ಮೆನೋಪಾಸ್ ಎಂದರೇನು? ಈ ಹಂತದ ನಂತರ ಮಹಿಳೆಯರು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? – Kannada News | Menopause Care Guide: Protecting Bone, Heart And Mental Health

ಮೆನೋಪಾಸ್ (Menopause) ಎನ್ನುವುದು ಮಹಿಳೆಯರಲ್ಲಿ ಮಾಸಿಕ ಋತುಚಕ್ರ ಶಾಶ್ವತವಾಗಿ ನಿಲ್ಲುವ ಸಹಜ ಜೈವಿಕ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವೆ ಇದು ಸಂಭವಿಸುತ್ತದೆ. ಸತತ 12 ತಿಂಗಳುಗಳ ಕಾಲ ಮುಟ್ಟು ಕಾಣಿಸಿಕೊಳ್ಳದಿದ್ದರೆ ಆಕೆ ಮೆನೋಪಾಸ್‌ ತಲುಪಿದ್ದಾಳೆ ಎಂದು ಪರಿಗಣಿಸಬಹುದು. ಈ ಹಂತದ ನಂತರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮೆನೋಪಾಸ್ ನಂತರ ಮಹಿಳೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಮತ್ತು ಯಾವ ರೀತಿ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೆನೋಪಾಸ್ ನಂತರ ಯಾವ ರೀತಿ ಬದಲಾವಣೆಗಳಾಗುತ್ತವೆ?

ಸಾಮಾನ್ಯವಾಗಿ ಮೆನೋಪಾಸ್ ಬಳಿಕ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಈ ಹಾರ್ಮೋನ್ ಎಲುಬುಗಳು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ಎಲುಬುಗಳು ದುರ್ಬಲವಾಗುವ ಸಾಧ್ಯತೆ ಹೆಚ್ಚುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗಬಹುದು. ಹಾಗಾಗಿ ಮೆನೋಪಾಸ್ ಆದ ಬಳಿಕವೂ ವರ್ಷಕ್ಕೊಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಎಲುಬಿನ ಸಾಂದ್ರತೆ, ಕ್ಯಾಲ್ಸಿಯಂ, ವಿಟಮಿನ್ ಡಿ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಆರೋಗ್ಯ ರಕ್ಷಣೆಗೆ ಸಹಕಾರಿ.

ಹಾರ್ಮೋನ್ ಥೆರಪಿ ಎಲ್ಲರಿಗೂ ಸೂಕ್ತವಲ್ಲ

ಕೆಲವರಿಗೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ನೀಡಲಾಗುತ್ತದೆ. ಆದರೆ ಇದು ಪ್ರತಿಯೊಬ್ಬ ಮಹಿಳೆಗೆ ಸೂಕ್ತವಾಗುವುದಿಲ್ಲ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಚಿಕಿತ್ಸೆಯನ್ನು ಪಡೆಯಬೇಕು.

ಇದನ್ನೂ ಓದಿ: ಗರ್ಭದೊಳಗಿರುವ ಶಿಶು ಇಡೀ ದಿನ ಮಲಗಿರುತ್ತೆ ಅಂದುಕೊಂಡಿದ್ದೀರಾ, ಬೆಚ್ಚಗೆ ಮಲಗಿ ಏನು ಮಾಡುತ್ತಿರುತ್ತೆ ಗೊತ್ತಾ?

ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ

  • ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ.
  • ಸರಿಯಾಗಿ ನಿದ್ರೆ ಮಾಡಿ.
  • ಚಹಾ ಮತ್ತು ಕಾಫಿಯ ಸೇವನೆಯನ್ನು ಮಿತಿಗೊಳಿಸಿ.
  • ಸಮತೋಲಿತ ಆಹಾರವನ್ನು ಸೇವಿಸಿ.
  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಎದ್ದೇಳುವ ಅಭ್ಯಾಸ ಬೆಳೆಸಿಕೊಳ್ಳಿ.

ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ

ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಮನಸ್ಥಿತಿಯಲ್ಲಿ ಏರುಪೇರುಗಳು ಕಾಣಿಸಬಹುದು. ಕುಟುಂಬದ ಬೆಂಬಲ, ಸ್ನೇಹಪರ ವಾತಾವರಣ ಮತ್ತು ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದು ಬಹಳ ಮುಖ್ಯ. ಮೆನೋಪಾಸ್ ಜೀವನದ ಅಂತ್ಯವಲ್ಲ, ಹೊಸ ಹಂತದ ಆರಂಭ. ಸರಿಯಾದ ಆರೈಕೆ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ತಪಾಸಣೆಯ ಮೂಲಕ ಈ ಹಂತವನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಕಳೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *