ಪ್ರಭಾಸ್ (Prabhas) ಸಿನಿಮಾ ಪ್ರಚಾರಗಳನ್ನು ಮಾಡುವುದು ಬಹಳ ವಿರಳ. ಹೆಚ್ಚೆಂದರೆ ಒಂದು ಪ್ರೀ ರಿಲೀಸ್ ಮಾಡಿ ಸುಮ್ಮನಾಗುತ್ತಾರೆ. ಆ ಪ್ರೀ ರಿಲೀಸ್ಗಳಲ್ಲಿಯೂ ಸಹ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಇದೀಗ ನಟ ಪ್ರಭಾಸ್ ಅವರದ್ದಲ್ಲದ ಸಿನಿಮಾ ಒಂದರ ಪ್ರಚಾರ ಮಾಡಿದ್ದಾರೆ. ಆದರೆ ಇದು ಹಣಕ್ಕಾಗಿ ಅಲ್ಲ, ನಿರ್ದೇಶಕನ ಮೇಲಿನ ಗೌರವಕ್ಕಾಗಿ. ಕಳೆದ ವಾರ ಬಿಡುಗಡೆ ಆದ ‘ಸಿಂಗ್ ಗೀತಂ’ ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್ ವಿಡಿಯೋ ಒಂದನ್ನು ಮಾಡಿದ್ದಾರೆ.
ಲಿಜೆಂಡರಿ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 95ನೇ ವಯಸ್ಸಿನಲ್ಲಿ ನಿರ್ದೇಶನ ಮಾಡಿರುವ ‘ಸಿಂಗ್ ಗೀತಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸಂಭಾಷಣೆಗಿಂತಲೂ ಹಾಡುಗಳೇ ಹೆಚ್ಚಿವೆ. ಅಸಲಿಗೆ ಇಡೀ ಸಿನಿಮಾ ಇರುವುದೇ ಹಾಡುಗಳ ಮೇಲೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು, ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಹೆಚ್ಚು ಜನರಿಗೆ ಸಿನಿಮಾ ಹಿಡಿಸಲಿಲ್ಲ. ಸಿನಿಮಾ ಫ್ಲಾಪ್ನತ್ತ ಸಾಗುತ್ತಿರುವಾಗಲೇ ಇದೀಗ ಪ್ರಭಾಸ್ ಎಂಟ್ರಿ ಕೊಟ್ಟಿದ್ದಾರೆ.
‘ಸಿಂಗ್ ಗೀತಂ’ ಸಿನಿಮಾವನ್ನು ಪ್ರಭಾಸ್ ಅವರ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಖುದ್ದು ಪ್ರಭಾಸ್ ಸಹ ಸಿಂಗೀತಂ ಶ್ರೀನಿವಾಸ್ ಅವರ ಅಭಿಮಾನಿ ಆಗಿರುವ ಕಾರಣ, ಪ್ರಭಾಸ್, ‘ಸಿಂಗ್ ಗೀತಂ’ ಸಿನಿಮಾ ಪ್ರಚಾರಕ್ಕಾಗಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ವಿಡಿಯೋನಲ್ಲಿ ಅವರು ಸಿನಿಮಾವನ್ನು ಬಲುವಾಗಿ ಕೊಂಡಾಡಿದ್ದಾರೆ.
ಇದನ್ನೂ ಓದಿ:ವಿವಾದಕ್ಕೆ ಸಿಲುಕಿದ ‘ಸ್ಪಿರಿಟ್’: ಪ್ರಭಾಸ್ ಮಧ್ಯ ಪ್ರವೇಶಕ್ಕೆ ಒತ್ತಾಯ
ಸಿನಿಮಾ ನೋಡಿದ ಬಳಿಕ ಪ್ರಭಾಸ್, ನಾಗ್ ಅಶ್ವಿನ್ ಅವರೊಟ್ಟಿಗೆ ಮಾತು ಕತೆ ಆಡಿದ್ದು, ಸಿನಿಮಾದ ಹಾಡುಗಳ ಬಗ್ಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಬಗ್ಗೆ, ಸಿನಿಮಾದ ಎಮೋಷನ್ ಅಂಶಗಳ ಬಗ್ಗೆ, ಸಿನಿಮಾದ ಈ ಪ್ರಯೋಗಾತ್ಮಕತೆಯ ಬಗ್ಗೆ ಹೀಗೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಪ್ರಭಾಸ್ ತಮಾಷೆಯಾಗಿಯೇ ಈ ವಿಡಿಯೋ ಮಾಡಿದ್ದು, ಒಟ್ಟಾರೆಯಾಗಿ ಸಿನಿಮಾ ತಮಗೆ ಇಷ್ಟವಾಯಿತು ಎಂಬ ಸಂದೇಶವನ್ನು ಅವರು ವಿಡಿಯೋ ಮೂಲಕ ರವಾನಿಸಿದ್ದಾರೆ.
ಪ್ರಭಾಸ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಫೌಜಿ’ ಸಿನಿಮಾ ಬಹುತೇಕ ಮುಗಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ‘ಕಲ್ಕಿ 2898 ಎಡಿ‘ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
