ಮುಸ್ಲಿಂರಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ: ಏನಿದು ದುರ್ಗಮ್ಮನ ಜಾತ್ರೆಯಲ್ಲಿ ಶುರುವಾದ ವಿವಾದ? – Kannada News | Davanagere Durgamma Jatre: Shri Rama Sene Calls for Halal Free Sacrifice and Protest

ದಾವಣಗೆರೆ, ಫೆಬ್ರವರಿ 11: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆಯ (Davanagere) ದುರ್ಗಮ್ಮನ ಜಾತ್ರೆ ಕೂಡ ಒಂದು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜಾತ್ರೆ (Jatre) ನಡೆಯುತ್ತದೆ. ನಾಟಕ, ಕುಸ್ತಿ, ಟಗರ ಕಾಳಗ ಹೀಗೆ ಹತ್ತು ಹಲವು ಕ್ಷಣಗಳು ಜಾತ್ರೆಯ ವಿಶೇಷ. ಇದೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಅಂದರೆ ಕುರಿ ಊಟ. ಪ್ರತಿ ಮನೆಗಳಿಂದ ಮೂರು ನಾಲ್ಕು ಕುರಿಗಳನ್ನ ದೇವಿಗೆ ಬಲಿ ಕೊಡುತ್ತಾರೆ. ಸದ್ಯ ಇದೇ ವಿಚಾರವಾಗಿ ಇದೀಗ ಹೊಸ ಹೋರಾಟ ಶುರುವಾಗಿದೆ.

ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆಗೆ ಶ್ರೀರಾಮ ಸೇನೆ ಕರೆ

ಶ್ರೀರಾಮ ಸೇನೆ ಹೊಸ ಹೋರಾಟಕ್ಕೆ ಮುಂದಾಗಿದೆ. ಹೇಳಿದಂತೆ ನಡೆದುಕೊಳ್ಳದಿದ್ದರೆ ದೇವಿ ಶಾಪ ಹಾಕುತ್ತಾಳೆ ಎಂಬ ಭಯ ಕೂಡ ಶ್ರೀರಾಮ ಸೇನೆ ಹಾಕುತ್ತಿದೆ. ಈ ಸಲ ಶ್ರೀರಾಮ ಸೇನೆ ಕರೆ ನೀಡಿದ್ದು, ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆ ಆಗಬೇಕು ಎಂದು. ಮುಸ್ಲಿಂ‌ ಕಡೆಯಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಪ್ರಚಾರ ಶುರುವಾಗಿದೆ.

ಇದನ್ನೂ ಓದಿ: ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಫೆಬ್ರವರಿ 24 ಮತ್ತು 25ರಂದು ದಾವಣಗೆರೆ ದುಗ್ಗಮ್ಮನ ಜಾತ್ರೆ ನಡೆಯಲಿದೆ. ದೇವಿಗೆ ಸಾವಿರಾರು ಕುರಿಗಳ ಬಲಿ ಕೊಡಲಾಗುತ್ತದೆ. ಬಲಿ ಕೊಡುವಾಗ ಮುಸ್ಲಿಂ ಕಡೆಯಿಂದ ಹಲಾಲ್ ಮಾಡಿಸಬಾರದು. ಈ ಹಲಾಲ್ ಮಾಡುವುದು ಮುಸ್ಲಿಮರ ಪದ್ದತಿ. ದೇವಿ ಆರಾಧಕರು ಯಾರು ಕೂಡ ಮುಸ್ಲಿಮರಿಂದ ಹಲಾಲ್ ಮಾಡಿಸಬೇಡಿ. ನಮ್ಮ ಹಿಂದೂ ಸಂಪ್ರದಾಯದಂತೆ ಹಿಂದೂಗಳಲ್ಲಿರುವ ಕಲಾಲ್ ಅಥವಾ ಕಾಟೀಕ್ ಸಮಾಜದವರಿಂದ ಕುರಿ ಬಲಿ ಕೊಡಿ. ಹಿಂದೂಗಳು ಹಲಾಲ್ ಮಾಡಿಸುವುದು ಅವೈಜ್ಞಾನಿಕ, ಅದರಲ್ಲೂ ಮುಸ್ಲಿಮರಿಂದ ಹಲಾಲ್ ಮಾಡಿಸಿದರೆ ಶಾಪ ತಟ್ಟುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.

ಈಗಾಗಲೇ ಜಾತ್ರೆ ಸಂಭ್ರಮ ಶುರು

ಈಗಾಗಲೇ ದಾವಣಗೆರೆ ನಗರದಲ್ಲಿ ದೇವತೆ ಜಾತ್ರೆಯ ಸಂಭ್ರಮ ಶುರುವಾಗಿದೆ. ಆಕಾಶದತ್ತೆರಕ್ಕೆ ದೇವಿಯ ಹಂದರ ಗಂಬ, ಕೇಸರಿ ಧ್ವಜದ ಹಾರಾಟ, ಐತಿಹಾಸಿಕ ಜಾತ್ರೆಗೆ ಚಾಲನೆ ಸಿಕ್ಕಿದ್ದು ವಿಶೇಷ. ಇತ್ತೀಚಿಗೆ ಸಾವಿರಾರು ಜನರ ಸಮ್ಮುಖದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದ್ದರು. ಇಡಿ ದೇವಸ್ಥಾನದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಂದರ ಗಂಬ ಪೂಜೆಯಾದ ಬಳಿಕ ನಿಜವಾದ ಜಾತ್ರೆಗೆ ಚಾಲನೆ ಸಿಕ್ಕಿದೆ. ಫೆಬ್ರವರಿ 24 ಮತ್ತು 25ರಂದು ಜಾತ್ರೆಯ ಮಹತ್ವದ ದಿನಗಳು. ಅಂದರೆ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಇಡಿ ನಗರವೇ ಈ ಎರಡು ದಿನ ಮಾತ್ರ ಗಮ್ಮ ಎನ್ನುತ್ತಿರುತ್ತದೆ. ಒಂದು ದಿನ ಸಸ್ಯಹಾರಿಗಳಿಗೆ, ಇನ್ನೊಂದು ದಿನ ಮಾಂಸಾಹಾರಿಗಳಿಗೆ. ಇನ್ನು ದೇವಿ ಜಾತ್ರೆಯಲ್ಲಿ ಬೇವಿನ ಉಡಿಗೆ ಹಾಗೂ ಬೆತ್ತಲೆ ಸೇವೆ ನಡೆದರೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಫೆ. 22ರಂದು ದುರ್ಗಾಂಭಿಕಾ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಫೆ 23 ಮತ್ತು 24 ರಂದು ಉಡಿ ತುಂಬುವ ಕಾರ್ಯವಿದೆ. ಫೆ. 24 ರಂದು ರಾತ್ರಿ 11ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಫೆ 25 ರಂದು ಚರಗ ಚಲ್ಲುವ ಮೂಲಕ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆ ಮಾರಾಟಕ್ಕೆ ಆಫ್ರಿಕಾಗೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಕಷ್ಟದಲ್ಲಿ: ಬಂಧನ ಭೀತಿ

ಹೀಗೆ ಒಂದು ಕಡೆ ಜಾತ್ರೆಗೆ ಸಂಭ್ರಮದ ಸಿದ್ದತೆ ನಡೆಯುತ್ತಿದೆ. ಇನ್ನೊದು ಕಡೆ ಶ್ರೀರಾಮ ಸೇನೆ ಹಲಾಲ್ ಕಟ್ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ಮೇಲಾಗಿ ದೇವಸ್ಥಾನದ ಮುಂದೆ ಕುರಿ ಬಲಿ ನಿಷೇಧವಿದೆ.  ಹೀಗಾಗಿ ಕುರಿಗಳ ಬಲಿ ಕೊಡುವು ನಾಲ್ಕು ಗೋಡೆಗಳ ನಡುವೆ. ಅದು ಒಂದು ರೀತಿಯಲ್ಲಿ ಖಾಸಗಿ ವಿಚಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶ್ರೀರಾಮ ಸೇನೆ ಈ ವರ್ಷ ಹಲಾಲ್ ಕಟ್ ಮುನ್ನೆಲೆಗೆ ತಂದಿದ್ದು ಹತ್ತಾರು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Leave a Reply

Your email address will not be published. Required fields are marked *