‘ದೇವಿ’ ಸಿನಿಮಾ ಮೂಲಕ ಯುವ ರೈತ ಚೇತನ್ ಅವರು ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಚಿತ್ರಕ್ಕೆ ಶುಭ ಹಾರೈಸಲು ರೈತರನ್ನೇ ವೇದಿಕೆಗೆ ಕರೆಸಿದ್ದು ವಿಶೇಷವಾಗಿತ್ತು. ‘ದೇಶದ ಬೆನ್ನೆಲುಬು ರೈತ ಅಂತ ಹೇಳುತ್ತಾರೆ. ಆದರೆ ಯುವ ರೈತರು ಇಂದು ವ್ಯವಸಾಯಕ್ಕೆ ಬರುತ್ತಿಲ್ಲ. ಇಂದು ನಮ್ಮ ಚೇತನ್ ಅವರು ಯುವ ರೈತ ಎಂಬ ಬಿರುದಿನೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲ ರೀತಿಯ ಶೋಷಣೆಗೆ ಒಳಪಡುವವನೇ ರೈತ. ಚೇತನ್ ಅವರು ಎಲ್ಲ ರೈತನಿಗೆ ಮಾದರಿ ಆಗಲಿ. ಎಲ್ಲ ರೈತರ ಪರವಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ. ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಆಶೀರ್ವಾದ ಇರುತ್ತದೆ’ ಎಂದು ಹಿರಿಯ ರೈತರು ಸುದ್ದಿಗೋಷ್ಠಿಯಲ್ಲಿ ಚೇತನ್ ಅವರಿಗೆ ಶುಭ ಕೋರಿದರು. ದೊಡ್ಡ ಬಜೆಟ್ನಲ್ಲಿಯೇ ಈ ಸಿನಿಮಾ ಮಾಡುತ್ತಿರುವುದಾಗಿ ಚೇತನ್ ಅವರು ಹೇಳಿದ್ದಾರೆ. ‘ದೇವಿ’ ಸಿನಿಮಾಗಾಗಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ (Bhavya Gowda) ಅವರು ನಾಯಕಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.