ಪಾಕಿಸ್ತಾನದ ಬಾವುಟದ ಚಿತ್ರImage Credit source: Getty Images
ಇಸ್ಲಾಮಾಬಾದ್, ಆಗಸ್ಟ್ 2: ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಬೆಳೆಯುತ್ತಿರುವ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದ ಕುರಿತು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ (DG ISPR) ವಕ್ತಾರರು ಅತ್ಯಂತ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. “ಮುಸ್ಲಿಮರು ಕಾಫಿರ್‌ಗಳೊಂದಿಗೆ (ಮುಸ್ಲಿಮೇತರರು) ಸ್ನೇಹ ಬೆಳೆಸಬಾರದು” ಎಂದು ಪಾಕ್ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ (Lt Gen Ahmed Sharif Chaudhary) ಹೇಳಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಭಾರತದೊಂದಿಗೆ ಹತ್ತಿರವಾಗುತ್ತಿರುವುದನ್ನು ಟೀಕಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅಫ್ಘಾನ್ ಪ್ರಜೆಗಳು ಮತ್ತು ಅಲ್ಲಿನ ತಾಲಿಬಾನ್ ಸರ್ಕಾರವು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಪಾಕಿಸ್ತಾನ ಸೇನೆ ಅಸಮಾಧಾನ ವ್ಯಕ್ತಪಡಿಸಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರು ಮುಸ್ಲಿಮೇತರರೊಂದಿಗೆ ಸಂಬಂಧ ಹೊಂದಬಾರದು ಎಂಬ ಧರ್ಮಧಾರಿತ ಹೇಳಿಕೆಯನ್ನು ವಕ್ತಾರರು ನೀಡಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಹೊತ್ತಿ ಉರಿದ ಹಡಗು: ಐವರು ಸಜೀವ ದಹನ, 41 ಮಂದಿ ನಾಪತ್ತೆ
ಭಾರತ-ಅಫ್ಘಾನ್ ಬಾಂಧವ್ಯಕ್ಕೆ ಕಿರಿಕಿರಿ: ಅಫ್ಘಾನಿಸ್ತಾನ್‌ನಲ್ಲಿ ಭಾರತವು ಕೈಗೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಮಾನವೀಯ ನೆರವು ಮತ್ತು ಬೆಳೆಯುತ್ತಿರುವ ರಾಜತಾಂತ್ರಿಕ ನಿಕಟತೆಯು ಪಾಕಿಸ್ತಾನಕ್ಕೆ ಸಹಿಸಲಾಗದ ಮುಳ್ಳಾಗಿದೆ.
ಪಾಕ್ ಸೇನಾ ವಕ್ತಾರರ ಈ ಪ್ರಚೋದನಕಾರಿ ಹೇಳಿಕೆಗೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗಡಿಭಾಗದ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟನ್ನು ಧಾರ್ಮಿಕ ಬಣ್ಣ ಬಳಿದು ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.
ಇದನ್ನೂ ಓದಿ: ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿಭಾಗದಲ್ಲಿ (ದುರಾಂಡ್ ಲೈನ್) ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಅಫ್ಘಾನಿಸ್ತಾನ ತನ್ನ ಆರ್ಥಿಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ನಿಕಟ ಬಾಂಧವ್ಯ ಕಾಯ್ದುಕೊಳ್ಳುತ್ತಿರುವುದು ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
