ಬಾಲಿವುಡ್‌ನ ಗ್ಲಾಮರಸ್ ನಟಿ ಮೌನಿ ರಾಯ್ ಅವರು ಇತ್ತೀಚೆಗೆ ಮುಂಬೈನಲ್ಲಿ ಪಾಪರಾಜಿಗಳ (Paparazzi) ವರ್ತನೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾರಿನೊಳಗೆ ಕುಳಿತಿದ್ದರೂ ಬಿಡದೇ ಕ್ಯಾಮೆರಾ ಹಿಡಿದು ಬೆನ್ನತ್ತಿದ ಫೋಟೋಗ್ರಾಫರ್‌ಗಳ ವಿರುದ್ಧ ನಟಿ ತೀವ್ರವಾಗಿ ಕಿಡಿಕಾರಿದ್ದು, ‘ವಿಡಿಯೋ ಮಾಡುವುದನ್ನು ನಿಲ್ಲಿಸಿ’ ಎಂದು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಂಗಳವಾರ (ಜುಲೈ 14) ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಒಂದರಿಂದ ನಟಿ ಮೌನಿ ರಾಯ್ (Mouni Roy) ಅವರು ತಮ್ಮ ಆಪ್ತ ಗೆಳತಿ, ನಟಿ ಅನುಷಾ ದಾಂಡೇಕರ್ ಅವರೊಂದಿಗೆ ಹೊರಬಂದಾಗ ಈ ಘಟನೆ ನಡೆದಿದೆ.
ಮೌನಿ ರಾಯ್ ಕೋಪಕ್ಕೆ ಕಾರಣ ಏನು?
ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಮೌನಿ ರಾಯ್ ಅವರನ್ನು ಮುತ್ತಿಕೊಂಡಿದ್ದಾರೆ. ಆರಂಭದಲ್ಲಿ ನಟಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ತಮ್ಮ ಕಾರಿನತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಮೌನಿ ಕಾರಿನೊಳಗೆ ಹೋಗಿ ಕುಳಿತ ಮೇಲೂ ಫೋಟೋಗ್ರಾಫರ್‌ಗಳು ವಿಡಿಯೋ ಮಾಡುವುದನ್ನು ಮತ್ತು ಫೋಟೋ ಕ್ಲಿಕ್ಕಿಸುವುದನ್ನು ನಿಲ್ಲಿಸಿಲ್ಲ. ಕಾರಿನ ಗಾಜಿನ ಹತ್ತಿರವೇ ಕ್ಯಾಮೆರಾಗಳನ್ನು ತಂದು ತೀರಾ ಮುಜುಗರ ಉಂಟುಮಾಡಿದ್ದಾರೆ.
‘ಬಂದ್ ಕರೋ.. ಬಂದ್ ಕರೋ’
ಇದರಿಂದ ತೀವ್ರ ಅಸಮಾಧಾನಗೊಂಡ ಮೌನಿ ರಾಯ್, ಕಾರಿನೊಳಗಿನಿಂದಲೇ ಸಿಟ್ಟಿನಿಂದ ‘ಬಂದ್ ಕರೋ.. ಬಂದ್ ಕರೋ’ (ನಿಲ್ಲಿಸಿ) ಎಂದು ಪದೇ ಪದೇ ಗದರಿದ್ದಾರೆ. ಅವರು ಎಷ್ಟು ವಿನಂತಿಸಿದರೂ ಪಾಪರಾಜಿಗಳು ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅವರ ಗೆಳತಿ ಅನುಷಾ ದಾಂಡೇಕರ್, ಕ್ಯಾಮೆರಾ ಆಫ್ ಮಾಡುವಂತೆ ಕೈ ಸನ್ನೆಯ ಮೂಲಕ ಫೋಟೋಗ್ರಾಫರ್‌ಗಳಿಗೆ ವಿನಂತಿಸಿ, ಮೌನಿ ಅವರನ್ನು ಸಮಾಧಾನಪಡಿಸಿದ್ದಾರೆ. ಆ ನಂತರ ಕಾರು ಅಲ್ಲಿಂದ ಹೊರಟುಹೋಗಿದೆ.
ಇದನ್ನೂ ಓದಿ: ‘ನಾನು ಸಲಿಂಗಿ ಅಲ್ಲ’: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಸ್ಪಷ್ಟನೆ
ಮೌನಿ ರಾಯ್ ಸಿನಿಮಾ ಅಪ್ಡೇಟ್:
ಮೌನಿ ರಾಯ್ ಇತ್ತೀಚೆಗೆ ವರುಣ್ ಧವನ್ ಅಭಿನಯದ, ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರ ಹೊರತಾಗಿ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನ ‘ಅಬ್ ಹೋಗಾ ಹಿಸಾಬ್’ ವೆಬ್ ಸರಣಿ ಹಾಗೂ ಸಂಜಯ್ ದತ್ ಜೊತೆಗಿನ ‘ದಿ ಭೂತ್ನಿ’ ಚಿತ್ರದಲ್ಲೂ ಮೌನಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
