ಮೋಹನ್​​ಲಾಲ್​ ಚಿತ್ರಕ್ಕೆ ಶಾಕ್; ಕೇವಲ 3.5 ಲಕ್ಷ ಗಳಿಸಿದ ಸಿನಿಮಾ – Kannada News | Mohanlal’s Drishyam 2 Flop: Why its Kerala Theater Re release Earned Just three and half Lakh

ಮೋಹನ್​ಲಾಲ್ (Mohanlal) ಅವರು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತವೆ. ಆದರೆ, ಈಗ ಕೇರಳದಲ್ಲಿ ರಿಲೀಸ್ ಆಗಿರುವ ಸಿನಿಮಾ ಒಂದು ಕೇವಲ 3.5 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಇದು ಇಡೀ ಚಿತ್ರತಂಡಕ್ಕೆ ಶಾಕಿಂಗ್ ಎನಿಸಿದೆ. ಸಿನಿಮಾದ ಸ್ಥಿತಿ ಈ ಮಟ್ಟ ತಲುಪಲು ಒಂದು ಪ್ರಮುಖ ಕಾರಣ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ರೀತಿ ಹೀನಾಯ ಕಲೆಕ್ಷನ್ ಮಾಡಿದ ಚಿತ್ರ ‘ದೃಶ್ಯಂ 2’. ಜೀತು ಜೊಸೆಫ್ ನಿರ್ದೇಶನದ ಈ ಚಿತ್ರ ಕೊವಿಡ್ ಸಮಯದಲ್ಲಿ ಒಟಿಟಿಯಲ್ಲಿ ನೇರವಾಗಿ ತೆರೆಗೆ ಬಂತು. ಈಗ ಈ ಸರಣಿಯ 3ನೇ ಪಾರ್ಟ್ ಮೇ 21ರಂದು​ ತೆರೆಗೆ ಬರುತ್ತಿದೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಅದಕ್ಕೂ ಮೊದಲು ‘ದೃಶ್ಯಂ 2’ ಚಿತ್ರವನ್ನು ಥಿಯೇಟರ್​​​ನಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಅದನ್ನು ಅನುಷ್ಠಾನಕ್ಕೂ ತರಲಾಯಿತು.

ಆದರೆ, ‘ದೃಶ್ಯಂ 2’ ಚಿತ್ರ ಗಳಿಕೆ ಮಾಡಿದ್ದು ಕೇವಲ 3.5 ಲಕ್ಷ ರೂಪಾಯಿ ಮಾತ್ರ. ಇದು ತಂಡಕ್ಕೆ ಹೊರೆಯಾಗಿದೆ. ಕೇರಳದಲ್ಲಿ ಚುನಾವಣೆ ಕಾವು ಜೋರಾಗಿತ್ತು. ಅಲ್ಲದೆ, ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಲಭ್ಯವಿದ್ದು, ಅನೇಕರು ಇದನ್ನು ವೀಕ್ಷಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಜನರು ಸಿನಿಮಾನ ಥಿಯೇಟರ್​​ನಲ್ಲಿ ನೋಡಿಲ್ಲ.‘ದೃಶ್ಯಂ 3’ ಚಿತ್ರದ ಬಗ್ಗೆ ಸದ್ಯ ನಿರೀಕ್ಷೆ ಇದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಗೆಲ್ಲುವ ನಿರೀಕ್ಷೆ ಇದೆ.

‘ದೃಶ್ಯಂ’ ಹಾಗೂ ‘ದೃಶ್ಯಂ 2’ ಚಿತ್ರಗಳು ಪ್ರತಿ ಹಂತದಲ್ಲೂ ಟ್ವಿಸ್ಟ್​ಗಳು ಇದ್ದವು. ಎರಡನೇ ಪಾರ್ಟ್ ಕೊನೆಯಲ್ಲಿ ಮೂರನೇ ಪಾರ್ಟ್​ಗೆ ಕನೆಕ್ಷನ್ ನೀಡಲಾಗಿತ್ತು. ಈ ಸಿನಿಮಾದಲ್ಲೂ ಥ್ರಿಲ್ಲರ್ ಇರಲಿದೆ ಎಂದು ಅನೇಕರು ಊಹಿಸಿದ್ದರು. ಆದರೆ, ಇದು ಥ್ರಿಲ್ಲರ್ ಸಿನಿಮಾ ಅಲ್ಲ ಎಂದು ನಿರ್ದೇಶಕರು ಹೇಳಿದ್ದರು.

ಇದನ್ನೂ ಓದಿ: ‘ದೃಶ್ಯಂ 3’ ನಿರ್ಮಾಪಕರೊಟ್ಟಿಗೆ ವಿವಾದ: ಬಹಿರಂಗ ಎಚ್ಚರಿಕೆ ನೀಡಿದ ಅಮೆಜಾನ್ ಪ್ರೈಂ

‘ನಾನು ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂಬುದನ್ನು ನಿರ್ಮಾಪಕರಿಗೂ ಹೇಳಿದ್ದೇನೆ. ಇದು ಥ್ರಿಲ್ಲರ್ ಸಿನಿಮಾ ಅಲ್ಲ. ಜಾರ್ಜ್​ ಕುಟ್ಟಿ ಮತ್ತು ಕುಟುಂಬದವರಿಗೆ ಏನಾಯಿತು ಎಂಬುದಷ್ಟೇ ಚಿತ್ರದಲ್ಲಿ ಇರಲಿದೆ. ಇದನ್ನು ನಾನು ನಿರ್ಮಾಪಕರಿಗೆ ಮನದಟ್ಟು ಮಾಡಿಕೊಟ್ಟಿದ್ದೇನೆ. ಇದರಲ್ಲಿ ರಿಸ್ಕ್ ಇದೆ’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *