ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ನೀವು ಎಂದಾದರೂ ಮೌತ್ ಕೊಂಡೋಮ್ (Mouth Condoms) ಅಥವಾ ಡೆಂಟಲ್ ಡ್ಯಾಮ್ ಬಗ್ಗೆ ಕೇಳಿದ್ದೀರಾ… ಸಾಮಾನ್ಯವಾಗಿ ಈ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಇವುಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಹಾಗಾಗಿ ಈ ಬಗ್ಗೆ ತಿಳಿಯುವುದು ಬಹಳ ಉತ್ತಮವಾಗಿದೆ. ಇದೊಂದು ಲೇಟೆಕ್ಸ್‌ನಿಂದ ತಯಾರಿಸಲಾದ ತೆಳ್ಳಗಿನ ಮತ್ತು ಲವಚಿಕ ಶೀಟ್ ಆಗಿದೆ. ಇದನ್ನು ಓರಲ್ ಸಂಪರ್ಕದ ವೇಳೆ ಬಳಸಲಾಗುತ್ತದೆ, ಇದರಿಂದ ಬಾಯಿ ಮತ್ತು ಚರ್ಮದ ನಡುವೆ ನೇರ ಸಂಪರ್ಕವಾಗುವುದನ್ನು ತಡೆಯಬಹುದು. ಇದರ ಮುಖ್ಯ ಉದ್ದೇಶ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ, ಇದು ರಕ್ಷಾಕವಚದಂತೆ ಕಾರ್ಯನಿರ್ವಹಿಸಿ ದೇಹದ ದ್ರವಗಳು ಅಥವಾ ಸೋಂಕಿತ ಚರ್ಮದ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಸಹಾಯವಾಗುತ್ತದೆ. ಅದರಲ್ಲಿಯೂ ಸುರಕ್ಷಿತ ವಿಧಾನಗಳನ್ನು ಅನುಸರಿಸಲು ಬಯಸುವವರಿಗೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಹಾಗಾದರೆ ಮೌತ್ ಕೊಂಡೋಮ್ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಂದ ರಕ್ಷಣೆ ನೀಡುತ್ತದೆಯೇ, ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಿಸಬಹುದೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೌತ್ ಕೊಂಡೋಮ್ HPV ವೈರಸ್‌ನಿಂದ ರಕ್ಷಿಸುತ್ತದೆಯೇ?

ತಜ್ಞರ ಪ್ರಕಾರ, ಹ್ಯೂಮನ್ ಪ್ಯಾಪಿಲೋಮಾವೈರಸ್ (HPV) ಇದು ಚರ್ಮದಿಂದ ಚರ್ಮ ಸಂಪರ್ಕದ ಮೂಲಕ ಹರಡುತ್ತದೆ ಮತ್ತು ಓರಲ್ ಸಂಪರ್ಕದ ಮೂಲಕವೂ ದೇಹಕ್ಕೆ ಪ್ರವೇಶಿಸಬಹುದು. ಮೌತ್ ಕೊಂಡೋಮ್ ನೇರ ಸಂಪರ್ಕವನ್ನು ತಡೆಯುವುದರಿಂದ ಈ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಇದು 100% ರಕ್ಷಣೆ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. HPV ಕೇವಲ ದ್ರವಗಳ ಮೂಲಕವಷ್ಟೇ ಅಲ್ಲ, ಚರ್ಮದ ಸಂಪರ್ಕದಿಂದಲೂ ಹರಡುತ್ತದೆ. ಹೀಗಾಗಿ, ಸುತ್ತಮುತ್ತಲಿನ ಚರ್ಮ ಸೋಂಕಿತವಾಗಿದ್ದರೆ ಅಪಾಯ ಮುಂದುವರಿಯಬಹುದು. ಆದರೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದರೆ ಸೋಂಕಿನ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇದಕ್ಕಿಂತಲೂ ಪರಿಣಾಮಕಾರಿ ರಕ್ಷಣಾ ಕ್ರಮವೆಂದರೆ HPV ಲಸಿಕೆ (ವ್ಯಾಕ್ಸಿನೇಷನ್) ತೆಗೆದುಕೊಳ್ಳುವುದಾಗಿದೆ.

ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಓರಲ್ ಕ್ಯಾನ್ಸರ್‌ ಬರುವುದಕ್ಕೆ ಹಲವು ಕಾರಣಗಳಿದ್ದು, HPV ಸೋಂಕು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮೌತ್ ಕೊಂಡೋಮ್ HPV ಹರಡುವಿಕೆಯನ್ನು ಕಡಿಮೆ ಮಾಡುವುದರಿಂದ, ಇದು ಓರಲ್ ಕ್ಯಾನ್ಸರ್‌ನ ಅಪಾಯವನ್ನು ಕೆಲವು ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ, ಇದು ನೇರವಾಗಿ ಕ್ಯಾನ್ಸರ್‌ನಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಧೂಮಪಾನ, ತಂಬಾಕು ಸೇವನೆ ಮತ್ತು ಅಸ್ವಸ್ಥ ಜೀವನಶೈಲಿ ಕೂಡ ಓರಲ್ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಕೇವಲ ಮೌತ್ ಕೊಂಡೋಮ್‌ನ ಮೇಲೆ ಅವಲಂಬಿಸದೇ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯವಾಗಿದೆ.

ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಬೇಡ ನಿರ್ಲಕ್ಷ್ಯ: ಅವಾಗಿರಬಹುದು ಬ್ರೈನ್ ಸ್ಟ್ರೋಕ್ ಮುನ್ಸೂಚನೆ!

ಬಳಸುವಾಗ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳು:

  • ಯಾವಾಗಲೂ ಹೊಸದು ಮತ್ತು ಸರಿಯಾಗಿ ಪ್ಯಾಕ್ ಮಾಡಿರುವ ಉತ್ಪನ್ನವನ್ನೇ ಬಳಸಬೇಕು
  • ಬಳಸುವ ಮೊದಲು ಇದರಲ್ಲಿ ಚಿಕ್ಕ ರಂಧ್ರಗಳಿಲ್ಲವೆಂಬುದನ್ನು ಪರಿಶೀಲಿಸಬೇಕು
  • ಒಂದು ಬಾರಿ ಬಳಸಿದ ನಂತರ ಮರುಬಳಕೆ ಮಾಡಬಾರದು
  • ಬಳಸುವಾಗ ಸರಿಯಾಗಿ ಹಿಡಿದುಕೊಂಡು ಅದು ಜಾರಿಬಿಳದಂತೆ ನೋಡಿಕೊಳ್ಳಬೇಕು
  • ಆಯಿಲ್ ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಬೇಕು
  • ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಮೌತ್ ಕೊಂಡೋಮ್‌ನ ಸಂಪೂರ್ಣ ಪ್ರಯೋಜನ ಸಿಗುತ್ತದೆ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *