ಟಾಲಿವುಡ್ ನಟ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೇಲ ತಮ್ಮ 14ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡಿರುವ ದಂಪತಿ, ತಮ್ಮ ನವಜಾತ ಅವಳಿ ಮಕ್ಕಳಾದ ಶಿವ್ರಾಮ್ ಮತ್ತು ಅನ್ವೀರಾ ದೇವಿ ಅವರ ಮೊದಲ ಝಲಕ್ ಅನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿದ್ದಾರೆ.
ಈ ಮೊದಲು ರಾಮ್ ಚರಣ್-ಉಪಾಸನಾ ದಂಪತಿಗೆ ಕ್ಲಿನ್ ಕಾರ ಹೆಸರಿನ ಮಗಳಿದ್ದಳು. ಕಳೆದ ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಪೋಷಕರಾದರು. ಒಂದು ಗಂಡಾದರೆ, ಮತ್ತೊಂದು ಹೆಣ್ಣು. ಈಗ ದಂಪತಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್
ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಜಂಟಿಯಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳ ಮುಖವನ್ನು ಪೂರ್ತಿಯಾಗಿ ತೋರಿಸುವ ಬದಲು, ಅವರು ವಿಭಿನ್ನವಾದ ಮತ್ತು ಅರ್ಥಪೂರ್ಣವಾದ ಫೋಟೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರ ಹಿರಿಯ ಮಗಳು ಕ್ಲಿನ್ ಕಾರಾ ಹಾಗೂ ಈಗ ಜನಿಸಿರುವ ಅವಳಿ ಮಕ್ಕಳ ಪುಟ್ಟ ಪುಟ್ಟ ಕೈಗಳು ಮಾತ್ರ ಕಾಣಿಸುತ್ತಿವೆ. ಅವಳಿ ಮಕ್ಕಳ ಚಿತ್ರವನ್ನು ಈ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ಇದೇ ಮೊದಲು.
ಭಾವನಾತ್ಮಕ ಸಾಲುಗಳು:
ಈ ಮುದ್ದಾದ ಫೋಟೋದೊಂದಿಗೆ ‘ಮನಸ್ಸು ತುಂಬಿ ಬಂದಿದೆ’ ಎಂದು ಬರೆದುಕೊಂಡು ಇನ್ಫಿನಿಟಿ ಎಮೋಜಿಯನ್ನು ಹಾಕಿದ್ದಾರೆ. ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೆಗಾ ಫ್ಯಾಮಿಲಿಯ ಈ ಹೊಸ ಸದಸ್ಯರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ ಮತ್ತು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
