ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರು, ಮಾರ್ಚ್​ 28: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ (Drugs) ದಾಸ್ತಾನು ಪತ್ತೆ ಮಾಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಆಸ್ಪತ್ರೆ ಬಳಿಯೇ ನಡೀತಿತ್ತು ಚಟುವಟಿಕೆ

ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಆರೋಪಿಗಳಾಗಿದ್ದು, ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು ಸಂಗ್ರಹಣೆ ನಡೆಸಲಾಗುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದಾಸನಪುರ ಗ್ರಾಮದಲ್ಲಿ ಇರುವ ಪಕ್ಕದ ಆಸ್ಪತ್ರೆ ಕಾವಲ್‌ನಲ್ಲಿ ಇದ್ದ ಒಂಟಿ ಮನೆಯಲ್ಲಿ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹುಣಸೂರು ಟೌನ್ ರೆಹಮತ್ ಮೊಹಲ್ಲಾ ನಿವಾಸಿಯ ಶೆಡ್‌ನಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ.

ಪೊಲೀಸರು ಜಪ್ತು ಮಾಡಿದ ವಸ್ತುಗಳು

ಪೊಲೀಸರು 7.35 ಕೆ.ಜಿ ತೂಕದ ಮೆಫೆಡ್ರೋನ್ ಮತ್ತು 41 ಕೆ.ಜಿ ತೂಕದ ಡ್ರಗ್ಸ್ ಪ್ರಿಕರ್ಸರ್ ವಸ್ತುಗಳನ್ನು ವಶಪಡಸಿಕೊಂಡಿದ್ದು, ಒಟ್ಟು 48 ಕೆ.ಜಿ ತೂಕದ ಡ್ರಗ್ಸ್ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಈ ರೀತಿಯಾಗಿ ಸಿಂಥೆಟಿಕ್ ಡ್ರಗ್ಸ್ ತಯಾರಣೆ ಮತ್ತು ವಿತರಣೆ ಮಾಡುತ್ತಿದ್ದಂತೆ ಪೊಲೀಸರು ವರದಿ ನೀಡಿದ್ದಾರೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *