ಬೆಂಗಳೂರು, ಜುಲೈ 01: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ಈ ತೆರವು ಕಾರ್ಯಾಚರಣೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ದಿ ಬದಿ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ಹಲವು ಕುಟುಂಬಗಳು ಕಂಗಾಲಾಗಿವೆ. ತೆರವು ಹಿನ್ನೆಲೆ ಓರ್ವ ವೃದ್ಧ ಮಹಿಳೆ ಗೋಳಾಡಿದ್ದಾರೆ. ‘ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ನಮಗೆ ಯಾರು ಇಲ್ಲ. ನಾನು ಈ ಕೆಲಸ ಮಾಡಿ ಮೊಮ್ಮಕ್ಕಳನ್ನು ಬೆಳಸುತ್ತಿದ್ದೇನೆ. ತನ್ನ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಈ ವ್ಯಾಪಾರವನ್ನು ಕಳೆದುಕೊಂಡರೆ ಕುಟುಂಬವನ್ನು ಹೇಗೆ ಸಲಹಬೇಕು’ ಎಂದು ವ್ಯಾಪರಿ ಅಜ್ಜಿ ಕಣೀರು ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
