ಮೂತ್ರದ ಬಾಟಲಿಗಳು, 7,000 ಟನ್ ಕಸ; ಕನ್ವರ್ ಯಾತ್ರೆ ಬಳಿಕ ಹರಿದ್ವಾರ ಹೇಗಾಗಿದೆ ನೋಡಿ! – Kannada News | Urine Bottles, 7,000 Tonnes of waste Haridwar launches mega clean up after Kanwar Yatra

ಹರಿದ್ವಾರ, ಆಗಸ್ಟ್ 12: ವರ್ಷಕ್ಕೊಮ್ಮೆ ನಡೆಯುವ ಕನ್ವರ್ ಯಾತ್ರೆ (Kanwar Yatra)  ಪೂರ್ಣಗೊಂಡಿದ್ದು, ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದಲ್ಲಿ (Haridwar) ಈಗ ಕಸದ ಬೆಟ್ಟಗಳೇ ಸೃಷ್ಟಿಯಾಗಿವೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಗಂಗಾಜಲವನ್ನು ತೆಗೆದುಕೊಂಡು ಹೋಗಲು ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಶಿವರಾತ್ರಿಯ ನಂತರ ಭಕ್ತರು ತಮ್ಮ ಊರುಗಳಿಗೆ ಹಿಂತಿರುಗುವಾಗ ಹರಿದ್ವಾರದ ಗಂಗಾ ಘಾಟ್‌ಗಳಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟು ಹೋಗಿದ್ದಾರೆ.

ಹರಿದ್ವಾರದ ಘಾಟ್‌ಗಳಲ್ಲಿ ಟನ್​ಗಟ್ಟಲೆ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು, ಮೂತ್ರ ತುಂಬಿದ ಬಾಟಲಿಗಳು ರಾಶಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಹರಿದ್ವಾರದ ನೂರಕ್ಕೂ ಹೆಚ್ಚು ಘಾಟ್‌ಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧವಾದ ‘ಹರ್ ಕಿ ಪೌರಿ’ ಘಾಟ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮೂತ್ರ ತುಂಬಿ ಹಾಗೆಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಘಟನೆಯು ಹರಿದ್ವಾರದ ಸ್ಥಳೀಯ ನಿವಾಸಿಗಳು ಮತ್ತು ಮಠಾಧೀಶರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಯಾತ್ರೆ ಮುಗಿದ ತಕ್ಷಣ ಹರಿದ್ವಾರದ ವಿವಿಧ ಪ್ರದೇಶಗಳು ಮತ್ತು ಘಾಟ್‌ಗಳಿಂದ ಕನಿಷ್ಠ 7,000 ಟನ್‌ಗಳಷ್ಟು ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಲಾಗಿದೆ. ನಗರದ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಈಗ ಕಸದ ಬೆಟ್ಟಗಳೇ ಪ್ರತ್ಯಕ್ಷವಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *