ಯಾದಗಿರಿ, ಜುಲೈ 29: ಯಾದಗಿರಿ ನಗರ ಸೇರಿದಂತೆ ಹಲವು ಕಡೆ ಒಂದೂವರೆ ಗಂಟೆ ಮಳೆ ಅಬ್ಬರಿಸಿದೆ. ಆ ಮೂಲಕ ಬರದಿಂದ ಬಳಲಿ ಬೆಂಡಾಗಿದ್ದ ರೈತರಿಗೆ ಕೊಂಚ ನಿರಾಳತೆ ಮೂಡಿದೆ. ಒಣಗುವ ಹಂತಕ್ಕೆ ಬಂದಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದ್ದು, ಇತ್ತ ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಇನ್ನು ಮಳೆ ಅಬ್ಬರದಿಂದ ನಗರದ ಕೆಲ ಕಡೆ ರಸ್ತೆಗಳು ಜಲಾವೃತಗೊಂಡವು. ಯಾದಗಿರಿಯ ಕೇಂದ್ರ ಬಸ್ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣ ಹಾಗೂ ಗಾಂಧಿ ಸರ್ಕಲ್ನಲ್ಲಿ ರಸ್ತೆಗಳು ಕರೆಯಂತಾಗಿದ್ದವು. ಮಳೆ ಹೊಡೆತದಿಂದ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದ್ದರೆ, ಇತ್ತ ರೈತಾಪಿ ವರ್ಗಕ್ಕೆ ಸಂತಸ ಮನೆ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
