ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ – Kannada News | Iran Threatens Melania, Barron Trump with Death Video, Security Heightened

ವಾಷಿಂಗ್ಟನ್, ಜುಲೈ 29: ಅಮೆರಿಕ ಮತ್ತು ಇರಾನ್(Iran) ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಟೆಹ್ರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಬೆದರಿಕೆ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. “ವೇರ್ ಟು ಕಿಲ್ ಮೆಲಾನಿಯಾ” ಮತ್ತು “ಹೌ ಟು ಕಿಲ್ ಮೆಲಾನಿಯಾ ಟ್ರಂಪ್” ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ, ಟ್ರಂಪ್ ಕುಟುಂಬದ ವಿರುದ್ಧ ಇರಾನ್ ನಡೆಸುತ್ತಿರುವ ಮಾನಸಿಕ ಹಾಗೂ ಡಿಜಿಟಲ್ ದಾಳಿಯ ತೀವ್ರತೆಯನ್ನು ಎತ್ತಿಹಿಡಿದಿದೆ.

ಬೆದರಿಕೆ ವೀಡಿಯೊದಲ್ಲಿ ಏನಿದೆ?

ವಿಡಿಯೋದಲ್ಲಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿರುವ ಹಾಗೂ ನ್ಯೂಯಾರ್ಕ್ ನಗರದ ವಿವಿಧ ಐಷಾರಾಮಿ ಅಂಗಡಿಗಳಿಗೆ ಭೇಟಿ ನೀಡುವ ದೃಶ್ಯಗಳನ್ನು ತೋರಿಸಲಾಗಿದೆ. ಅವರು ಶಾಪಿಂಗ್​ ತೆರಳಿರುವಾಗಲೇ ಅವರನ್ನು ಕೊಲ್ಲುವುದು ಸೂಕ್ತ ಎಂದು ಬರೆದಿದ್ದಾರೆ. ವಿಡಿಯೋದ ಕೊನೆಯಲ್ಲಿ ಟ್ರಂಪ್ ಅವರ ಕಿರಿಯ ಮಗ ಬ್ಯಾರನ್‌ಗೆ, ಇದು ಕೇವಲ ಆರಂಭ. ಬ್ಯಾರನ್ ಟ್ರಂಪ್, ನಮಗಾಗಿ ಕಾಯಿರಿ ಎಂದು ನೇರ ಕೊಲೆ ಬೆದರಿಕೆ ಒಡ್ಡಲಾಗಿದೆ.

ಟೆಹ್ರಾನ್‌ನಲ್ಲಿ ‘ರಕ್ತಕ್ಕೆ ರಕ್ತ’ ಅಭಿಯಾನ

ಈ ವಿಡಿಯೋ ಹೊರಬೀಳುವ ಮೊದಲು ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಅಮೆರಿಕ ವಿರೋಧಿ ಬ್ಯಾನರ್‌ಗಳು ಹಾಗೂ ಜಾಹೀರಾತು ಫಲಕಗಳು ಪ್ರತ್ಯಕ್ಷವಾಗಿದ್ದವು. ರಕ್ತಕ್ಕಾಗಿ ರಕ್ತ ಎಂಬ ಘೋಷಣೆಯೊಂದಿಗೆ ಪ್ರಕಟವಾದ ಈ ಬ್ಯಾನರ್‌ಗಳಲ್ಲಿ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಸೇರಿದಂತೆ ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ, ಎರಿಕ್, ಟಿಫಾನಿ ಹಾಗೂ ಬ್ಯಾರನ್ ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಲಾಗಿತ್ತು.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಸಂಘರ್ಷ ಶಮನ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ, ಹಣದುಬ್ಬರ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗುವ ಪರಿಣಾಮವೇನು?

ಅಮೆರಿಕದಲ್ಲಿ ಬಿಗಿ ಭದ್ರತೆ

ಬೆದರಿಕೆ ಬೆನ್ನಲ್ಲೇ ಯುಎಸ್ ಸೀಕ್ರೆಟ್ ಸರ್ವಿಸ್ ಟ್ರಂಪ್ ಕುಟುಂಬಕ್ಕೆ ನೀಡಲಾಗುವ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಶ್ವೇತಭವನ, ನ್ಯೂಯಾರ್ಕ್‌ನ ಟ್ರಂಪ್ ಟವರ್, ನ್ಯೂಜೆರ್ಸಿಯ ಬೆಡ್‌ಮಿನಿಸ್ಟರ್ ಗಾಲ್ಫ್ ಕ್ಲಬ್ ಹಾಗೂ ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಲಾಗಿದೆ.

2026 ರ ಆರಂಭದಿಂದಲೂ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿ ಹಾಗೂ ಇರಾನ್ ಬೆಂಬಲಿತ ಗುಂಪುಗಳ ನಡುವಿನ ದಾಳಿ-ಪ್ರತಿದಾಳಿಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ತಂತ್ರಜ್ಞಾನ ಮತ್ತು ‘ಸೈಬರ್ ವಾರ್‌ಫೇರ್’: ಇರಾನ್ ಇತ್ತೀಚಿನ ದಿನಗಳಲ್ಲಿ ಕೇವಲ ಮಿಲಿಟರಿ ಬಲ ಮಾತ್ರವಲ್ಲದೆ ಜಾಗತಿಕ ನಾಯಕರ ಕುಟುಂಬಗಳನ್ನು ಗುರಿಯಾಗಿಸಿ ಸೈಬರ್ ಬೆದರಿಕೆ ಹಾಗೂ ಪ್ರಚಾರ ವೀಡಿಯೊಗಳನ್ನು ಹರಿಬಿಡುವ ಮಾನಸಿಕ ಯುದ್ಧತಂತ್ರವನ್ನು ಬಳಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *