
ನವದೆಹಲಿ, ಮಾರ್ಚ್ 25: ಮ್ಯೂಚುವಲ್ ಫಂಡ್ಗಳಲ್ಲಿ (Mutual Funds) ಹೂಡಿಕೆ ಮಾಡಬಹುದಾದಂತಹ ಗಿಫ್ಟ್ ಕಾರ್ಡ್ ಅಥವಾ ಗಿಫ್ಟ್ ಪಿಪಿಐ (PPI- Pre Paid Instrument) ಅನ್ನು ಹೊರತರಲು ಸೆಬಿ ಯೋಜಿಸಿದೆ. ಪಿಪಿಐ ಎಂಬುದು ಒಂದು ರೀತಿಯಲ್ಲಿ ಪ್ರೀಪೇಡ್ ಕಾರ್ಡ್. ಈ ಪ್ರೀಪೇಡ್ ಕಾರ್ಡ್ ಬಳಸಿ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಯಾರು, ಯಾರಿಗೆ ಬೇಕಾದರೂ ಈ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಕೊಡಬಹುದು.
ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?
ಯಾವುದೇ ಮ್ಯೂಚುವಲ್ ಫಂಡ್ ಸಂಸ್ಥೆಯಿಂದ ಗಿಫ್ಟ್ ಕಾರ್ಡ್ ಅಥವಾ ಪ್ರೀಪೇಡ್ ಕಾರ್ಡ್ (ಪಿಪಿಐ) ಅನ್ನು ಖರೀದಿಸಬಹುದು. ಒಂದು ಗಿಫ್ಟ್ ಕಾರ್ಡ್ನ ಮೌಲ್ಯ 10,000 ರೂ ಮೀರುವಂತಿಲ್ಲ. ಈ ಕಾರ್ಡ್ ಅನ್ನು ಖರೀದಿಸಿದವರು ಯಾರಿಗೆ ಬೇಕಾದರೂ ಗಿಫ್ಟ್ ಆಗಿ ಕೊಡಬಹುದು. ಅವರು ಕಾರ್ಡ್ ಅನ್ನು ರಿಡೀಮ್ ಮಾಡಿ ಆ ಹಣವನ್ನು ಮ್ಯೂಚುವಲ್ ಫಂಡ್ ಸಂಸ್ಥೆಯ ಯಾವುದೇ ಫಂಡ್ ಸ್ಕೀಮ್ಗಳಲ್ಲಿ ಹೂಡಿಕೆಗೆ ಬಳಸಬಹುದು. ರಿಡೀಮ್ ಮಾಡಿದ ಹಣ ಪೂರ್ಣವಾಗಿ ಹೂಡಿಕೆಗೆ ಬಳಕೆ ಆಗಬೇಕು. ಅರ್ಧ ಮಾತ್ರ ಮಾಡುತ್ತೇನೆ, ಸ್ವಲ್ಪ ಮಾಡುತ್ತೇನೆ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ. ಇದೆ ಸೆಬಿ ಮುಂದಿರುವ ಪ್ರಸ್ತಾವವಾಗಿದೆ.
ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?
ಪ್ರಸ್ತಾವಿತ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಸ್ಕೀಮ್ ಬಗ್ಗೆ
- ಗಿಫ್ಟ್ ಪಿಪಿಐನ ಗರಿಷ್ಠ ಮೌಲ್ಯ 10,000 ರೂ ಇರಬಹುದು.
- ಒಂದು ವರ್ಷದಲ್ಲಿ ಒಂದು ಮ್ಯೂಚುವಲ್ ಫಂಡ್ ಸಂಸ್ಥೆಯಲ್ಲಿ ಈ ರೀತಿ ಗಿಫ್ಟ್ ಕಾರ್ಡ್ಗಳ ಮೂಲಕ ಗರಿಷ್ಠ 50,000 ರೂ ಹೂಡಿಕೆಗೆ ಮಾತ್ರ ಅವಕಾಶ ಇರುತ್ತದೆ.
- ಈ ಗಿಫ್ಟ್ ಕಾರ್ಡ್ ಅಥವಾ ಪಿಪಿಐ ಒಂದು ವರ್ಷದವರೆಗೆ ಮಾನ್ಯವಿರುತ್ತದೆ. ಅದನ್ನು ಬಳಸದಿದ್ದರೆ ಖರೀದಿದಾರರಿಗೆ ಹಣ ಮರಳುತ್ತದೆ.
- ಗಿಫ್ಟ್ ಕಾರ್ಡ್ನಿಂದ ಕ್ಯಾಷ್ ಪಡೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್ ಯುನಿಟ್ಗಳನ್ನು ಮಾತ್ರವೇ ಖರೀದಿಸಬಹುದು.
- ಗಿಫ್ಟ್ ಕಾರ್ಡ್ ಬಳಸುವ ವ್ಯಕ್ತಿಯ ಹೆಸರಿನಲ್ಲೇ ಹೂಡಿಕೆ ಆಗಬೇಕು.
- ಗಿಫ್ಟ್ ಕಾರ್ಡ್ನ ಎಲ್ಲಾ ಹಣವೂ ಮ್ಯೂಚುವಲ್ ಫಂಡ್ ಯುನಿಟ್ಗಳ ಖರೀದಿಗೆ ಬಳಕೆ ಆಗಬೇಕು.
- ಗಿಫ್ಟ್ ಕಾರ್ಡ್ಗಳನ್ನು ನೀಡಲು ಆಗುವ ವೆಚ್ಚವನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳೇ ಭರಿಸಬೇಕು. ಹೂಡಿಕೆದಾರರಿಂದ ಈ ವೆಚ್ಚ ಭರಿಸುವಂತಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ