
ಚಿಕ್ಕಮಗಳೂರು, ಮೇ.3: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಭಾರೀ ಗೊಂದಲುಗಳು ಉಂಟಾಗಿದೆ. ಮಧ್ಯರಾತ್ರಿಯವರಿಗೆ ಮತ ಎಣಿಕೆ ನಡೆದಿದೆ. ಈ ಮಸಯದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರು ಒಳನುಗ್ಗಲು ಯತ್ನಿಸಿದರು, ಅಧಿಕಾರಿಗಳು ಮಾಹಿತಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಒಬ್ಬರು ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಗೂಂಡಾ ಎಂಎಲ್ಎ ಎಂದು ಹೇಳಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ತಮ್ಮನ್ನು ತಳ್ಳಿ ಹೊರಹಾಕಿದ್ದರಿಂದ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದರು. 100 ಮೀಟರ್ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸದಿರುವ ಬಗ್ಗೆಯೂ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಎರಡೂ ಕಡೆ ಸಮಾನವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದರು. ಪೊಲೀಸರು ರಾಜಕೀಯ ವ್ಯಕ್ತಿಗಳನ್ನು ಕೆರಳಿಸುವ ಕೆಲಸ ಮಾಡಬಾರದು ಮತ್ತು ಎರಡೂ ಕಡೆಯವರಿಗೂ ಸಮಾನವಾಗಿ ಆದೇಶಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. “ನಿಮ್ಮ ಪೊಲೀಸ್ ಬಟ್ಟೆ ಹಾಕಿಕೊಂಡು ಬಿಟ್ಟಿದ್ದೀರಿ ಅಂತ ಮೊನ್ನೆ ಸಿಎಂ ಇದ್ರೂ ಹೀಗೆ ಮಾಡಿದ್ರಿ, ಇಲ್ಲೂ ಹಾಗೆ ಮಾಡುತ್ತಿದ್ದೀರಾ. ಆ ತರ ಮಾಡಬಾರದು. ಯಾರನ್ನೂಕೆರಳಿಸುವ ಕೆಲಸ ಮಾಡಬಾರದು” ಎಂದು ಖಾರವಾಗಿ ಹೇಳಿದ್ದಾರೆ. ನಾನು ಕಾನೂನು ತಿಳಿದಿರುವ ಮಾಜಿ ಎಂಎಲ್ಸಿ ಆಗಿ ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ತಿಳಿದಿದೆ ಎಂದು ಸ್ಪಷ್ಟಪಡಿಸಿದರು. “ಗೂಂಡಾ ಎಂಎಲ್ಎ” ಎಂದು ಕರೆದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಮತ್ತು ಅವರ ಬಾಯಿಗೆ ಬೀಗ ಹಾಕಲು ನಿಮಗೆ ಬರಲ್ವಾ ಎಂದು ತೀವ್ರ ಸ್ವರದಲ್ಲಿ ಪ್ರಶ್ನಿಸಿದರು. ಬೆಳಗ್ಗೆಯಿಂದಲೂ ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ