ತಾಯಿಯಂತೆ ಪ್ರೀತಿಸುವ ಮತ್ತೊಂದು ಜೀವ ಇದ್ದರೆ ಅದು ಅಜ್ಜಿ (grandmother) ಮಾತ್ರ. ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ಹಿರಿಜೀವಗಳ ಮಡಿಲಿನಲ್ಲಿ ಬೆಳೆದು ದೊಡ್ಡವರಾದವರು ಅದೆಷ್ಟೋ ಮೊಮ್ಮಕ್ಕಳು.ಇದೀಗ ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತು ಮಹಿಳಾ ಫೋಟೋಗ್ರಾಫರ್ ತನ್ನ ಪೋಟೋಗ್ರಾಫಿ ಕೆಲಸ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ನವೀನ್ ಫೋಟೋಗ್ರಾಫಿ (Naveen photography) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ತನ್ನ ಮಡಿಲಿನಲ್ಲಿ ಹೊತ್ತುಕೊಂಡು ತನ್ನ ವೃತ್ತಿಯನ್ನು ನಿರ್ವಹಿಸಿದ್ದಾರೆ. ಮದುವೆ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವ ಜತೆಗೆ ಮೊಮ್ಮಗನಿಗೆ ಆಹಾರ ನೀಡುತ್ತಿರುವುದನ್ನು
ಕಾಣಬಹುದು.
ಇದನ್ನೂ ಓದಿ: ಬೀಚ್ ಕಂಡೊಡನೆ ಮೈ ಮರೆತು ಮಕ್ಕಳಂತೆ ಆಟ ಆಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟ್ಟ ಕಂದಮ್ಮ ನಿಮ್ಮ ಮೊಮ್ಮಗ ಹೇಳಿ ಶಾಕ್ ಆಯ್ತು, ನಾನು ನಿಮ್ಮದು ಮಗ ಅಂದುಕೊಂಡೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಈ ಮೊಮ್ಮಗನ ಅಜ್ಜಿಯಂತೆ ಕಾಣಲ್ಲ ಎಂದಿದ್ದಾರೆ. ಮತ್ತೊಬ್ಬರು, ಹೆಣ್ಮಕ್ಳಳೇ ಸ್ಟ್ರಾಂಗ್ ಗುರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:47 am, Wed, 22 July 26
