ಧಾರವಾಡ, (ಏಪ್ರಿಲ್ 19) : ಹಾಸ್ಮಿ ನಗರದಲ್ಲಿ ಏಪ್ರಿಲ್ 10ರ ರಾತ್ರಿ ನಡೆದಿದ್ದ ಹತ್ಯೆ ಇಡೀ ಧಾರವಾಡ (Dharwad) ಜಿಲ್ಲೆಯನ್ನೇ ಬೆಚ್ಚಿಬಿಳಿಸಿತ್ತು.ಇದೇ ಏಪ್ರಿಲ್ 24 ರಂದು ಹಸೆಮಣೆ ಏರಬೇಕಿದ್ದ ಯೂಥ್ ಕಾಂಗ್ರೆಸ್ (Youth Congress Leader) ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ನನ್ನು (fairoz Murder Case) ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಈಗಾಗಲೇ ಕೊಲೆಯಾದ 36 ಗಂಟೆಯಲ್ಲಿ 9 ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ನಂತರ ತನಿಖೆ ಮುಂದುವರೆಸಿದ ಪೊಲೀಸರಿಗೆ ಕೊಲೆಯ ಹಿಂದೆ ಹಲವು ಕೈಗಳ ಪಾತ್ರವಿರುದುವು ದೃಢವಾಗಿದ್ದು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆದ್ರೆ, ಇದೀಗ ಈ ಕೊಲೆ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡ ಶಂಕೆ ವ್ಯಕ್ತವಾಗಿದೆ. ಹೌದು… ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ( (ismail tamatgar) ಹೆಸರೂ ಕೇಳಿ ಬಂದಿದ್ದು, ಈತನ ಬಂಧನಕ್ಕೆ ಪೊಲೀಸರು ತಂಡಗಳು ಬಲೆ ಬೀಸಿವೆ.
ಕೊಲೆ ಪ್ರಕರಣದಲ್ಲಿ ಇಸ್ಮಾಯಿಲ್ ತಮಟಗಾರ್ ಪಾತ್ರವೂ ಇದೆ ಅನ್ನೋದಕ್ಕೆ ಹಲವಾರು ಆಡಿಯೋಗಳು ಸಾಕ್ಷಿಯಾಗಿವೆ ಎಂದು ಫೈರೋಜ್ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ನೇರವಾಗಿ ಈ ಕೊಲೆಯ ಹಿಂದೆ ತಮಟಗಾರ್ ಇದ್ದಾನೆ ಅಂತಾನೂ ಹೇಳಿದ್ದರು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಇಸ್ಮಾಯಿಲ್ ತಮಟಗಾರ್ ಗಾಗಿ ತಲಾಶ್ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರು ಅರೆಸ್ಟ್, ಕೊಲೆ ರಹಸ್ಯ ಬಯಲು
ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ?
ಈ ಪ್ರಕರಣ ಸಂಬಂಧ ಪೊಲೀಸರು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಮೈನುದ್ದೀನ್, ಸಾಗರ್, ಅಲ್ಲಾವುದ್ದೀನ್ ಎಂಬುವರನ್ನ ಬಂಧಿಸಿದ್ದಾರೆ. ಇನ್ನು ಇದೀಗ ಈ ಪ್ರಕರಣದಲ್ಲಿ ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ನ ಹೆಸರೂ ಕೇಳಿ ಬಂದಿದ್ದು, ಆತನ ಬಂಧನಕ್ಕೆ ಪೊಲೀಸರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಆದ್ರೆ, ಇಸ್ಲಾಯಿಲ್ ತಮಟಗಾರ್ ವಿಶೇಶಕ್ಕೆ ಪರಾರಿಯಾಗಿವ ಶಂಕೆ ವ್ಯಕ್ತವಾಗಿದೆ.
ಇಸ್ಮಾಯಿಲ್ ಮನೆ ಹಾಗೂ ಅಂಜುಮನ್ ಸಂಸ್ಥೆಗೆ ಸರ್ಚ್ ವಾರಂಟ್ ನೀಡಿದ್ದಾರೆ. ಸದ್ಯ ನೆರೆಯ ಗೋವಾ, ಹೈದ್ರಾಬಾದ್, ಮುಂಬೈನಲ್ಲಿ ಇಸ್ಮಾಯಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಮನೆಗೆ ಸರ್ಚ್ ವಾರಂಟ್ ನೀಡುತ್ತಿದ್ದಂತೆಯೇ ಇಸ್ಮಾಯಿಲ್ ತಮಟಗಾರ್ ವಿದೇಶಕ್ಕೆ ಹಾರಿರುವ ಅನುಮಾನ ಮೂಡಿದೆ. ಸದ್ಯ ಪೊಲೀಸರು ವಿದೇಶಕ್ಕೂ ಒಂದು ತಂಡ ಕಳುಹಿಸಿ ಇಸ್ಮಾಯಿಲ್ ನನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಫೈರೋಜ್ ಕೊಲೆ ಪ್ರಕರಣದ ತನಿಖೆ ಮುಂದುವರೆಸಿದಂತೆ ಆರೋಪಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಾಗಿ ನಾಲ್ಕು ತಂಡ ರಚಿಸಿ ಹುಡುಕಾಟ ನಡೆಸಿದ್ದಾರೆ. ಪ್ರಮುಖ ಆರೋಪಿ ಇಸ್ಮಾಯಿಲ್ ತಮಟಗಾರ್ ಬಂಧನದ ಬಳಿಕ ಕೊಲೆಯ ರಹಸ್ಯ ಬಯಲಾಗಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
