ಹಾಸನದಲ್ಲಿ ಇರುವ ಯಶ್ ತಾಯಿ (Yash Mother) ಪುಷ್ಪಾ ಅರುಣ್ಕುಮಾರ್ ಅವರ ಮನೆಯ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ದೇವರಾಜು ಎಂಬುವವರು ಕೋರ್ಟ್ ಆದೇಶದ ಮೇರೆಗೆ ಕೌಂಪೌಂಡ್ ತೆರವುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪುಷ್ಪಾ ಅರುಣ್ಕುಮಾರ್ ಪರ ಲಾಯರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ದೇವರಾಜು ಅವರು ಪಡೆದುಕೊಂಡ ಆದೇಶಕ್ಕೆ ಸಂಬಂಧಿಸಿದ ಆಸ್ತಿಯೇ ಬೇರೆ. ಈ ಆಸ್ತಿಯೇ ಬೇರೆ. ಇದರಲ್ಲಿ ಅವರು ಸ್ವಾದೀನ ಪಡೆಯಬೇಕು ಎಂದರೆ ಪ್ರತ್ಯೇಕ ಆದೇಶ ಪಡೆಯಬೇಕು. ದುರುದ್ದೇಶದಿಂದ ಅವರು ಆದೇಶ ಪಡೆದುಕೊಂಡಿದ್ದಾರೆ. ನೋಟಿಸ್ ಜಾರಿ ಆಗಿಲ್ಲ. ಅದೇ ಹಿನ್ನಲೆಯಲ್ಲಿ ನಾನು ಪ್ರಕರಣ ದಾಖಲಿಸಿದ್ದೇವೆ. ಕೊನೆ ಹಂತದಲ್ಲಿ ಈ ರೀತಿ ಮಾಡಿದ್ದಾರೆ’ ಎಂದು ಪುಷ್ಪಾ ಅರುಣ್ಕುಮಾರ್ (Pushpa Arunkumar) ಪರ ವಕೀಲರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
