ತುಂಬಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
‘ಈ ಐಡಿಯಾ ಹಿಂದೆ ಯಾವ ಉದ್ದೇಶ ಇತ್ತು ಅನ್ನೋದು ಗೊತ್ತಿಲ್ಲ. ಮಹಿಳೆಯಲ್ಲಿ ಅತ್ಯಂತ ಮಾದಕ ಭಾಗಗಳಲ್ಲಿ ಅವಳ ಹೊಟ್ಟೆ ಕೂಡ ಒಂದು. ಹೀರೋಗೆ ಹೊಕ್ಕಳ ವೀಕ್ನೆಸ್ ಇತ್ತು ಎಂದು ತೋರಿಸುವ ಪ್ರಯತ್ನ ಇರಬಹುದು’ ಎಂದಿದ್ದಾರೆ ರಾಗಿಣಿ. ‘ಹೊಕ್ಕಳು ತೋರಿಸೋದಕ್ಕೆ ಮಾತ್ರ ನನ್ನನ್ನು ಆಯ್ಕೆ ಮಾಡಿದರೇ ಎಂದು ನನಗೆ ಈಗ ಅನಿಸುತ್ತಿದೆ. ಆ ಸಿನಿಮಾದಲ್ಲಿ ನನ್ನ ಮುಖಕ್ಕಿಂತ ಹೆಚ್ಚಾಗಿ ನನ್ನ ಹೊಕ್ಕಳು ತೋರಿಸಲಾಗಿದೆ’ ಎಂದು ರಾಗಿಣಿ ಹೇಳಿದ್ದಾರೆ.
ಈ ವಿಷಯವನ್ನು ಸುದೀಪ್ ಅಭಿಮಾನಿಗಳು ಖಂಡಿಸಿದ್ದಾರೆ. ಇದು ರಾಜಮೌಳಿಯ ‘ವಿಕ್ರಮಾರ್ಕುಡು’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಏನಿದೆಯೋ ಅದನ್ನೇ ಇಲ್ಲಿಯೂ ತೋರಿಸಲಾಗಿದೆ. ಹೀಗಾಗಿ, ಏಕೆ ಆ ರೀತಿ ತೋರಿಸಿದಿರಿ ಎಂದು ರಾಜಮೌಳಿಯನ್ನು ಪ್ರಶ್ನೆ ಮಾಡಬೇಕು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ಮೊದಲ ಅವಕಾಶ ಕೊಟ್ಟವರಿಗೆ ಹೀಗೆ ಹೇಳೋದು ಎಷ್ಟು ಸರಿ’ ಎಂದು ರಾಗಿಣಿಯನ್ನು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
