Headlines

ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ಇಂಟರ್ನೆಟ್​​​ನಲ್ಲಿ ವಿಡಿಯೋ ವೈರಲ್ – Kannada News | Telangana CM Revanth Reddy prepared Pooris for his grandson Video went Viral

ಹೈದರಾಬಾದ್, ಜುಲೈ 9: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಅದರಷ್ಟೇ ತಮ್ಮ ಕುಟುಂಬಕ್ಕೂ ಸಮಯ ನೀಡಲು ಪ್ರಯತ್ನಿಸುತ್ತಾರೆ. ಸಿಎಂ ರೇವಂತ್ ರೆಡ್ಡಿ ತಮ್ಮ ಮೊಮ್ಮಗನಿಗಾಗಿ ಪೂರಿ ತಯಾರಿಸಲು ಅಡುಗೆಮನೆ ಸೇರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ. ಸಿಎಂ ರೇವಂತ್ ರೆಡ್ಡಿ ಸ್ವತಃ ಅಡುಗೆಮನೆಗೆ ಹೋಗಿ ತಮ್ಮ ಮೊಮ್ಮಗನನ್ನು ಅಡುಗೆಮನೆಯ ಕಟ್ಟೆಯ ಮೇಲೆ ಕೂರಿಸಿಕೊಂಡು ಪೂರಿಗಳನ್ನು ತಯಾರಿಸುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ಮೊಮ್ಮಗನಿಗಾಗಿ ಸಮಯ ಮೀಸಲಿಟ್ಟ ಸಿಎಂ ರೇವಂತ್ ರೆಡ್ಡಿ ಸ್ವತಃ ಪೂರಿಗಳನ್ನು ಲಟ್ಟಿಸಿ, ಎಣ್ಣೆಯಲ್ಲಿ ಕರಿಯುತ್ತಿದ್ದರು. ಮೊಮ್ಮಗ ಅಲ್ಲೇ ಕುಳಿತುಕೊಂಡು ಅಜ್ಜನ ಜೊತೆ ಹರಟುತ್ತಾ ಎಂಜಾಯ್ ಮಾಡುತ್ತಿದ್ದ. ‘ಬ್ಯುಸಿ ಜೀವನದ ನಡುವೆ ಮೊಮ್ಮಗನೊಂದಿಗೆ ಪೂರಿ ಮಾಡಿ ಕಳೆದ ಕೆಲವು ಕ್ಷಣಗಳು ಇವು…’ ಎಂದು ಸಿಎಂ ರೇವಂತ್ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *