ಮೈಸೂರು, ಮೇ 7: ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 7) ಬೆಳಗ್ಗೆ ನಗರದ ಸುಪ್ರಸಿದ್ಧ ಮೈಲಾರಿ ಹೋಟೆಲ್ಗೆ ಭೇಟಿ ನೀಡಿ ದೋಸೆ, ಇಡ್ಲಿ ಸವಿದರು. ಈ ವೇಳೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಸ್ಥಳೀಯ ನಾಯಕರು ಸಿಎಂಗೆ ಸಾಥ್ ನೀಡಿದರು. ಹೋಟೆಲ್‌ನಲ್ಲಿ ದೋಸೆ ಹಾಗೂ ಇಡ್ಲಿ ಸವಿದ ಸಿದ್ದರಾಮಯ್ಯ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಮುಖ್ಯಮಂತ್ರಿಗಳು ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಸ್ಮರಣಾರ್ಥ ಮಹತ್ವದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದರು. ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಮುಂಭಾಗದಲ್ಲಿ ‘ಸಮತಾ ಟ್ರಸ್ಟ್’ ವತಿಯಿಂದ ಉಚಿತ ಸೇವೆಗಾಗಿ ಮೀಸಲಿಡಲಾದ ಎರಡು ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
