ಬೆಂಗಳೂರು, (ಜೂನ್ 24): ಕಾಲೇಜುಗಳಲ್ಲಿ ಸೀಟ್ ಮಾಫಿಯಾ ನಡೆಯುತ್ತೆ. ಅದರಲ್ಲೂ ಪ್ರಮುಖವಾಗಿ ವೈದ್ಯಕೀಯ ಕೋರ್ಸ್ (Medical Course) ಸಂಬಂಧಿಸಿದ ಮ್ಯಾನೇಜ್ಮೆಂಟ್ ಹಾಗೂ ಎನ್ಆರ್ಐ ಸೀಟ್ಗಳನ್ನು ಆಯಾ ಕಾಲೇಜಿನವರೇ ನೀಡುತ್ತಾರೆ ಎಂದು ಕೆಲವರು ಅಂದುಕೊಂಡಿದ್ದು, ಹಣ ಕೊಟ್ಟು ಮೋಸ ಹೋಗಿದವರು ಉಂಟು. ಹೀಗಾಗಿ ಈ ಬಗ್ಗೆ ಕೆಇಎ ನಿರ್ದೇಶಕ H ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದು, ಕೇವಲ ಇಂಜಿನಿಯರಿಂಗ್ ಕೋರ್ಟ್ಗೆ ಸಂಬಂಧಪಟ್ಟಂತೆ ಕೇವಲ 25 ಪರ್ಸೆಂಟ್ ಮ್ಯಾನೇಜ್ಮೆಂಟ್ ಕೋಟಾಕ್ಕೆ ಅವಕಾಶ ಇದೆ. ಆದ್ರೆ, ಮೆಡಿಕಲ್, ಡೆಂಟಲ್, ಆಯುಷ್ಗೆ ಸಂಬಂಧಿಸಿದಂತೆ ಎಂಎನ್ಸಿ ಪ್ರಕಾರ, ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀಟ್ ರ್ಯಾಂಕ್ ಆಧರಿಸಿ ಕೆಇಎ ಮುಖಾಂತರ ಸೀಟ್ ಅಲರ್ಟ್ ಆಗುತ್ತವೆ. ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟು ಕೊಡಿಸುತ್ತೇನೆ ಎಂದು ಹೇಳುವವರ ಬಗ್ಗೆ ಹುಷಾರ್ ಆಗಿರಿ ಎಂದು ಮಾಹಿತಿ ನೀಡಿದ್ದಾರೆ.
