ಮೈದಾನದಲ್ಲೇ ಕಿತ್ತಾಡಿಕೊಂಡ ಹಾರ್ದಿಕ್-ಬೂಮ್ರಾ – Kannada News | Hardik Pandya vs Jasprit Bumrah Clash Between Mumbai Indians Players On Field

ಮುಂಬೈ ಇಂಡಿಯನ್ಸ್​ ತಂಡ ಸತತ ಸೋಲುತ್ತಿರುವುದು ಒಂದುಕಡೆಯಾದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ತಂಡದವರಿಗೇ ಅಸಮಾಧಾನ ಮೂಡಿರುವುದು ಮತ್ತೊಂದು ಕಡೆ. ಅದ್ಭುತ ಫೀಲ್ಡರ್ ಎನಿಸಿಕೊಂಡಿರೋ ಸೂರ್ಯ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಿಸಲಾಗಿದೆ. ಈ ಬಗ್ಗೆ ಅವರಿಗೆ ಅಸಮಧಾನ ಇದೆ. ಇನ್ನು, ಬ್ಯಾಟರ್ ಆಗಿ ಅವರಿಂದ ಉತ್ತಮ ಆಟ ಬರುತ್ತಿಲ್ಲ. ಇತ್ತ ಬಾಲರ್​​ಗಳಿಗೆ ಫೀಲ್ಡಿಂಗ್ ಸೆಟ್ ಮಾಡುವ ಅವಕಾಶವನ್ನು ಹಾರ್ದಿಕ್ ನೀಡುತ್ತಿಲ್ಲ. ಈ ಬಗ್ಗೆ ಬೂಮ್ರಾ ಓಪನ್ ಆಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿಯ ಐಪಿಎಲ್​​ನಲ್ಲಿ ಮುಂಬೈ ತಂಡ ಸತತ ನಾಲ್ಕನೇ ಸೋಲನ್ನು ಕಂಡಿದೆ. ಮುಂಬೈ ನೀಡಿದ 196 ರನ್​​ಗಳ ಟಾರ್ಗೆಟ್​​ನ ಪಂಜಾಬ್ ಕೇವಲ 16.3 ಓವರ್​​ಗಳಲ್ಲಿ ತಲುಪಿದೆ. ಈ ಮೂಲಕ ಏಳು ವಿಕೆಟ್​​ಗಳ ಗೆಲುವು ಕಂಡಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಹುಳುಕು ಎದ್ದು ಕಾಣಿಸುತ್ತಿದೆ. ಬುಮ್ರಾ ಅವರು ಹಾರ್ದಿಕ್ ಬಗ್ಗೆ ಅಸಮಧಾನ ಹೊರಹಾಕುತ್ತಿರುವುದು ಕಾಣಿಸಿದೆ.

ಬೂಮ್ರಾ ತಮ್ಮ ಬಾಲಿಂಗ್​​ಗೆ ಅನುಗುಣವಾಗಿ ಫೀಲ್ಡಿಂಗ್ ಸೆಟ್ ಮಾಡಿದ್ದರು. ಆದರೆ, ಅದನ್ನು ಹಾರ್ದಿಕ್ ಬದಲಿಸಿದರು. ಆರಂಭದಲ್ಲಿ ಬೂಮ್ರಾ ವಾದಕ್ಕೆ ಇಳಿದರು. ಕೊನೆಗೆ ವಾದ ಮಾಡಿ ಪ್ರಯೋಜನ ಇಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಬೂಮ್ರಾ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ. ಕೂಲ್ ಆಗಿ ಬಾಲ್ ಹಾಕುತ್ತಾರೆ. ಆದಾಗ್ಯೂ ಅವರ ಮುಖದಲ್ಲಿ ಅಸಮಾಧಾನ ಇರೋದು ಕಂಡುಬಂತು. ಕೊನೆಗೆ ವಾದ ಮಾಡುವುದನ್ನು ನಿಲ್ಲಿಸಿದರು. ಅಲ್ಲಿಗೆ ಕಿತ್ತಾಟ ಕೊನೆ ಆಯಿತು.

ಪಂದ್ಯ ಸೋತ ಬಳಿಕ ಮಾತನಾಡಿದ ಹಾರ್ದಿಕ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಮಯದಲ್ಲಿ ನಾನು ಹೇಳಲು ಏನೂ ಉಳಿದಿಲ್ಲ. ನಮ್ಮಲ್ಲಿ ಏನು ಕೊರತೆಯಿದೆ ಎಂದು ನೋಡಬೇಕು. ನಾವು ಕುಳಿತು ಆ ಬಗ್ಗೆ ಯೋಚಿಸುತ್ತೇವೆ. ನಾವು ಮುಂದೆ ಏನು ಮಾಡಬಹುದು ಎಂದು ನೋಡುತ್ತೇವೆ’ ಎಂದು ಪಂದ್ಯದ ನಂತರ ಹೇಳಿದರು.

ಇದನ್ನೂ ಓದಿ: ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ

ಹಾರ್ದಿಕ್ ಪಾಂಡ್ಯ ವರ್ತನೆ ಬಗ್ಗೆ ತಂಡದಲ್ಲೇ ಅಸಮಾಧಾನ ಇದೆ ಎನ್ನಲಾಗಿದೆ. ಇದು ಹೀಗೆಯೇ ಮುಂದುವರಿದರೆ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿಸಬಹುದು. ಮೇಜರ್ ಆಪರೇಷನ್ ಆಗದೇ ಇದ್ದರೆ ಸೋಲು ಹೀಗೆಯೇ ಮುಂದುವರಿಯಲಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *