ಮೊಜ್ತಬಾ ಖಮೇನಿ ಮೃತಪಟ್ಟರೆ ಯಾರಾಗಲಿದ್ದಾರೆ ಇರಾನ್ ಸುಪ್ರೀಂ ನಾಯಕ? – Kannada News | Who Will be Irans Supreme Leader If Mojtaba Khamenei Dies

ಟೆಹ್ರಾನ್, ಆಗಸ್ಟ್ 8: ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ನಂತರ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದ ಮೊಜ್ತಬಾ ಖಮೇನಿ (Mojtaba Khamenei) ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ. ಇಸ್ರೇಲಿ ಮಾಧ್ಯಮ ಸಂಸ್ಥೆ ‘ಚಾನೆಲ್ 14’ ಈ ಬಗ್ಗೆ ವರದಿ ಮಾಡಿದ್ದರೆ, ಇತರ ಕೆಲವು ವರದಿಗಳು ಅವರ ಸಾವು ಶೀಘ್ರದಲ್ಲೇ ಸಂಭವಿಸಬಹುದು ಎಂದು ಹೇಳಿವೆ. ಅಧಿಕಾರ ವಹಿಸಿಕೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅವರೇನಾದರೂ ಮೃತಪಟ್ಟರೆ ಇರಾನ್​ ದೇಶದಲ್ಲಿ ಮುಂದಿನ ಸುಪ್ರೀಂ ನಾಯಕ ಯಾರು ಆಗಲಿದ್ದಾರೆ? ಎಂಬ ಪ್ರಶ್ನೆಯನ್ನು ಈ ವರದಿಗಳು ಹುಟ್ಟುಹಾಕಿವೆ.

ಇರಾನ್ ಸಂವಿಧಾನದ 111ನೇ ವಿಧಿಯ ಪ್ರಕಾರ, ಸುಪ್ರೀಂ ನಾಯಕ ಮೃತಪಟ್ಟರೆ, ರಾಜೀನಾಮೆ ನೀಡಿದರೆ ಅಥವಾ ಕಾರ್ಯನಿರ್ವಹಿಸಲು ಅಸಮರ್ಥರಾದರೆ, ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ತಾತ್ಕಾಲಿಕ ನಾಯಕತ್ವ ಮಂಡಳಿ ಅಧಿಕಾರ ವಹಿಸಿಕೊಳ್ಳುತ್ತದೆ. ಈ ಮಂಡಳಿಯು ಮೂರು ಸದಸ್ಯರನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಇರಾನ್ ಅಧ್ಯಕ್ಷ (ಪ್ರಸ್ತುತ ಮಸೌದ್ ಪೆಝೇಶ್ಕಿಯನ್), ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥ (ಪ್ರಸ್ತುತ ಗುಲಾಮ್-ಹುಸೇನ್ ಮೊಹ್ಸೇನಿ-ಎಜೆ), ಗಾರ್ಡಿಯನ್ ಕೌನ್ಸಿಲ್‌ನಿಂದ ಆಯ್ಕೆಯಾದ ಒಬ್ಬರು ಧಾರ್ಮಿಕ ನ್ಯಾಯಶಾಸ್ತ್ರಜ್ಞರನ್ನು ಈ ಸಮಿತಿ ಒಳಗೊಂಡಿರುತ್ತದೆ.

ಮುಂದಿನ ಸುಪ್ರೀಂ ನಾಯಕನನ್ನು ಆಯ್ಕೆ ಮಾಡುವವರು ಯಾರು?:

88 ಸದಸ್ಯರನ್ನು ಒಳಗೊಂಡ ‘ಆಕ್ಸ್‌ಫರ್ಡ್ ಆಫ್ ಎಕ್ಸ್‌ಪರ್ಟ್ಸ್’ (Assembly of Experts) ಮಂಡಳಿಯು ಇರಾನ್‌ನ ಸುಪ್ರೀಂ ನಾಯಕನನ್ನು ಆಯ್ಕೆ ಮಾಡುವ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೊಂದಿದೆ. ಸೇನೆ, ನ್ಯಾಯಾಂಗ, ವಿದೇಶಾಂಗ ನೀತಿ ಸೇರಿದಂತೆ ದೇಶದ ಎಲ್ಲಾ ಪ್ರಮುಖ ರಂಗಗಳ ಮೇಲೆ ಈ ಹುದ್ದೆಯು ಅಪಾರ ಅಧಿಕಾರ ಹೊಂದಿರುವುದರಿಂದ, ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯು ಅತ್ಯಂತ ನಿರ್ಣಾಯಕವಾಗಲಿದೆ.

ರೇಸ್‌ನಲ್ಲಿರುವ ಪ್ರಮುಖ ಅಭ್ಯರ್ಥಿಗಳು ಯಾರು?:

ಆಯತೊಲ್ಲಾ ಅಲಿರೆಝಾ ಅರಾಫಿ: ಗಾರ್ಡಿಯನ್ ಕೌನ್ಸಿಲ್‌ನ ಹಿರಿಯ ಸದಸ್ಯ ಹಾಗೂ ಪ್ರಭಾವಿ ಧಾರ್ಮಿಕ ಮುಖಂಡರಾಗಿರುವ ಅರಾಫಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ

ಆಯತೊಲ್ಲಾ ಹಶೇಮ್ ಹುಸೇನಿ ಬುಶೆಹ್ರಿ: ಧಾರ್ಮಿಕ ಕೇಂದ್ರವಾದ ಕುಮ್ ನಗರದಲ್ಲಿ ತೀವ್ರ ಪ್ರಭಾವ ಹೊಂದಿರುವ ಇವರು ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ನಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿದ್ದಾರೆ.

ಗುಲಾಮ್-ಹುಸೇನ್ ಮೊಹ್ಸೇನಿ-ಎಜೆ: ಇರಾನ್‌ನ ಪ್ರಸ್ತುತ ನ್ಯಾಯಾಂಗ ಮುಖ್ಯಸ್ಥರಾಗಿರುವ ಇವರು ಕಠಿಣ ನಿಲುವಿನ ನಾಯಕರೆಂದು ಗುರುತಿಸಿಕೊಂಡಿದ್ದಾರೆ.

ಹಸನ್ ಖಮೇನಿ: ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಆಯತೊಲ್ಲಾ ರೂಹೊಲ್ಲಾ ಖಮೇನಿ ಅವರ ಮೊಮ್ಮಗನಾದ ಇವರ ಹೆಸರೂ ಸಹ ಚರ್ಚೆಯಲ್ಲಿದೆ.

ಒಂದುವೇಳೆ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಒಬ್ಬನೇ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, ಸಂವಿಧಾನದ ಚೌಕಟ್ಟಿನಲ್ಲಿ ‘ನಾಯಕತ್ವ ಮಂಡಳಿ’ಯ ಮೂಲಕ ಸಾಮೂಹಿಕ ನಾಯಕತ್ವ ನೀಡುವ ವ್ಯವಸ್ಥೆಯನ್ನೂ ಮಾಡಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *