ಭಾರತದ ಹಲವಾರು ಸಿನಿಮಾಗಳು 100 ಕೋಟಿ ಗಳಿಕೆ ಮಾಡಲು ಒದ್ದಾಡುತ್ತಿವೆ. ಸೂಪರ್ ಹಿಟ್ ಸಿನಿಮಾ ಸಹ 500 ಕೋಟಿ ಗಳಿಸುವಷ್ಟರಲ್ಲಿ ಹೆಣಗಾಡುತ್ತದೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳಿಗೆ ಸುಮಾರು 1800 ಕೋಟಿ ಗಳಿಕೆ ಮಾಡಿದೆ. ಆದರೆ ಇಲ್ಲೊಂದು ಹಾಲಿವುಡ್ ಸಿನಿಮಾ, ಅದೂ ಬಿಡುಗಡೆ ಆದ ಬಳಿಕ ಬಹುತೇಕ ಋಣಾತ್ಮಕ ವಿಮರ್ಶೆಗಳನ್ನೇ ಪಡೆಯುತ್ತಿರುವ ಸಿನಿಮಾ ಬಿಡುಗಡೆ ಆದ ಮೂರೇ ದಿನಗಳಲ್ಲಿ 2100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.
ವಿಶ್ವದ ಡ್ಯಾನ್ಸಿಂಗ್ ಲಿಜೆಂಡ್ ಮೈಖಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಏಪ್ರಿಲ್ 24 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಯ್ತು. ಮೈಖಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ಆದ್ದರಿಂದ ಭಾರಿ ಕುತೂಹಲವನ್ನು ಈ ಸಿನಿಮಾ ಹುಟ್ಟುಹಾಕಿತ್ತು. ಸಿನಿಮಾನಲ್ಲಿ, ಮೈಖಲ್ ಜಾಕ್ಸನ್ ಅವರ ಹತ್ತಿರದ ಸಂಬಂಧಿಯೇ ಆಗಿರುವ ಜಾಫರ್ ಜಾಕ್ಸನ್ ಅವರು ಮೈಖಲ್ ಜಾಕ್ಸನ್ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಬಿಡುಗಡೆ ಆದ ಮೂರು ದಿನಗಳಲ್ಲಿ 220 ಮಿಲಿಯನ್ಗೂ ಹೆಚ್ಚು ಮೊತ್ತ ಅಂದರೆ ಭಾರತದ ರೂಪಾಯಿಗಳ ಲೆಕ್ಕದಲ್ಲಿ 2100 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಇದು, ಬಯೋಪಿಕ್ ಆಧರಿಸಿದ ಸಿನಿಮಾ ಒಂದು ಗಳಿಸಿರುವ ಬಲು ದೊಡ್ಡ ಮೊತ್ತವಾಗಿದೆ. ಈ ಹಿಂದೆ ಖ್ಯಾತ ಗಾಯಕ ಬೊಹಿಮಿಹೆನ್ ರ್ಯಾಪಸ್ಡಿ (ಪ್ರಿನ್ಸ್) ಜೀವನ ಆಧರಿಸಿದ ಸಿನಿಮಾ 141 ಮಿಲಿಯನ್ ಡಾಲರ್ 1300 ಕೋಟಿಗೂ ಹೆಚ್ಚು ಮೊತ್ತವನ್ನು ಮೊದಲ ವಾರ ಗಳಿಸಿತ್ತು. ಆ ದಾಖಲೆಯನ್ನು ‘ಮೈಖಲ್’ ಸಿನಿಮಾ ಮೊದಲ ಮೂರು ದಿನದಲ್ಲೇ ಮುರಿದಿದೆ.
ಇದನ್ನೂ ಓದಿ:ಈ ಸಿನಿಮಾ ದಾಖಲೆ ಮುರಿಯೋದು ‘ಧುರಂಧರ್ 2’ ಚಿತ್ರಕ್ಕೆ ಅಸಾಧ್ಯ?
ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ಲಿಜೆಂಡರಿ ವ್ಯಕ್ತಿಯ ಬಗ್ಗೆ ಇನ್ನೂ ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇದೆಲ್ಲದರ ನಡುವೆಯೂ ಸಹ ಸಿನಿಮಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಇನ್ನು ಈ ಸಿನಿಮಾ ಭಾರತದಲ್ಲಿ ಸಹ ತಮ್ಮ ಮ್ಯಾಜಿಕ್ ಮಾಡುತ್ತಿದೆ. ‘ಧುರಂಧರ್ 2’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ಪ್ರಬಲ ಪೈಪೋಟಿಯ ನಡುವೆಯೂ ಸಹ ‘ಮೈಖಲ್’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 25 ಕೋಟಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್, ಅನುಪಮ್ ಖೇರ್ ಇನ್ನೂ ಕೆಲವು ಖ್ಯಾತನಾಮರು ‘ಮೈಖಲ್’ ಸಿನಿಮಾ ವೀಕ್ಷಿಸಿದ್ದಾರೆ.
ಮೈಖಲ್ ಜಾಕ್ಸನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಸಿನಿಮಾ ಸಾಧಾರಣವಾಗಿದ್ದರೂ ಸಹ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ ಹಾಗಾಗಿ ಈ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಭಾರತದಲ್ಲೂ ಸಹ ಉತ್ತಮ ಗಳಿಕೆಯ ಮುನ್ಸೂಚನೆಯನ್ನು ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
